»   »  ಅಪ್ರತಿಮ ಸಹಜ ಸುಂದರಿಯಾಗಿ ಕೇಟ್ ವಿನ್ಸ್ ಲೆಟ್

ಅಪ್ರತಿಮ ಸಹಜ ಸುಂದರಿಯಾಗಿ ಕೇಟ್ ವಿನ್ಸ್ ಲೆಟ್

Subscribe to Filmibeat Kannada
ಆಸ್ಕರ್ ಪ್ರಶಸ್ತಿ ವಿಜೇತ ಬ್ರಿಟನ್ ನಟಿ, ಟೈಟಾನಿಕ್ ಚೆಲುವೆ ಕೇಟ್ ವಿನ್ಸ್ ಲೆಟ್ ನೆನಪಿರಬೇಕಲ್ಲ. ಆಕೆ ಈಗ 'ಅಪ್ರತಿಮ ಸಹಜ ಸುಂದರಿ' ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಹಾಲಿವುಡ್ ನ ಮತ್ತೊಬ್ಬ ಸುಂದರಿ ಹೇಪ್ ಬರ್ನ್ ಅವರನ್ನು ಕೇಟ್ ವಿನ್ಸ್ ಲೆಟ್ ಹಿಂದಿಕ್ಕಿರುವುದು ವಿಶೇಷ.

''ತಿಳಿಗೆಂಪು ಬಣ್ಣದ ಈಕೆ ಯಾವುದೇ ಮೇಕಪ್ ಇಲ್ಲದ್ದರೂ ಮೋಹಕವಾಗಿ ಕಾಣಿಸುತ್ತಾರೆ'' ಎಂದು ಆಯ್ಕೆ ಸಮಿತಿ ಬಣ್ಣಿಸಿದೆ. ಈ ಸೌಂದರ್ಯ ಸ್ಪರ್ಧೆಗಾಗಿ ಮೂರು ಸಾವಿರಕ್ಕೂ ಅಧಿಕ ಪುರುಷರು ಮತ್ತು ಮಹಿಳೆಯರು ಸಮೀಕ್ಷೆ ನಡೆಸಿದ್ದರು ಎಂದು ದಿ ಸನ್ ಡಾಟ್ ಕೋ ಡಾಟ್ ಯುಕೆ ಅಂತರ್ಜಾಲ ತಾಣ ತಿಳಿಸಿದೆ.

ಮುವ್ವತ್ತ ಮೂರರ ಹರೆಯದ ಅಪ್ರತಿಮ ಸುಂದರಿ ಕೇಟ್ ವಿನ್ಸ್ ಲೆಟ್ ಹಾಲಿವುಡ್ ತಾರೆಗಳಾದ ಹೇಪ್ ಬರ್ನ್, ಕೆಲ್ಲಿ, ಚೆರ್ಲ್ ಕೋಲ್, ಏಂಜಲೀನಾ ಜೋಲಿ ಮತ್ತು ಸ್ಕಾರ್ಲೆಟ್ ಜೊಹಾನ್ಸನ್ ರ ಸೌಂದರ್ಯವನ್ನು ಹಿಂದಿಕ್ಕಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪಂಜಾಬ್ 69ನಿಂದ ಜಿಯಾ ಖಾನ್ ಔಟ್!
ಸ್ಲಂಡಾಗ್ ಮಿಲಿಯನೇರ್ ಬಾಲನಟಿ ಮಾರಾಟಕ್ಕೆ?
ಡ್ಯಾನಿ ಬಾಯ್ಲ್ ನಿರ್ದೇಶನದಲ್ಲಿ ಐಶ್ವರ್ಯ ರೈ?
ನಯನ ತಾರಾ ಸೊಂಟದ ವಿಷಯ ಬೇಡವೊ ಶಿಷ್ಯ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada