For Quick Alerts
  ALLOW NOTIFICATIONS  
  For Daily Alerts

  ಗೇ ಸೆಕ್ಸ್ ಆರೋಪಕ್ಕೆ ಡೋಂಟ್ ಕೇರ್ ಎಂದ ನಟ

  By * ಜೇಮ್ಸ್ ಮಾರ್ಟಿನ್
  |

  ಹಾಲಿವುಡ್ ನ ಪ್ರತಿಭಾವಂತ ನಟ ಜಾನ್ ಜೋಸೆಫ್ ಟ್ರಾವೊಲ್ಟಾ ಮತ್ತೆ ಸುದ್ದಿಯಲ್ಲಿದ್ದಾನೆ. ಈ ಬಾರಿ ಷಷ್ಠಿಪೂರ್ತಿ ಆಚರಣೆ ಖುಷಿ ಹಾಗಿರಲಿ ಎಂದೋ ಆಪ್ತನಾಗಿದ್ದ ಪೈಲಟ್ ಗೆಳೆಯನೊಬ್ಬ ಇಳಿ ವಯಸ್ಸಿನಲ್ಲಿ ಜಾನ್ ನನ್ನು ಕಾಡುತ್ತಿದ್ದಾನೆ.

  ಟ್ರವೋಲ್ಟಾ ಒಡೆತನದ ಏರ್ ಕ್ರಾಫ್ಟ್ ಕಂಪನಿಯಲ್ಲಿ ಪೈಲಟ್ ಆಗಿದ್ದ ಡಗ್ಲಾಸ್ ಗೊಟೆರ್ಬ ಎಂಬ ಗೆಳೆಯ ಇತ್ತೀಚೆಗೆ ನೀಡಿದ ಹೇಳಿಕೆ ಜಾನ್ ನೆಮ್ಮದಿ ಕೆಡಸಿದೆ. ನಾನು ಹಾಗೂ ಜಾನ್ ತುಂಬಾ ಆಪ್ತರಾಗಿರುತ್ತಿದ್ದೆವು. ಆಗಸದಲ್ಲಿ ವಿಮಾನ ಹಾರಿಸುವುದರಿಂದ ಹಿಡಿದು ಹಾಸಿಗೆಯಲ್ಲಿ ಮೈಥುನದಲ್ಲಿ ತೊಡಗಿಕೊಳ್ಳುವುದರ ತನಕ ತಮ್ಮ ಸಾಂಗತ್ಯ ಎಲ್ಲರಿಗೂ ಕಿಚ್ಚು ಹಬ್ಬಿಸುತ್ತಿತ್ತು. ನನ್ನ ಜೊತೆ ಗೇ ಸೆಕ್ಸ್ ನಲ್ಲಿ ಜಾನ್ ತೊಡಗಿಕೊಳ್ಳಲು ಇಷ್ಟಪಡುತ್ತಿದ್ದ ಎಂದು ಡಗ್ಲಾಸ್ ಕ್ಯಾಲಿಫೋರ್ನಿಯಾದ ಕೋರ್ಟಿಗೆ ಹೇಳಿಕೆ ನೀಡಿದ್ದಾನೆ.

  ಹೌದು, ಇಬ್ಬರ ನಡುವೆ ಗೇ ಸೆಕ್ಸ್ ನಡೆದಿದೆಯೋ ಇಲ್ಲವೋ ಈಗ ಇಬ್ಬರು ಕಾನೂನು ಸಮರ ನಡೆಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಜಾನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಡಗ್ಲಾಸ್ ಹೇಳಿಕೆಯನ್ನು ಅಲ್ಲಗೆಳೆದಿದ್ದಾನೆ. ನಾನು ಟೀಕೆ ಟಿಪ್ಪಣಿ ಅವಹೇಳನಗಳನ್ನು ಸಹಿಸುತ್ತಲೇ ಬೆಳೆದಿದ್ದೇನೆ. ಇದೆಲ್ಲವೂ ನನಗೆ ಮಾಮೂಲಿಯಾಗಿಬಿಟ್ಟಿದೆ. 2009ರಲ್ಲಿ ನನ್ನ ಮಗನ ಸಾವಿನ ನೋವು ತಂದಷ್ಟು ದುಃಖ ಇಂಥ ಬೇಜವಾಬ್ದಾರಿ ಹೇಳಿಕೆ ಕೇಳಿಸಿಕೊಂಡು ಆಗುವುದಿಲ್ಲ ಎಂದಿದ್ದಾರೆ.

  ಡಗ್ಲಾಸ್ 1987ರಲ್ಲಿ ಜಾನ್ ಟವೋಲ್ಟಾ ಅವರು ಕಂಪನಿ ತೊರೆದಿದ್ದರು. ಕಂಪನಿ ಗೌಪತ್ಯಾ ನಿಯಮಗಳಲ್ಲಿ ವೈಯಕ್ತಿಕ ವಿಚಾರಗಳನ್ನು ಬಹಿರಂಗ ಪಡಿಸಕೂಡದು ಎಂಬ ಅಂಶವೇ ಇರಲಿಲ್ಲ. ಹೀಗಾಗಿ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಡಗ್ಲಾಸ್ ಹೇಳಿಕೊಂಡಿದ್ದಾನೆ.

  ಡಯಾನಾ ಮೆಚ್ಚಿದ್ದ ಜಾನ್ : ಐದು ಖಾಸಗಿ ಏರ್ ಕ್ರಾಫ್ಟ್ ಹೊಂದಿರುವ ಜಾನ್ ಟ್ರವೋಲ್ಟಾ ಪೈಲಟ್ ಆಲ್ಲದೆ ನಟನಾಗಿ ಹಾಲಿವುಡ್ ನಲ್ಲಿ ಮಿಂಚಿದ ಪ್ರತಿಭೆ. ನಟನಷ್ಟೇ ಅಲ್ಲ ಗಾಯಕ, ನಾಟಕಕಾರ, ನೃತ್ಯಗಾರನಾಗಿ ಜನಪ್ರಿಯತೆ ಗಳಿಸಿದ ಸ್ಟಾರ್. ವೇಲ್ಸ್ ನ ರಾಜಕುಮಾರಿ ಇಂಗ್ಲೆಂಡ್ ರಾಣಿ ಡಯಾನಾ ಅವರಿಂದ ಮೆಚ್ಚುಗೆ ಗಳಿಸಿದ್ದ ಡ್ಯಾನ್ಸರ್. ಡಯಾನಾ ಜೊತೆ 1985ರಲ್ಲಿ ಶ್ವೇತಭವನದಲ್ಲಿ ಟ್ರವೋಲ್ಟಾ ನರ್ತಿಸಿ ಮನರಂಜನೆ ನೀಡಿದ್ದರು.

  1975ರಿಂದ ಇಲ್ಲಿತನಕ ವೈವಿಧ್ಯಮಯ ಚಿತ್ರಗಳಲ್ಲಿ, ಕಿರುತೆರೆ ಸರಣಿಗಳಲ್ಲಿ ನಟಿಸಿರುವ ಜಾನ್, ಚಿತ್ರ ನಿರ್ಮಾಣದಲ್ಲೂ ಕೈಯಾಡಿಸಿದ್ದಾರೆ. ಸಾರ್ಟಡೇ ನೈಟ್ ಫೀವರ್, ಗ್ರೀಸ್, ಫೇಸ್ ಆಫ್, ಪಲ್ಪ್ ಫಿಕ್ಸನ್, ಸ್ವಾರ್ಡ್ ಫಿಶ್, ಬ್ರೋಕನ್ ಆರೋ ಮುಂತಾದ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದಾರ್. ಸದ್ಯ ಜಾನ್ ನಟಿಸಿರುವ ಇನ್ ಅ ವ್ಯಾಲಿ ಆಫ್ ವೈಯಲನ್ಸ್ ಚಿತ್ರ ತೆರೆ ಕಾಣಬೇಕಿದೆ.

  English summary
  John Travolta has spoken publicly for the first time about claims made by his former pilot. Actor John Travolta has denied having sex with his former employee Douglas Gotterba. He said "there is no foundation to the rumour".

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X