For Quick Alerts
  ALLOW NOTIFICATIONS  
  For Daily Alerts

  ನಗ್ನ ಚಿತ್ರದಲ್ಲಿ ಇರಾನ್ ನಟಿ, ಮುಸ್ಲಿಮರು ಕಿಡಿ ಕಿಡಿ

  By Mahesh
  |

  ಎರಡು ಮೂರು ವರ್ಷಗಳ ಹಿಂದೆ ಇರಾನಿನ ಸಂಪ್ರದಾಯವಾದಿಗಳಿಂದಲೂ ಪ್ರಶಂಸೆಗೆ ಒಳಗಾಗಿದ್ದ ಪ್ರತಿಭಾವಂತ ನಟಿ ಈಗ ನಿಷೇಧಗೊಂಡಿದ್ದಾಳೆ. ಪ್ಯಾರಿಸ್ ಮೂಲದ ಇರಾನಿಯನ್ ನಟಿ ಗೋಲ್ಶಿಫ್ತೆಹ್ ಫರಾಹಾನಿ ಒಂದು ಫ್ರೆಂಚ್ ನಿಯತಕಾಲಿಕೆಯ ನಗ್ನ ಭಂಗಿ ನೀಡಿದ ನಂತರ ತನ್ನ ತಾಯ್ನಾಡನ್ನು ಹಿಂದಿರುಗದಂತೆ ನಿಷೇಧಿಸಲಾಗಿದೆ.

  ಫರಾಹಾನಿ ನಗ್ನ ಚಿತ್ರ ಹಾಗೂ ಬಟ್ಟೆ ಕಳಚುವ ವಿಡಿಯೋ ಇಂಟರ್ ನೆಟ್ ನಲ್ಲಿ ಭರ್ಜರಿ ಬೇಡಿಕೆ ಹುಟ್ಟಿಸಿದೆ. ಇಸ್ಲಾಮಿಕ್ ಸಂಘಟನೆಗಳು, ಸಂಪ್ರದಾಯವಾಗಿ ಪರ್ಷಿಯನ್ನರು, ಇರಾನ್ನಿನ ಸಿನಿಮಾ ಸಮುದಾಯದವರು ಫರಹನಿ ವಿರುದ್ಧ ಇನ್ನೂ ಹೆಚ್ಚಿನ ಕ್ರಮ ತೆಗೆದುಕೊಳ್ಳಲು ಚಿಂತನೆ ನಡೆಸಿದ್ದಾರೆ.

  ಇರಾನ್ ಮಾನ ಹರಾಜು: ಫ್ರಾನ್ಸ್ ನ Madame Le Figaro ಮ್ಯಾಗಜೀನ್ ಗಾಗಿ ತನ್ನ ಎದೆ ತೋರಿ ನಂತರ ಕೈಗಳಿಂದ ಮುಚ್ಚಿಕೊಳ್ಳುವ ಪರಹನಿ ವಿಡಿಯೋ ಎಲ್ಲೆಡೆ ಚರ್ಚೆಗೊಳಗಾಗಿದೆ. ಆದರೆ, ಫರಾಹಾನಿ ನಗ್ನ ಚಿತ್ರ ಮೊದಲಿಗೆ ಫೇಸ್ ಬುಕ್ ನಲ್ಲಿ ಪ್ರಕಟವಾಗಿತ್ತು.

  ಗಾಯಕಿಯೂ ಆಗಿರುವ ಫರಹನಿ ಇರಾನ್ ನಲ್ಲಿ ಶಾಂತಿ ನೆಲೆಸಲಿ ಎಂದು ಸುಕೂತ್ ಎಂಬ ವಿಡಿಯೋ ಅಲ್ಬ ಹೊರ ತಂದು ಎಲ್ಲರ ಮೆಚ್ಚುಗೆ ಗಳಿಸಿದ್ದರು. ಫರಾಹಾನಿ ಈ ನಗ್ನ ಚಿತ್ರ ವಿವಾದದಿಂದಾಗಿ ಇಡೀ ಇರಾನ್ ಚಿತ್ರರಂಗವೇ ನಿಷೇಧದ ಭೀತಿ ಎದುರಿಸಬೇಕಾಗಿದೆ. ಚಿತ್ರರಂಗದಲ್ಲಿ ಇರಾನ್ನಿನ ಪ್ರತಿನಿಧಿ ಎಂದು ಗುರುತಿಸಿಕೊಂಡಿದ್ದ ಫರಹನಿಯ ಈ ಅತುರದ ನಿರ್ಧಾರದಿಂದ ಇರಾನ್ ಮಹಿಳೆಯರು ತಲೆ ತಗ್ಗಿಸುವಂತಾಗಿದೆ.

  ಬಾಡಿ ಆಫ್ ಲೈಸ್ ಚಿತ್ರದಲ್ಲಿ ಲಿಯಾನಾರ್ಡೊ ಡಿಕಾಪ್ರಿಯೋ ಜೊತೆ ನರ್ಸ್ ಆಗಿ ನಟಿಸಿದ್ದ ಫರಾಹಾನಿ, ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಮುಸುಕು ಉಡುಗೆ ತೊಟ್ಟಿಲ್ಲ ಎಂದು ಇರಾನ್ ನಲ್ಲಿ ಟೀಕಿಸಲಾಗಿತ್ತು. 2008 ರಿಂದ ಇರಾನ್ ತೊರೆದು ಫ್ರಾನ್ಸ್ ನಲ್ಲೇ ಈಕೆ ನೆಲೆಸಿದ್ದಾರೆ.

  English summary
  The nude photo of a popular Iranian actress Golshifteh Farahani, who is currently in exile in Paris, is the new sensation on the internet. Her naked act, which has challenged the Islamic and cultural taboos, has brought Iranian independent movie community under severe pressure.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X