»   » ಆಸ್ಕರ್ ಪ್ರಶಸ್ತಿ 2015: ಅತ್ಯುತ್ತಮ ಚಿತ್ರ 'ಬರ್ಡ್ ಮ್ಯಾನ್'

ಆಸ್ಕರ್ ಪ್ರಶಸ್ತಿ 2015: ಅತ್ಯುತ್ತಮ ಚಿತ್ರ 'ಬರ್ಡ್ ಮ್ಯಾನ್'

Posted By:
Subscribe to Filmibeat Kannada

ಇಡೀ ಜಗತ್ತಿನ ಚಿತ್ರಪ್ರೇಮಿಗಳು ಕುತೂಹಲದಿಂದ ಎದುರು ನೋಡುತ್ತಿರುವ 87ನೇ ಆಸ್ಕರ್ ಪ್ರಶಸ್ತಿಗಳು ಭಾನುವಾರ (ಫೆ.22) ಪ್ರಕಟವಾಗಿವೆ. ಲಾಸ್ ಏಂಜಲ್ಸ್ ನಲ್ಲಿ ನಡೆದ 87ನೇ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮ ವರ್ಣರಂಜಿತವಾಗಿ ನಡೆಯಿತು.

ಈ ಬಾರಿ ಪ್ರಶಸ್ತಿಗಾಗಿ ಹಲವಾರು ಚಿತ್ರಗಳ ನಡುವೆ ಸ್ಪರ್ಧೆ ನಡೆಯಿತು. ಬಾಯ್ ಹುಡ್, ಬರ್ಡ್ ಮ್ಯಾನ್, ಅಮೆರಿಕನ್ ಸ್ನಿಪರ್, ದಿ ಥಿಯರಿ ಆಫ್ ಎವರಿಥಿಂಗ್, ದಿ ಇಮಿಟೇಷನ್ ಗೇಮ್, ದಿ ಗ್ರ್ಯಾಂಡ್ ಬುಡಾಪೆಸ್ಟ್ ಹೋಟೆಲ್ ಹಾಗೂ ಸೆಲ್ಮಾ ಈ ಬಾರಿ ಸ್ಪರ್ಧೆಯಲ್ಲಿದ್ದ ಪ್ರಮುಖ ಚಿತ್ರಗಳು.

2015 Oscar Winners: The 87th Annual Academy Awards Results

ಪಟ್ಟಿಯನ್ನೊಮ್ಮೆ ಗಮನಿಸಿ. ಈ ವರ್ಷ ನೀವು ನೋಡಿದ ಯಾವುದಾದರೂ ಹಾಲಿವುಡ್ ಚಿತ್ರ ಪ್ರಶಸ್ತಿ ಪಟ್ಟಿಯಲ್ಲಿದೆಯೇ? ಅಯ್ಯೋ ಆ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಗಬೇಕಾಗಿತ್ತು ಈ ನಟನಿಗೆ ಸಿಗಬೇಕಾಗಿತ್ತು ಅನ್ನಿಸುತ್ತಿದೆಯೇ. ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅನಿಸಿಕೆ ತಿಳಿಸಿ. ಸಂಪೂರ್ಣ ಪಟ್ಟಿ ಇಲ್ಲಿದೆ.

ಅತ್ಯುತ್ತಮ ಚಿತ್ರ: ಬರ್ಡ್ ಮ್ಯಾನ್
ಅತ್ಯುತ್ತಮ ನಟಿ: ಜ್ಯೂಲಿಯನ್ ಮೋರ್ (ಚಿತ್ರ ಸ್ಟಿಲ್ ಅಲೈಸ್)
ಅತ್ಯುತ್ತಮ ನಟ: ಎಡ್ಡಿ ರೆಡ್ ಮೈನ್ (ದಿ ಥಿಯರಿ ಆಫ್ ಎವರಿಥಿಂಗ್)
ಅತ್ಯುತ್ತಮ ನಿರ್ದೇಶಕ: ಅಲೆಜಾಂಡ್ರೋ ಜಿ ಇನಾರಿಟು (ಚಿತ್ರ ಬರ್ಡ್ ಮ್ಯಾನ್)
ಅತ್ಯುತ್ತಮ ಪೋಷಕ ನಟಿ: ಪಾಟ್ರಿಸಿಯಾ ಅರ್ಕ್ವೆಟ್ಟೆ (ಬಾಯ್ ಹುಡ್)
ಅತ್ಯುತ್ತಮ ಪೋಷಕ ನಟ: ಜೆ.ಕೆ. ಸಿಮನ್ಸ್ (ವಿಪ್ಲಾಶ್)
ಅತ್ಯುತ್ತಮ ಅನಿಮೇಟೇಡ್ ಚಿತ್ರ: ಬಿಗ್ ಹೀರೋ 6
ಅತ್ಯುತ್ತಮ ಸಾಕ್ಷ್ಯಚಿತ್ರ: ಸಿಟಿಜನ್ ಫೋರ್
ಅತ್ಯುತ್ತಮ ವಿದೇಶಿ ಭಾಷಾ ಚಿತ್ರ: ಇಡಾ (ಪೋಲಂಡ್)
ಅತ್ಯುತ್ತಮ ಸಂಕಲನ: ವಿಪ್ಲಾಶ್
ಅತ್ಯುತ್ತಮ ಧ್ವನಿ ಸಂಕಲನ: ಅಮೆರಿಕನ್ ಸ್ಲಿಪರ್
ಅತ್ಯುತ್ತಮ ಧ್ವನಿ ಮಿಕ್ಸಿಂಗ್: ವಿಪ್ಲಾಶ್
ಅತ್ಯುತ್ತಮ ವಿಶುಯಲ್ ಎಫೆಕ್ಟ್: ಇಂಟರ್ ಸ್ಟೆಲ್ಲರ್
ಅತ್ಯುತ್ತಮ ಛಾಯಾಗ್ರಹಣ: ಇಮ್ಯಾನ್ಯುಯಲ್ ಲುಬೆಜ್ ಕಿ (ಬರ್ಡ್ ಮ್ಯಾನ್)
ಅತ್ಯುತ್ತಮ ವಸ್ತ್ರವಿನ್ಯಾಸ: ಮಿಲೇನಾ ಕ್ಯಾನೆನೇರೋ (ದಿ ಗ್ರ್ಯಾಂಡ್ ಬುಡಾಪೆಸ್ಟ್ ಹೋಟೆಲ್)
ಅತ್ಯುತ್ತಮ ಮೇಕಪ್ ಹಾಗೂ ಕೇಶವಿನ್ಯಾಸ: ಫ್ರಾನ್ಸಸ್ ಹನೋನ್ ಮತ್ತು ಮಾರ್ಕ್ ಕೋಯ್ಲಿಯರ್ (ದಿ ಗ್ರ್ಯಾಂಡ್ ಬುಡಾಪೆಸ್ಟ್ ಹೋಟೆಲ್)
ಅತ್ಯುತ್ತಮ ಅನಿಮೇಷನ್ ಕಿರುಚಿತ್ರ: ಫೀಸ್ಟ್
ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ: ದಿ ಫೋನ್ ಕಾಲ್

English summary
The 87th Annual Academy Awards live from Hollywood California where the best films of 2014 battle for Oscar gold. Best Picture – Birdman or (The Unexpected Virtue of Ignorance), Best Actress – Julianne Moore, Still Alice, Best Actor – Eddie Redmayne, The Theory of Everything.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada