For Quick Alerts
  ALLOW NOTIFICATIONS  
  For Daily Alerts

  13 ವರ್ಷದ ಬಳಿಕ ತಂದೆಯಿಂದ ಬಿಡುಗಡೆ ಪಡೆದ ಗಾಯಕಿ ಬ್ರಿಟ್ನಿ ಸ್ಪಿಯರ್ಸ್

  |

  ಜನಪ್ರಿಯ ಹಾಲಿವುಡ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಕೊನೆಗೂ ಸ್ವತಂತ್ರಳಾಗಿದ್ದಾಳೆ. ಇಷ್ಟವಿಲ್ಲದಿದ್ದರೂ ಕಳೆದ 13 ವರ್ಷದಿಂದ ತಂದೆಯ ನೆರಳಿನಲ್ಲೇ ಬದುಕಿದ್ದ ಈ ಸೂಪರ್ ಸ್ಟಾರ್ ಹಾಲಿವುಡ್ ಗಾಯಕಿ ಈಗ ಸ್ವತಂತ್ರ.

  ಬ್ರಿಟ್ನಿ ಸ್ಪಿಯರ್‌ ಅನ್ನು ಕೊನೆಗೂ ತಂದೆಯ ಗಾರ್ಡಿಯನ್‌ಶಿಪ್‌ನಿಂದ ನ್ಯಾಯಾಲಯ ಬಿಡುಗಡೆಗೊಳಿಸಿದೆ. ಕಳೆದ ಹದಿಮೂರು ವರ್ಷಗಳಿಂದ ಬ್ರಿಟ್ನಿ ಸ್ಪಿಯರ್ಸ್ ತಾನೇ ದುಡಿದ ಹಣವನ್ನು ಖರ್ಚು ಮಾಡಲು ತಂದೆಯ ಅನುಮತಿ ಪಡೆಯಬೇಕಿತ್ತು, ಯಾವುದೇ ಕಾರ್ಯಕ್ರಮ ಒಪ್ಪಿಕೊಳ್ಳಲು, ಒಪ್ಪಂದ ಸಹಿ ಮಾಡಲು ತಂದೆಯ ಅನುಮತಿ ಬೇಕಿತ್ತು, ಆದರೆ ಇನ್ನು ಮುಂದೆ ಹಾಗಿರುವುದಿಲ್ಲ, ಇನ್ನು ಮುಂದೆ ಬ್ರಿಟ್ನಿ ಸ್ಪಿಯರ್ಸ್ ಸ್ವತಂತ್ರರು.

  13 ವರ್ಷದ ಹಿಂದೆ ಬ್ರಿಟ್ನಿ ಸ್ಪಿಯರ್ಸ್‌ ಮಾದಕ ದ್ರವ್ಯ ಸೇವಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಗ ಆಕೆಯ ಮಾನಸಿಕ ಆರೋಗ್ಯವನ್ನು ಪರಿಗಣಿಸಿ ಆಕೆಯ ತಂದೆಯನ್ನು ಗಾರ್ಡಿಯನ್ ಆಗಿ ನೇಮಿಸಲಾಯಿತು. ಹದಿಮೂರು ವರ್ಷಗಳ ಕಾಲ ಬ್ರಿಟ್ನಿ ಸ್ಪಿಯರ್ಸ್ ತಂದೆಯ ನಿಗಾವಣೆಯಲ್ಲಿಯೇ ಇದ್ದರು. ತಂದೆಯ ಗಾರ್ಡಿಯನ್‌ಶಿಪ್ ಅನ್ನು ಅಂತ್ಯಗೊಳಿಸುವಂತೆ ಹಲವು ಬಾರಿ ಬ್ರಿಟ್ನಿ ಸ್ಪಿಯರ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದರೂ ಅದು ಸಾಧ್ಯವಾಗಿರಲಿಲ್ಲ.

  ಆದರೆ ಕಳೆದೊಂದು ವರ್ಷದಿಂದ ನ್ಯಾಯಾಲಯಲ್ಲಿ ತೀವ್ರ ವಾದ-ವಿವಾದಗಳು ನಡೆದು, ಬ್ರಿಟ್ನಿ ಸ್ಪಿಯರ್ಸ್ ತಂದೆಯ ಜೊತೆಗೆ ಬ್ರಿಟ್ನಿ ಆಯ್ಕೆ ಮಾಡುವ ಸಂಸ್ಥೆಯೊಂದನ್ನು ಸಹ ಗಾರ್ಡಿಯನ್ ಆಗಿ ನೇಮಿಸಲಾಯಿತು. ಆದರೆ ಇಂದು ಲಾಸ್ ಏಂಜಲಿಸ್ ಸುಪೀರಿಯರ್ ಕೋರ್ಟ್‌ನ ಆದೇಶ ನೀಡಿದ್ದು, ಬ್ರಿಟ್ನಿ ಸ್ಪಿಯರ್ಸ್ಸ್ ಅನ್ನು ತಂದೆಯ ನಿಗಾವಣೆಯಿಂದ ಸ್ವತಂತ್ರ್ಯಗೊಳಿಸಲಾಗಿದೆ.

  ''ನನಗೆ ನನ್ನ ಜೀವನ ವಾಪಸ್ ಬೇಕು, ಹದಿಮೂರು ವರ್ಷವಾಗಿದೆ ಇದು ಇಲ್ಲಿಗೆ ಸಾಕು, ಈ ದೌರ್ಜನ್ಯಕರ ಗಾರ್ಡಿಯನ್‌ಶಿಪ್‌ ನನ್ನನ್ನು ಖಿನ್ನತೆಗೆ ನೂಕಿದೆ. ನನಗೆ ನಿದ್ದೆ ಮಾಡಲಾಗುತ್ತಿಲ್ಲ. ಊಟ ಸೇರುತ್ತಿಲ್ಲ. ನಾನು ಆಘಾತಕ್ಕೆ ಒಳಗಾಗಿದ್ದೇನೆ ಈ ಸಂರಕ್ಷಣಾಧೀನತೆ ದೌರ್ಜನ್ಯದಿಂದ ಕೂಡಿದೆ, ನಿಂದನಾತ್ಮಕವಾಗಿದೆ. ನನಗೆ ಬದಲಾವಣೆ ಬೇಕು, ಬದಲಾವಣೆಗೆ ಹಕ್ಕುದಾರಳು ನಾನು. ನನ್ನ ಜೀವನ ನನಗೆ ವಾಪಸ್ ಕೊಟ್ಟುಬಿಡಿ'' ಎಂದು ನ್ಯಾಯಾಲಯದಲ್ಲಿ ಮೊರೆ ಇಟ್ಟಿದ್ದರು ಬ್ರಿಟ್ನಿ ಸ್ಪಿಯರ್ಸ್.

  2008ರಲ್ಲಿ ಡ್ರಗ್ಸ್ ಸೇವಿಸಿ ಬ್ರಿಟ್ನಿ ಸ್ಪಿಯರ್ಸ್ ಸಿಕ್ಕಿಹಾಕಿಕೊಂಡಿದ್ದರು. ಆಕೆಯ ಬುದ್ಧಿ ಸ್ಥಿಮಿತದಲ್ಲಿಲ್ಲವೆಂದು ಅವರ ತಂದೆ ಜೇಮ್ಸ್ ಪಾರ್ನೆಲ್ ಸ್ಪಿಯರ್ಸ್ಸ್ ಆರೋಪಿಸಿದ್ದರು. ಬ್ರಿಟ್ನಿಯ ಗಾರ್ಡಿಯನ್‌ಶಿಪ್ ಅನ್ನು ಅವರೇ ಪಡೆದುಕೊಂಡಿದ್ದರು. ಆಗಿನಿಂದಲೂ ಬ್ರಿಟ್ನಿ ಸ್ಪಿಯರ್ಸ್‌ನ ಎಲ್ಲ ಆರ್ಥಿಕ ಹಾಗೂ ಕಾರ್ಯಕ್ರಮಗಳ ನಿರ್ಣಯವನ್ನು ಬ್ರಿಟ್ನಿ ತಂದೆಯೇ ತೆಗೆದುಕೊಳ್ಳುತ್ತಿದ್ದಾರೆ. ಆಲ್ಬಂ ಒಂದರಿಂದ ನೂರಾರು ಕೋಟಿ ಹಣವನ್ನು ಬ್ರಿಟ್ನಿ ಗಳಿಸುತ್ತಾರೆ ಆದರೆ ಅದಾವುದನ್ನೂ ಬಳಸುವ ಹಕ್ಕನ್ನು ಮಾತ್ರ ಆಕೆ ಹೊಂದಿರಲಿಲ್ಲ. ಬ್ರಿಟ್ನಿ ಮೇಲೆ ಹೇರಲಾಗಿರುವ ಗಾರ್ಡಿಯನ್‌ಶಿಪ್‌ ಅನ್ನು ಅಂತ್ಯಗೊಳಿಸಬೇಕು ಎಂದು ಬ್ರಿಟ್ನಿಯ ಅಭಿಮಾನಿಗಳು ಪ್ರತಿಭಟನೆ ಸಹ ನಡೆಸಿದ್ದರು. ಪ್ರಕರಣದ ವಿಚಾರಣೆ ನಡೆಯುತ್ತಿದ್ದ ಲಾಸ್‌ ಏಂಜಲ್ಸ್‌ನ ನ್ಯಾಯಾಲದ ಮುಂದೆ ಸಾವಿರಾರು ಮಂದಿ ಸೇರಿ ಬ್ರಿಟ್ನಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಈಗ ಕೊನೆಗೂ ಬ್ರಿಟ್ನಿ ಸ್ವತಂತ್ರರರಾಗಿದ್ದಾರೆ.

  English summary
  After long legal battle Britney Spears got freedom from her father James Parnel. Court removed James from Britney's guardianship.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X