For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದಂದು ನಗ್ನ ಚಿತ್ರ ಹಂಚಿಕೊಂಡ 'ಅವೇಂಜರ್ಸ್' ನಟಿ

  |

  ಐರನ್ ಮ್ಯಾನ್, ಅವೇಂಜರ್ಸ್ ಸೇರಿ ಇನ್ನೂ ಹಲವು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಗ್ವೈನೆಟ್ ಪಾಲ್ಟ್ರೋವ್ ತನ್ನ ಹುಟ್ಟುಹಬ್ಬದಂದು ನಗ್ನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸುದ್ದಿಯಾಗಿದ್ದಾರೆ.

  ಹೌದು, ಐರನ್ ಮ್ಯಾನ್ ಸಿನಿಮಾದಲ್ಲಿ ಐರನ್ ಮ್ಯಾನ್ ಅಲಿಯಾಸ್ ಸ್ಟೋನಿ ಸ್ಟಾರ್ಕ್‌ ನ ಪ್ರೀತಿಯ ಮಡದಿ ಪೆಪ್ಪರ್ ಪಾಟ್ ಪಾತ್ರದಲ್ಲಿ ನಟಿಸಿರುವ ನಟಿ ಗ್ವೈನೆಟ್ ಪಾಲ್ಟ್ರೋವ್ ಸೆಪ್ಟೆಂಬರ್ 27 ರಂದು ತಮ್ಮ 48ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು.

  ಕೊರೊನಾ ಕಾಲದಲ್ಲೂ ಸಾವಿರಾರು ಕೋಟಿ ಬಾಚಿದ ಸಿನಿಮಾ!

  ಅದೇ ದಿನ ತಮ್ಮ ನಗ್ನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಗ್ವೈನೆಟ್ ಪಾಲ್ಟ್ರೋವ್. ನಟಿಯ ನಗ್ನ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

  ಇನ್‌ಸ್ಟಾಗ್ರಾಂ ನಲ್ಲಿ ನಗ್ನ ಚಿತ್ರ ಹಂಚಿಕೊಂಡಿರುವ ನಟಿ

  ಇನ್‌ಸ್ಟಾಗ್ರಾಂ ನಲ್ಲಿ ನಗ್ನ ಚಿತ್ರ ಹಂಚಿಕೊಂಡಿರುವ ನಟಿ

  ಇನ್‌ಸ್ಟಾಗ್ರಾಂ ನಲ್ಲಿ ನಗ್ನ ಚಿತ್ರ ಹಂಚಿಕೊಂಡಿರುವ ನಟಿ, 'ಹುಟ್ಟುಹಬ್ಬದಂದು ಹುಟ್ಟುಡುಗೆಯಲ್ಲಿದ್ದೇನೆ' ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಈ ಚಿತ್ರವನ್ನು ಲಕ್ಷಾಂತರ ಮಂದಿ ಲೈಕ್ ಹಾಗೂ ಶೇರ್ ಮಾಡಿದ್ದಾರೆ.

  ಅಮ್ಮನ ಚಿತ್ರಕ್ಕೆ ಮಗಳ ಕಮೆಂಟ್

  ಅಮ್ಮನ ಚಿತ್ರಕ್ಕೆ ಮಗಳ ಕಮೆಂಟ್

  ನಟಿ ಗ್ವೈನೆಟ್ ಪಾಲ್ಟ್ರೋವ್ ಗೆ ಹದಿನಾರು ವರ್ಷದ ಆಪಲ್ ಮಾರ್ಟಿನಾ ಹೆಸರಿನ ಮಗಳಿದ್ದಾಳೆ. ಆಕೆ ಸಹ ಅಮ್ಮನ ನಗ್ನ ಚಿತ್ರಕ್ಕೆ 'ರಾಣಿ' ಎಂದು ಕಮೆಂಟ್ ಮಾಡಿದ್ದಾಳೆ. ಗ್ವೈನೆಟ್ ಪಾಲ್ಟ್ರೋವ್ ತಮ್ಮ ಪತಿಯೊಂದಿಗೆ 2016 ರಲ್ಲಿಯೇ ವಿಚ್ಛೇಧನ ಪಡೆದಿದ್ದು, ಇಬ್ಬರೂ ಸೇರಿ ತಮ್ಮಿಬ್ಬರು ಮಕ್ಕಳನ್ನು ಸಾಕುತ್ತಿದ್ದಾರೆ.

  ಮೈಸೂರಿನ ಅನಾಥ ಹುಡುಗ ಹಾಲಿವುಡ್‌ನಲ್ಲಿ ಸ್ಟಾರ್ ಆಗಿ ಮೆರೆದ ಕತೆ!

  ಐರನ್ ಮ್ಯಾನ್ ಸಹ ವಿಶ್ ಮಾಡಿದ್ದಾರೆ!

  ಐರನ್ ಮ್ಯಾನ್ ಸಹ ವಿಶ್ ಮಾಡಿದ್ದಾರೆ!

  ಗ್ವೈನೆಟ್ ಪಾಲ್ಟ್ರೋವ್ ಹುಟ್ಟುಹಬ್ಬಕ್ಕೆ ಐರನ್ ಮ್ಯಾನ್ ಖ್ಯಾತಿಯ ರಾಬರ್ಟ್ ಡಿ ಜೂನಿಯರ್ ಸಹ ಶುಭಾಶಯ ತಿಳಿಸಿದ್ದಾರೆ. ಅವೆಂಜರ್ಸ್‌ ನ ಹಲವು ನಟ-ನಟಿಯರು ಗ್ವೈನೆಟ್ ಪಾಲ್ಟ್ರೋವ್ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.

  ಅವತ್ತು ಪುಟಗೋಸಿ ಅಕೋಕೆ ಹಿಂದೆ, ಮುಂದೆ ನೋಡಲಿಲ್ಲ SPB |Om Sai Prakash | Filmibeat Kannada
  ಮೂರು ಐರನ್ ಮ್ಯಾನ್ ಸಿನಿಮಾದಲ್ಲಿ ನಟಿಸಿದ್ದಾರೆ

  ಮೂರು ಐರನ್ ಮ್ಯಾನ್ ಸಿನಿಮಾದಲ್ಲಿ ನಟಿಸಿದ್ದಾರೆ

  1991 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ಗ್ವೈನೆಟ್ ಪಾಲ್ಟ್ರೋವ್ ಈ ವರೆಗೆ ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಗೂ 14 ಟಿವಿ ಶೋ ಗಳಲ್ಲಿ ನಟಿಸಿದ್ದಾರೆ. ಮೂರು ಐರನ್ ಮ್ಯಾನ್ ಸಿನಿಮಾ, ಮೂರು ಅವೇಂಜರ್ಸ್ ಹಾಗೂ ಒಂದು ಸ್ಪೈಡರ್ ಮ್ಯಾನ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

  ನಾಪತ್ತೆಯಾಗಿದ್ದ ಹಾಲಿವುಡ್ ನಟಿ ನಯಾ ರಿವೇರಾ ಶವವಾಗಿ ಪತ್ತೆ

  English summary
  Actress Gwyneth Paltrow shared a special photo on Instagram on her Birthday. Photo gets viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X