twitter
    For Quick Alerts
    ALLOW NOTIFICATIONS  
    For Daily Alerts

    ಆಸ್ಕರ್ ಗೆದ್ದರೂ ಕುಡಕರ ಚರ್ಯೆ ಬದಲಾಗೋಲ್ಲ

    By Mahesh
    |

    ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ನಟ ನಿಕೋಲಾಸ್ ಕೇಜ್‌ನನ್ನು ಪೊಲೀಸರು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ ಘಟನೆ ಅಮೆರಿಕದ ಅರ್ಲೆನ್ಸ್‌ನಲ್ಲಿ ನಡೆದಿದೆ. ಹಾಲಿವುಡ್ ಆದರೇನು ಬಾಲಿವುಡ್ ಆದರೇನು ಕುಡುಕರ ಚರ್ಯೆ ಎಲ್ಲೆಡೆ ಒಂದೇ ಬಗೆ ಎಂಬುದಕ್ಕೆ ಇದು ನಿದರ್ಶನವಾಗಿದೆ. ನಿಕೋಲಾಸ್ ಕೇಜ್ ಪ್ರತಿಭಾವಂತ ನಟ ನಿಜ. ಆದರೆ, ಆತನ ಇತ್ತೀಚಿನ ಕುಡಿತ ರಂಪಾಟಗಳನ್ನು ಕಂಡ ಆಪ್ತರು ಪುನರ್ವಸತಿ ಕೇಂದ್ರದಲ್ಲಿ ಒಂದಷ್ಟು ದಿನ ರೆಸ್ಟ್ ತಗೋ ಮಾರಾಯ ಎಂದಿದ್ದಾರೆ.

    ರೈಸಿಂಗ್ ಅರಿಜೋನಾ, ದ ರಾಕ್, ಫೇಸ್ ಆಫ್, ಗಾನ್ ಇನ್ 60 ಸೆಕೆಂಡ್ಸ್, ಗೋಸ್ಟ್ ರೈಡರ್, ಕಿಕ್ ಆಸ್ ಚಿತ್ರಗಳಲ್ಲಿ ನಟಿಸಿರುವ ಕೇಜ್, ಅಕಾಡೆಮಿ ಪ್ರಶಸ್ತಿ ಗಳಿಸಿದ ಯುವ ನಟ ಎಂಬ ಸಾಧನೆ ಮಾಡಿದ್ದಾರೆ. ಆದರೆ, ಆರ್ಥಿಕ ಹೊಡೆತಕ್ಕೆ ಸಿಕ್ಕ ಕೇಜ್ ಮನೆ ಮಠ ಕಳೆದುಕೊಂಡು ತತ್ತರಿಸಿದ್ದ ಕೇಜ್ ಸುಧಾರಿಸಲೇ ಇಲ್ಲ. ಹಾದಿ ಬೀದಿ ರಂಪಾಟದಲ್ಲಿ ಸಿಲುಕಿ ಅನೇಕ ಬಾರಿ ಪೊಲೀಸರಿಗೆ ದಂಡ ತೆತ್ತಿದ್ದಾನೆ ಕೂಡಾ.

    ಕುಡಿದ ಮತ್ತಿನಲ್ಲಿದ್ದ ನಿಕೋಲಾಸ್ ಬೇರೊಂದು ಅಪಾರ್ಟ್‌ಮೆಂಟ್‌ನಲ್ಲಿ ನಿಂತು ಇದು ನಮ್ಮದೇ ಮನೆ ಎಂದಾಗ, ಪತ್ನಿ ಇದಲ್ಲ ಎಂದು ಹೇಳಿದ್ದಾಳೆ. ಆದರೆ, ಇದರಿಂದ ಕೆರಳಿದ ಆತ ಆಕೆಯನ್ನು ನಿಂದಿಸಿ ಹಲ್ಲೆ ನಡೆಸಿದ್ದಾನೆ. ಇದು ಸಾಲದೆ ತಡೆಯಲು ಬಂದ ಕ್ಯಾಬ್ ಚಾಲಕನ ಮೇಲೆಯೂ ಹಲ್ಲೆ ಎಸೆಗಿದ್ದಾನೆ. ಅಲ್ಲಿ ಪಾರ್ಕ್ ಮಾಡಿದ್ದ ವಾಹನಗಳ ಮೇಲೆಯೂ ಪ್ರತಾಪ ತೋರಿಸಿದ್ದಾನೆ. ಚಾಲಕ ನೀಡಿದ ದೂರಿನಂತೆ ಪೊಲೀಸರು ಕೇಜ್‌ನನ್ನು ಪೊಲೀಸರು ಬಂಧಿಸಿದ್ದರು.

    ಬೆಚ್ಚಿ ಬೀಳಿಸುವ ಅಂಕಿ ಅಂಶ: 12 ರಿಂದ 14 ಮಿಲಿಯನ್ ನಷ್ಟು ಜನ ಕುಡಿತ ಚಟಕ್ಕೆ ಬಿದ್ದು ಹಾಳಾಗಿದ್ದಾರೆ. ಸುಮಾರು 1.3 ಮಿಲಿಯನ್ ಮಹಿಳೆಯರು ಹಾಗೂ 835,000 ಪುರುಷರು ಕೌಟುಂಬಿಕ ಕಲಹದಲ್ಲಿ ಭಾಗಿಗಳಾಗಿ ವಿಚ್ಛೇದನದ ಹಂತ ತಲುಪಿದ್ದಾರೆ. ಹಾಲಿವುಡ್ ನಟ ನಟಿಯರು ಕೂಡಾ ಅನೇಕ ಬಾರಿ ಉಗ್ರ ಪ್ರತಾಪಿಗಳಾಗಿ ಕುಡಿದು ತೂರಾಡಿ ಸುದ್ದಿಗ್ರಾಸವಾಗಿದ್ದಾರೆ. Drive Angry ನಟ ಕೇಜ್ ಪುನರ್ವಸತಿ ಕೇಂದ್ರಕ್ಕೆ ಸೇರಿ ಮಾನಸಿಕ ನೆಮ್ಮದಿ ಪಡೆದು ಮತ್ತೆ ನಟನೆಗೆ ಮರಳಲಿ ಎಂದು ಅವರ ಅಭಿಮಾನಿಗಳು ಆಶಿಸಿದ್ದಾರೆ.

    English summary
    Hollywood Actor Oscar winner Nicolas Cage got bail from Domestic Abuse case but, problem is more serious as domestic violence, Alcoholism stats say.
    Monday, April 18, 2011, 17:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X