»   » ಗೆರಿಲ್ಲಾ ಯುದ್ಧ ಹರಿಕಾರ ರ್ರ್ಯ್ಯಾಂಬೋ ಮತ್ತೆ ಬಂದ

ಗೆರಿಲ್ಲಾ ಯುದ್ಧ ಹರಿಕಾರ ರ್ರ್ಯ್ಯಾಂಬೋ ಮತ್ತೆ ಬಂದ

Subscribe to Filmibeat Kannada

ರ್ರ್ಯ್ಯಾಂಬೋ ಚಿತ್ರ ಈಗಾಗಲೇ ಮೂರು ಬಾರಿ ಬೆಳ್ಳಿತೆರೆಯಲ್ಲಿ ಬಂದು ಮಿಂಚಿ ಮರೆಯಾಗಿದ್ದರು. ಆ ಚಿತ್ರದ ಸನ್ನಿವೇಶಗಳು, ಸ್ಟಾಲನ್ ನಟನೆ, ಸಾಹಸಮಯ ದೃಶ್ಯಗಳು ಜನರ ಮನಸ್ಸಿನಿಂದ ಮರೆಯಾಗಿಲ್ಲ. ಬೆಂಗಳೂರಿನಲ್ಲಿ ಇಂದು ರ್ರ್ಯ್ಯಾಂಬೋ ಚಿತ್ರದ ನಾಲ್ಕನೆ ಭಾಗ ಬಿಡುಗಡೆಗೊಂಡಿದ್ದು, 20 ವರ್ಷಗಳ ನಂತರ ಬಿಡುಗಡೆಯಾದ ರ್ರ್ಯ್ಯಾಂಬೋ ಸರಣಿಯ ಈ ಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ರ್ರ್ಯ್ಯಾಂಬೋ ಸರಣಿಯಲ್ಲಿ ಈ ಮುಂಚೆ ಬಂದ ಫಸ್ಟ್ ಬ್ಲಡ್(1982),ಫಸ್ಟ್ ಬ್ಲಡ್-2(1985)ಮತ್ತು ರ್ರ್ಯ್ಯಾಂಬೋ-3(1988) ಚಿತ್ರಗಳು ಭರ್ಜರಿ ಯಶಸ್ಸು ಕಂಡಿದ್ದವು. ಸಿಲ್ವೆಸ್ಟರ್ ಸ್ಟಾಲನ್ ಅವರ ರಾಕಿ ಚಿತ್ರದಂತೆ ರ್ರ್ಯ್ಯಾಂಬೋ ಚಿತ್ರ ಕೂಡ ಹಲವು ಸರಣಿಗಳನ್ನು ಕಾಣುತ್ತಿದೆ ಹಾಗೂ ಜನಪ್ರಿಯತೆಯನ್ನು ಗಳಿಸಿದೆ.

ಬಹುವರ್ಷಗಳ ಇತಿಹಾಸವಿರುವ ವಿಯೆಟ್ನಾಂ ಯುದ್ಧದ ಕಥೆ, ಅಲ್ಲಿನ ನಿರಾಶ್ರಿತರು, ಬುಡಕಟ್ಟು ಜನಾಂಗದವರ ತೊಂದರೆಗಳ ಕುರಿತಾದ ರ್ರ್ಯ್ಯಾಂಬೋ ಭಾಗ 4 ಚಿತ್ರಕಥೆಯನ್ನು ಡೇವಿಡ್ ಮಾರೆಲ್ ಬರೆದಿದ್ದಾರೆ. ಸಿಲ್ವೆಸ್ಟರ್ ಸ್ಟಾಲನ್(ಜಾನ್ ರ್ರ್ಯ್ಯಾಂಬೋ), ಜೂಲಿಯಾ ಬೆನ್ಜ್ (ಸಾರಾ ಮಿಲ್ಲರ್) ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಸಿಲ್ವೆಸ್ಟರ್ ಸ್ಟಾಲನ್ ನಿರ್ದೇಶಿಸಿದ್ದಾರೆ.

ರ್ರ್ಯ್ಯಾಂಬೋ ಎಂದರೆ ಯಾರು?

ಇದೆಂಥಾ ಪ್ರಶ್ನೆ ಎನಿಸಬಹುದು. ರ್ರ್ಯ್ಯಾಂಬೋ ಅಂದರೆ ಸಿಲ್ವೆಸ್ಟರ್ ಸ್ಟಾಲನ್ ಎನ್ನುವಷ್ಟರ ಮಟ್ಟಿಗೆ ಆ ಪಾತ್ರ ಜನಪ್ರಿಯವಾಗಿದೆ. ಈ ಪಾತ್ರ ಸೃಷ್ಟಿಗೆ ಕಾರಣವಾದ ಕಾಲ್ಪನಿಕ ವ್ಯಕ್ತಿ ಜಾನ್ ಜೆ. ರ್ರ್ಯ್ಯಾಂಬೋ ಹುಟ್ಟಿದ್ದು ಜುಲೈ 6, 1947 ರಂದು. ಹುಟ್ಟಿದ್ದು ಅಮೆರಿಕದಲ್ಲಾದರೂ ಈತ ಅರ್ಧ ಜರ್ಮನ್, ಇನ್ನರ್ಧ ಅಮೆರಿಕ ಮೂಲದವ(ನವಾಹೋ ಜನಾಂಗ). ಅಮೆರಿಕದ ಅರಿಜೋನಾ ಪ್ರಾಂತ್ಯದಲ್ಲಿ. ಶಾಲೆ ಬಿಟ್ಟ ಮೇಲೆ 1964ರಲ್ಲಿ ಅಮೆರಿಕದ ಸೈನ್ಯ ಸೇರಿದ ಜಾನ್‌ನನ್ನು ವಿಯಟ್ನಾಂ ಯುದ್ಧ ಭೂಮಿಗೆ 1966ರಲ್ಲಿ ಕಳಿಸಲಾಯಿತು. ಇದೇ ರೀತಿ ಮತ್ತೊಮ್ಮೆ ವಿಯೆಟ್ನಾಂ ಯುದ್ಧಕ್ಕೆಂದು ಹೋಗಿದ್ದಾಗ ಎದುರಾಳಿಯ ಕೈ ಸಿಕ್ಕಿಹಾಕಿಕೊಂಡು, ಚಿತ್ರಹಿಂಸೆಗೆ ಒಳಗಾಗಬೇಕಾಯಿತು.

ನಂತರ ಅಲ್ಲಿಂದ ತಪ್ಪ್ಪಿಸಿಕೊಂಡ ಬಂದಾಗ, ತನ್ನೂರಿನ ಜನ ತನ್ನನ್ನು ಉದಾಸೀನತನದಿಂದ ಕಾಣುವುದನ್ನು ಮನಗೊಂಡು ನಾಗರೀಕ ಜಗತ್ತಿನಿಂದ ದೂರಾಗಿ ಜೀವಿಸತೊಡಗಿದ ನಂತರ ಮತ್ತೊಮ್ಮೆ ಸೈನ್ಯದಿಂದ ಕರೆ ಬಂದು ಅಫ್ಘನ್ನರ ವಶದಲ್ಲಿದ್ದ ಕ್ಯಾಪ್ಟನ್ ಒಬ್ಬರನ್ನು ರಕ್ಷಿಸುತ್ತಾನೆ. ನಿವೃತ್ತಿಯ ನಂತರ ಬರ್ಮಾ ಗಡಿಯಲ್ಲಿ ಜೀವನ ನಡೆಸುತ್ತಿದ್ದ ರ್ರ್ಯಾಂಬೋನನ್ನು ಸಹಾಯ ಕೋರಿ, ಬಂದ ಮಿಶನರಿಗಳಿಗೆ ರ್ರ್ಯಾಂಬೋ ಉತ್ತರದಿಂದನಿರಾಶೆ ಮೂಡುತ್ತದೆ. ಕೊನೆಗೆ ಎದುರಾಳಿಗಳ ಕೈ ಮಿಶನರಿಗಳ ತಂಡ ಸೆರೆ ಸಿಕ್ಕ ಸುದ್ದಿ ತಿಳಿದಾಗ, ಪಶ್ಚಾತ್ತಾಪ ಪಟ್ಟುಕೊಂಡು ರ್ರ್ಯಾಂಬೋ ಅವರನ್ನು ಉಳಿಸುತ್ತಾನೆ.

(ದಟ್ಸ್ ಜಾಲಿವುಡ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada