For Quick Alerts
  ALLOW NOTIFICATIONS  
  For Daily Alerts

  ಚಿರನಿದ್ರೆಗೆ ಜಾರಿದ ಚೆಲುವೆ ಎಲಿಜಬೆತ್ ಟೇಲರ್

  By Prasad
  |

  ಹಾಲಿವುಡ್ ನ ನೇರಳೆ ಕಂಗಳ ಚೆಲುವೆ, ಅತ್ಯದ್ಭುತ ಅಭಿನೇತ್ರಿ, ಎರಡು ಬಾರಿ ಅಕಾಡೆಮಿ ಪ್ರಶಸ್ತಿ ವಿಜೇತ ಎಲಿಜಬೆತ್ ಟೇಲರ್ (79) ಚಿರನಿದ್ರೆಗೆ ಜಾರಿದ್ದಾರೆ.

  ತನ್ನ ಸೌಂದರ್ಯದಿಂದಲೇ ಸಾವಿರಾರು ಹೃದಯಗಳಿಗೆ ಕನ್ನ ಹಾಕಿದ್ದ ಲಿಜ್ ಟೇಲರ್ ಹೃದಯ ಬೇನೆಯಿಂದ ಲಾಸ್ ಏಂಜಲಿಸ್ ನಲ್ಲಿರುವ ಸೀಡರ್ಸ್-ಸಿನೈ ಮೆಡಿಕಲ್ ಸೆಂಟರ್ ನಲ್ಲಿ ಕೊನೆಯುಸಿರೆಳೆದರು. ಹೃದಯದಲ್ಲಿ ರಕ್ತ ಚಲನೆಯಲ್ಲಿ ಅಡೆತಡೆ ಕಂಡುಬಂದಿದ್ದರಿಂದ ಆರು ವಾರಗಳ ಹಿಂದೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

  1960ರಲ್ಲಿ 'ಬಟರ್ ಫೀಲ್ಡ್ 8' ಮತ್ತು 1966ರಲ್ಲಿ 'ಹೂ ಈಸ್ ಆಫ್ರೇಡ್ ಆಫ್ ವರ್ಜೀನಿಯಾ ವೂಲ್ಫ್' ಚಿತ್ರಗಳಿಗಾಗಿ ಎರಡು ಬಾರಿ ಆಸ್ಕರ್ ಪ್ರಶಸ್ತಿ ಪಡೆದಿದ್ದ ಎಲಿಜಬೆತ್ ಟೇಲರ್ ವಿಕ್ಷಿಪ್ತ ಜೀವನಶೈಲಿ ಮತ್ತು ಎಂಟು ಮದುವೆಗಳಿಂದ ಹೆಚ್ಚು ಹೆಸರುವಾಸಿಯಾಗಿದ್ದರು. ಕ್ರಿಯೋಪಾತ್ರಾ ಚಿತ್ರದ ಸೆಟ್ ಮೇಲೆಯೇ ರಿಚರ್ಡ್ ಬರ್ಟನ್ ಪ್ರೇಮದ ಸೆಳೆತಕ್ಕೆ ಒಳಗಾಗಿ ಎರಡು ಬಾರಿ ಅವರನ್ನು ಮದುವೆಯಾಗಿದ್ದ ಟೇಲರ್ ಸಾಕಷ್ಟು ಗಾಸಿಪ್ ಅಂಕಣಗಳಿಗೂ ಆಹಾರವಾಗಿದ್ದರು.

  ನಟನೆಗೆ ವಿದಾಯ ಹೇಳಿದ ನಂತರ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ಅವರು ಏಡ್ಸ್ ನಿವಾರಣೆಗಾಗಿ ಸಾಕಷ್ಟು ಶ್ರಮಿಸಿದ್ದರು. ತಮ್ಮ ಸ್ನೇಹಿತ ರಾಕ್ ಹಡ್ಸನ್ ಅವರ ನಿಧನದ ನಂತರ ಎಲಿಜಬೆತ್ ಟೇಲರ್ ಏಡ್ಸ್ ಫೌಂಡೇಷನ್ ಸ್ಥಾಪಿಸಿ ತಮ್ಮ ಸಮಯ ಮತ್ತು ಹಣವನ್ನೆಲ್ಲ ಅದಕ್ಕಾಗಿ ಧಾರೆಯೆರೆದಿದ್ದರು.

  English summary
  Two time Oscar award winning hollywood actress, violet eyed beauty Elizabeth Taylor (79) died at Cedars-Sinai Medical Center in Los Angeles, America.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X