»   » ಕನ್ನಡಕ್ಕೆ ಹ್ಯಾರಿ ಪಾಟರ್ ನೋ ಎಂಟ್ರಿ..!

ಕನ್ನಡಕ್ಕೆ ಹ್ಯಾರಿ ಪಾಟರ್ ನೋ ಎಂಟ್ರಿ..!

Posted By: * ಮಹೇಶ್ ಎಂ ಆರ್
Subscribe to Filmibeat Kannada

ರೋಮಾಂಚನಕಾರಿ ಸಾಹಸಗಳಿಂದ ಮಕ್ಕಳಿಗೆ ಅಚ್ಚುಮೆಚ್ಚಾಗಿದ್ದ ಹ್ಯಾರಿಪಾಟರ್ ಹೊಸ ಚಿತ್ರ ಡೆತ್ಲಿ ಹ್ಯಾಲೋಸ್ ಪಾರ್ಟ್-2 ಇದೀಗ ಬಿಡುಗಡೆಗೊಂಡಿದೆ. ವಿಶೇಷ ಅಂದರೆ ಇಂಗ್ಲೀಷ್ ಮಾತ್ರ ಅಲ್ಲದೆ ತೆಲುಗು, ತಮಿಳು, ಹಿಂದಿಯಲ್ಲೂ ಈ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಆದರೆ ಕನ್ನಡದವರಿಗೇಕೊ ಹ್ಯಾರಿ ಪಾಟರ್ ನ ತಮ್ಮ ಭಾಷೆಯಲ್ಲಿ ನೋಡಿ ಆನಂದಿಸೊ ಭಾಗ್ಯ ಬಂದಿಲ್ಲ.

ನಮ್ಮ ಕನ್ನಡದಲ್ಲಿರೊ ಡಬ್ಬಿಂಗ್ ನಿಷೇಧ ನೀತಿಯಿಂದ ಹ್ಯಾರಿ ಪಾಟರ್ ಕನ್ನಡಕ್ಕೆ ಎಂಟ್ರಿ ಕೊಡೋದು ಸಾಧ್ಯ ಆಗಿಲ್ಲ. ಇದರಿಂದ ಒಂದು ಒಳ್ಳೆಯ ಮನರಂಜನೆಯನ್ನ ಕಳೆದುಕೊಳ್ಳುತ್ತಿರೋದಂತು ಖಂಡಿತ.

ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳಿಗೆ ಅನುಮತಿಯಿಲ್ಲ. ಡಬ್ಬಿಂಗ್ ಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ. ಇರಲಿ, ಹ್ಯಾರಿ ಪಾಟರ್ ತೆಲುಗು, ತಮಿಳು, ಹಿಂದಿಗಳಿಗೆ ಡಬ್ ಆಗಿ ಕರ್ನಾಟಕದಲ್ಲಿ ಬಿಡುಗಡೆಯಾದರೆ ಓಕೆ, ಆದರೆ ಅದೇ ಚಿತ್ರ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗಲಿ ಅಂದ್ರೆ ಬೇಡ ಅಂತಾರೆ ಯಾಕೆ.?

ಇದು ನನ್ನಂಥ ಡಬ್ಬಿಂಗ್ ಪ್ರಿಯರ ಆಸೆ. ಹಾಲಿವುಡ್ ನ ಬಹುಕೋಟಿ ವೆಚ್ಚದ, ಉನ್ನತ ತಂತ್ರಜ್ನಾನ, ಗ್ರಾಫಿಕ್ಸ್ ಇರೋ ಚಿತ್ರಗಳನ್ನು ಬರೀ ಇಂಗ್ಲೀಷ್ ಬಲ್ಲವರಷ್ಟೇ ನೋಡಿ ಆನಂದಿಸಬೇಕು ಅನ್ನೋ ಹಾಗಿದೆ ನಮ್ಮ ಚಿತ್ರರಂಗದ ಈಗಿನ ನಿಯಮ. ಮಕ್ಕಳಿಗೆ ಸಕತ್ ಥ್ರಿಲ್ ಕೊಡುತ್ತಿದ್ದ ಹ್ಯಾರಿ ಪಾಟರ್ ಸಿನಿಮಾ ಕನ್ನಡದಲ್ಲಿ ಕಾಣಿಸಿಕೊಳ್ಳದೇ ಇರೋದು ಅನಿವಾರ್ಯವಾಗಿ ನಮ್ಮ ಮಕ್ಕಳನ್ನು ಬೇರೆಡೆ ನೂಕಿದಂತಾಗಿದೆ.

ಅವಕಾಶವಂಚಿತ ಕನ್ನಡದ ಮಕ್ಕಳು ಇಂಗ್ಲೀಷ್ ಸಬ್ ಟೈಟಲ್ ನಲ್ಲೋ ಅಥವಾ ಹಿಂದಿಯಲ್ಲೋ ಓದಿಕೊಂಡು ದೃಶ್ಯಗಳ ಅರ್ಥ ತಿಳಿಯಬೇಕಿದೆ ಅಷ್ಟೆ...ಸರಿ, ಈಗ ಹೇಳಿ, ಹ್ಯಾರಿ ಪಾಟರ್ ಕನ್ನಡದಲ್ಲಿ ಬೇಕಾ ಬೇಡವಾ?

English summary
Harry Potter Deathly Hallows -2 released. Available in English, Telugu, Tamil and Hindi, not in Kannada. Should Hallows be dubbed to Kannada too? Why not? argues Mahesh M R.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada