»   » ಪ್ರತಿನಿತ್ಯ ವೋಡ್ಕಾ ಮತ್ತಿನಲ್ಲಿ ತೇಲಾಡುವ ನಟಿ!

ಪ್ರತಿನಿತ್ಯ ವೋಡ್ಕಾ ಮತ್ತಿನಲ್ಲಿ ತೇಲಾಡುವ ನಟಿ!

By: ರವಿಕಿಶೋರ್
Subscribe to Filmibeat Kannada
Actress Lindsay Lohan
ಕೆಲವು ತಾರೆಗಳು ತಮ್ಮ ತೆವಲುಗಳನ್ನು ಹೇಳಿಕೊಳ್ತಾರೆ. ಇನ್ನೂ ಕೆಲವರು ಹೇಳಿಕೊಳ್ಳುವುದಿಲ್ಲ ಅಷ್ಟೇ. ಆದರೆ ಈಕೆ ಮಾತ್ರ ತಮ್ಮ ಗುಂಡಿನ ಚಟದ ಬಗ್ಗೆ ಹೇಳಿಕೊಂಡಿದ್ದಾರೆ. ದಿನಕ್ಕೆ ಒಂದೆರೆಡು ಪೆಗ್ ಅಲ್ಲ. ಎರಡು ಲೀಟರ್ ಕುಡಿಯುವುದಾಗಿ ಹೇಳಿಕೊಂಡಿದ್ದಾರೆ.

ಈ ಮೂಲಕ ಹಾಲಿವುಡ್ ಚಿತ್ರರಸಿಕರನ್ನು ಬೆಚ್ಚಿಬೀಳಿಸಿದ್ದಾರೆ. ಗುಂಡಿನ ಮತ್ತೇ ಗಮ್ಮತ್ತು ಎನ್ನುತ್ತಿರುವ ತಾರೆ, ಸದಾ ಒಂದಿಲ್ಲೊಂದು ಕಿರಿಕಿರಿ ಮಾಡಿಕೊಂಡು ಕಿರಿಕ್ ತಾರೆ ಎನ್ನಿಸಿಕೊಂಡಿರುವ ಲಿಂಡ್ಸೆ ಲೋಹನ್. ಇಷ್ಟಕ್ಕೂ ಲಿಂಡ್ಸೆ ಅಳತೆ ಮೀರಿ ಕುಡಿಯಲು ಕಾರಣ ಏನು?

ಆಕೆಯೇ ಹೇಳುವಂತೆ, ಆಕೆಗೆ ಸಿಕ್ಕಾಪಟ್ಟೆ ಒತ್ತಡ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರಂತೆ. ಮನಸ್ಸಿನ ಒತ್ತಡ ಕಡಿಮೆ ಮಾಡಿಕೊಳ್ಳಲು ಆಕೆ ವೋಡ್ಕಾಗೆ ದಾಸಿಯಾಗಿದ್ದಾಗಿ ತಿಳಿಸಿದ್ದಾರೆ. ಇದಿಷ್ಟೇ ಅಲ್ಲದೆ ಲಿಂಡ್ಸೆ ಆರ್ಥಿಕ ಪರಿಸ್ಥಿತಿಯೂ ನೆಟ್ಟಗಿಲ್ಲವಂತೆ. ಹಾಗಾಗಿ ತಾವು ಕುಡಿತದ ಚಟಕ್ಕೆ ಬಿದ್ದಿದ್ದಾಗಿ ಹೇಳಿಕೊಂಡಿದ್ದಾರೆ.

ಈಕೆಯ ಚಟವನ್ನು ಬಿಡಿಸಲು ಆಕೆಯ ಸ್ನೇಹಿತರು ಸಾಕಷ್ಟು ಪ್ರಯತ್ನಿಸಿದ್ದಾರಂತೆ. ಆದರೆ ಆಕೆ ಮಾತ್ರ ಬದಲಾಗಿಲ್ಲವಂತೆ. ಆರಂಭದಲ್ಲಿ ಈಕೆ ಬೆಳಂಬೆಳಗ್ಗೆಯೇ 'ಪರಮಾತ್ಮ'ನನ್ನು ಹೊಟ್ಟೆಗೆ ಹಾಕಿಕೊಳ್ಳುತ್ತಿದ್ದರಂತೆ. ಬರುಬರುತ್ತಾ ಬೆಳಗ್ಗೆ ಶುರುವಾದ 'ಗುಂಡಿನ' ಚಕಮಕಿ ಸಂಜೆಯವರೆಗೂ ಮುಂದುವರಿಯುತ್ತಿದೆ ಎನ್ನುತ್ತವೆ ಹಾಲಿವುಡ್ ಮೂಲಗಳು.

English summary
Hollywood starlet Lindsay Lohan takes heavy dose of alcohol everyday. She is said to be drinking as much as two litres of vodka a day, sources told a Hollywood website.
Please Wait while comments are loading...