For Quick Alerts
  ALLOW NOTIFICATIONS  
  For Daily Alerts

  ಶೂಟಿಂಗ್ ವೇಳೆ ಕ್ಯಾಮೆರಾಮನ್ ಅನ್ನು ಕೊಂದ ಹಿರಿಯ ನಟ!

  |

  ಹಾಲಿವುಡ್‌ನ ಖ್ಯಾತ ನಟ ಅಲೆಸ್ ಬಾಲ್ಡ್‌ವಿನ್‌ ಸಿನಿಮಾ ಚಿತ್ರೀಕರಣದ ವೇಳೆ ಬಂದೂಕಿನಿಂದ ಶೂಟ್ ಮಾಡಿ ಸಿನಿಮಾದ ಕ್ಯಾಮೆರಾಮ್ಯಾನ್ ಅನ್ನು ಕೊಂದಿದ್ದಾರೆ. ನಿರ್ದೇಶಕನಿಗೂ ಗಂಭೀರ ಗಾಯವಾಗಿದೆ. ಆದರೆ ಅಲೆಸ್ ಬಾಲ್ಡ್‌ವಿನ್ ಉದ್ದೇಶಪೂರ್ವಕವಾಗಿ ಹೀಗೆ ಮಾಡಿಲ್ಲ.

  ಅಲೆಸ್ ಬಾಲ್ಡ್‌ವಿನ್ ನಟಿಸುತ್ತಿರುವ ಇಂಗ್ಲೀಷ್‌ನ 'ರಸ್ಟ್' ಹೆಸರಿನ ಸಿನಿಮಾದ ಚಿತ್ರೀಕರಣ ನ್ಯೂ ಮೆಕ್ಸಿಕೊ ಬಳಿಯ ಸಾಂಟಾ ಫೆ ಎಂಬಲ್ಲಿ ನಡೆಯುತ್ತಿತ್ತು. ಚಿತ್ರೀಕರಣದ ವೇಳೆ ಅಲೆಕ್ಸ್‌ ಗನ್ ಚಲಾಯಿಸುವ ದೃಶ್ಯ ಸೆರೆಹಿಡಿಯಲಾಗುತ್ತಿತ್ತು. ಅಲೆಸ್ ಬಂದೂಕು ಟ್ರಿಗರ್ ಒತ್ತುತ್ತಲೆ ಎದುರಿಗೆ ಕ್ಯಾಮೆರಾ ಹಿಡಿದು ದೃಶ್ಯ ಸೆರೆಹಿಡಿಯುತ್ತಿದ್ದ ಕ್ಯಾಮೆರಾವುಮನ್‌ಗೆ ಗುಂಡು ತಗುಲಿದೆ. ಪಕ್ಕದಲ್ಲೇ ಇದ್ದ ನಿರ್ದೇಶಕನಿಗೂ ಗಂಭೀರ ಗಾಯವಾಗಿದೆ.

  'ರಸ್ಟ್' ಸಿನಿಮಾಕ್ಕೆ ಮಹಿಳೆ ಹಲ್ಯಾನಾ ಹಚಿನ್ಸ್ ಕ್ಯಾಮೆರಾ ವುಮನ್ ಆಗಿದ್ದರು. ಗುಂಡು ತಗುಲುತ್ತಿದ್ದಂತೆ ಹೆಲಿಕಾಪ್ಟರ್ ಮೂಲಕ ಹಲ್ಯಾನಾ ಹಚಿನ್ಸ್ ಹಾಗೂ ಗಾಯಗೊಂಡಿದ್ದ ನಿರ್ದೇಶಕ ಜೋಯೆಲ್ ಸೋವುಜ್ ಅನ್ನು ನ್ಯೂ ಮೆಕ್ಸಿಕೋದ ಆಸ್ಪತ್ರೆಗೆ ಸಾಗಿಸಲಾಯ್ತು. ಆದರೆ ಅಲ್ಲಿ ಹಲ್ಯಾನಾರನ್ನು ಮೃತರೆಂದು ಘೋಷಿಸಲಾಯ್ತು. ನಿರ್ದೇಶಕ ಜೋಯೆಲ್ ಸೋವುಜ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.

  ಚಿತ್ರೀಕರಣಕ್ಕೆ ಬಂದೂಕಿಗೆ ಬ್ಲಾಂಕ್ಸ್‌ ಗುಂಡುಗಳನ್ನು ಬಳಸಲಾಗಿತ್ತು. ಈ ಗುಂಡುಗಳನ್ನು ಶೂಟ್ ಮಾಡಿದಾಗ ಶಬ್ದ ಮತ್ತು ಬೆಂಕಿ ಉತ್ಪತ್ತಿ ಆಗುತ್ತದೆ. ನಿಜವಾದ ಬುಲೆಟ್‌ಗಳಂತೆ ಬ್ಲ್ಯಾಂಕ್ಸ್‌ಗೆ ಮುಂದಿನ ಚೂಪಾದ ಸಿಡಿಭಾಗ ಇರುವುದಿಲ್ಲ ಆದರೆ ನಿಜವಾದ ಬುಲೆಟ್‌ನಷ್ಟೇ ವೇಗ ಇರುತ್ತದೆ. ಕ್ಯಾಮೆರಾವುಮನ್ ಹಲ್ಯಾನಾ ಹಚಿನ್ಸ್ ಹಾಗೂ ನಿರ್ದೇಶಕ ಜೋಯೆಲ್ ಹತ್ತಿರದಲ್ಲೇ ಇದ್ದ ಕಾರಣಕ್ಕೆ ಇಬ್ಬರಿಗೂ ಈ ಬ್ಲ್ಯಾಂಕ್ ಬುಲೆಟ್ ತೀವ್ರ ಘಾಸಿಯನ್ನೇ ಮಾಡಿದೆ. ಹಲ್ಯಾನಾ ಹಚಿನ್ಸ್‌ಳ ಜೀವ ತೆಗೆದಿದೆ.

  ಮಿಸ್ ಫೈರ್ ಮಾಡಿರುವ ಅಲೆಸ್ ಬಾಲ್ಡ್‌ವಿನ್ ಹಾಲಿವುಡ್‌ನ ಹಿರಿಯ ನಟರಲ್ಲೊಬ್ಬರು 1987 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ಅಲೆಸ್, 'ದಿ ಡಿಪಾರ್ಚರ್', 'ಏವಿಯೇಟರ್', 'ಅಲೈಸ್', 'ಮಿಷನ್ ಇಂಪಾಸಿಬಲ್', 'ದಿ ಕೂಲರ್' ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ದಿ ಕೂಲರ್' ಸಿನಿಮಾದ ಅತ್ಯುತ್ತಮ ನಟನೆಗಾಗಿ ಆಸ್ಕರ್‌ಗೆ ನಾಮಿನೇಟ್ ಸಹ ಆಗಿದ್ದರು. ಮೂರು ಎಮ್ಮಿ ಅವಾರ್ಡ್ ಹಾಗೂ ಮೂರು ಗೋಲ್ಡನ್ ಗ್ಲೋಬ್ ಅವಾರ್ಡ್ ಸಹ ಪಡೆದಿದ್ದಾರೆ.

  ಘಟನೆ ಬಳಿಕ ನ್ಯೂ ಮೆಕ್ಸಿಕೋದ ಪೊಲಿಸ್ ಠಾಣೆಗೆ ತೆರಳಿ ಹೇಳಿಕೆ ದಾಖಲಿಸಿರುವ ಅಲೆಸ್ ಬಾಲ್ಡ್‌ವಿನ್ ಪೊಲೀಸ್ ಠಾಣೆಯ ಎದುರು ಕುಳಿತು ಅಳುತ್ತಿದ್ದುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.

  English summary
  Famous Hollywood actor Alec Baldwin kills cameraman in miss fire while shooting movie 'Rust'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X