twitter
    For Quick Alerts
    ALLOW NOTIFICATIONS  
    For Daily Alerts

    ಲಕ್ಷಾಂತರ ಕೋಟಿ ಕೊಟ್ಟು ಸಿನಿಮಾ ನಿರ್ಮಾಣ ಸಂಸ್ಥೆ ಖರೀದಿಸಿದ ಅಮೆಜಾನ್

    |

    ಅಮೆಜಾನ್‌ನ ಮಾಲೀಕ ಜೆಫ್ ಬೆಜೋಸ್ ವಿಶ್ವದ ನಂಬರ್ 1 ಶ್ರೀಮಂತ. ಬಿಲ್‌ ಗೇಟ್ಸ್‌, ಎಲಾನ್ ಮಸ್ಕ್ ಅನ್ನು ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೆ ಏರಿದ್ದಾರೆ ಈ 57 ವರ್ಷದ ಉದ್ಯಮಿ.

    ಬಹಳ ಧೈರ್ಯಶಾಲಿ ಉದ್ಯಮಿ ಆಗಿರುವ ಜೆಫ್ ಭಾರಿ ದೊಡ್ಡ ಮೊತ್ತದ ಡೀಲ್‌ಗಳನ್ನು ಮಾಡುವುದರಲ್ಲಿ ನಿಶ್ಣಾತರು. ಇದೀಗ ಜೆಫ್ ಬೆಜೋಸ್ ಒಡೆತನದ ಅಮೆಜಾನ್ ಸಂಸ್ಥೆಯು ಲಕ್ಷಾಂತರ ಕೋಟಿ ಹಣ ವ್ಯವಯಿಸಿ ವಿಶ್ವದ ಹಳೆಯ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಖರೀದಿಸುತ್ತಿದೆ.

    ವಿಶ್ವದ ಹಳೆಯ ಸಿನಿಮಾ ನಿರ್ಮಾಣ ಸಂಸ್ಥೆಯಲ್ಲೊಂದಾದ 'ಮೆಟ್ರೊ ಗೋಲ್ಡ್‌ವಿನ್ ಮೇಯರ್' (ಎಂಜಿಎಂ) ಸ್ಟುಡಿಯೋ ಅನ್ನು ಅಮೆಜಾನ್ ಖರೀದಿಸಲು ಮುಂದಾಗಿದೆ. ಸಿನಿಮಾ ಆರಂಭಕ್ಕೆ ಮುನ್ನ ಚಿನ್ನದ ಬಣ್ಣದ ರಿಂಗ್‌ನಿಂದ ಸಿಂಹದ ತಲೆಯೊಂದು ಹೊರಗೆ ಬಂದು ಜೋರಾಗಿ ಘರ್ಜಿಸುವ ಎಂಬ್ಲಮ್ ಅನ್ನು ಎಂಜಿಎಂ ಹೊಂದಿತ್ತು. ಇದು ವಿಶ್ವದಾದ್ಯಂತ ಬಹಳ ವಿಖ್ಯಾತವಾಗಿದೆ. ಇದೇ ಮಾದರಿಯನ್ನು ದ್ವಾರಕೀಶ್ ಸಹ ತಮ್ಮ ಸಿನಿಮಾ ನಿರ್ಮಾಣ ಸಂಸ್ಥೆಯಲ್ಲಿ ಬಳಸಿದ್ದಾರೆ.

    1924 ರಲ್ಲಿ ಆರಂಭವಾದ ಎಂಜಿಎಂ ಅನ್ನು 6.13 ಲಕ್ಷ ಕೋಟಿ ರುಪಾಯಿಗಳಿಗೆ (8.45 ಬಿಲಿಯನ್ ಡಾಲರ್) ಖರೀದಿಸುತ್ತಿದೆ ಅಮೆಜಾನ್. ಅಮೆಜಾನ್‌ನ ಅಂಗ ಸಂಸ್ಥೆಯಾದ ಅಮೆಜಾನ್ ಪ್ರೈಂ ಈ ಒಪ್ಪಂದ ಮಾಡಿಕೊಳ್ಳುತ್ತಿದೆ.

    ನೆಟ್‌ಫ್ಲಿಕ್ಸ್‌ಗೆ ಸ್ಪರ್ಧೆ ನೀಡಲು ಈ ನಿರ್ಣಯ

    ನೆಟ್‌ಫ್ಲಿಕ್ಸ್‌ಗೆ ಸ್ಪರ್ಧೆ ನೀಡಲು ಈ ನಿರ್ಣಯ

    ನೆಟ್‌ಫ್ಲಿಕ್ಸ್‌ ಸೇರಿ ಇತರೆ ಒಟಿಟಿಗಳ ಸ್ಪರ್ಧೆಯನ್ನು ಎದುರಿಸಲು ಅಮೆಜಾನ್ ಈ ಹೆಜ್ಜೆ ಇಟ್ಟಿದೆ. ಎಂಜಿಎಂ ಖರೀದಿಯಿಂದಾಗಿ ಸಾವಿರಾರು ಸಿನಿಮಾಗಳು ಹಾಗೂ ಟಿವಿ ಶೋಗಳ ಹಕ್ಕುಗಳು ಅಮೆಜಾನ್ ಪಾಲಾಗಿವೆ. ವಿಶ್ವ ವಿಖ್ಯಾತ ಬಾಂಡ್ ಸಿನಿಮಾ ಸರಣಿಯ ಹಕ್ಕುಗಳು ಸಹ ಅಮೆಜಾನ್ ಪಾಲಾಗಿವೆ. ಈ ಒಪ್ಪಂದದ ಬಹುದೊಡ್ಡ ಅಂಶ ಇದೇ ಎನ್ನಲಾಗುತ್ತಿದೆ.

    4000 ಸಿನಿಮಾ, 17,000 ಟಿವಿ ಶೋ

    4000 ಸಿನಿಮಾ, 17,000 ಟಿವಿ ಶೋ

    97 ವರ್ಷಗಳಿಂದಲೂ ಸಿನಿಮಾ ನಿರ್ಮಾಣ ಹಾಗೂ ಟಿವಿ ಶೋ, ವೆಬ್ ಸರಣಿ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಎಂಜಿಎಂ ಸಾವಿರಾರು ಅತ್ಯುತ್ತಮ ಸಿನಿಮಾಗಳನ್ನು ನೀಡಿದೆ. 4000 ಸಿನಿಮಾಗಳು, 17,000 ಟಿವಿ ಶೋಗಳನ್ನು ಎಂಜಿಎಂ ನಿರ್ಮಾಣ ಮಾಡಿದೆ. ಎಲ್ಲಕ್ಕಿಂತಲೂ ಪ್ರಮುಖವಾಗಿ ಜೇಮ್ಸ್ ಬಾಂಡ್ ಸರಣಿ ಹಕ್ಕುಗಳನ್ನು ಎಂಜಿಎಂ ಹೊಂದಿದೆ.

    ಎಂಜಿಎಂ ಸೃಜನಶೀಲ ಮಾದರಿಗೆ ಧಕ್ಕೆ ಮಾಡುವುದಿಲ್ಲ:ಅಮೆಜಾನ್

    ಎಂಜಿಎಂ ಸೃಜನಶೀಲ ಮಾದರಿಗೆ ಧಕ್ಕೆ ಮಾಡುವುದಿಲ್ಲ:ಅಮೆಜಾನ್

    ಈ ವ್ಯಾಪಾರ ಒಪ್ಪಂದದ ಹೇಳಿಕೆ ಬಿಡುಗಡೆ ಮಾಡಿರುವ ಅಮೆಜಾನ್, 'ಎಂಜಿಎಂ ಸಂಸ್ಥೆಯು ವಿಶ್ವ ಸಿನಿಮಾಕ್ಕೆ ದೊಡ್ಡ ಕೊಡುಗೆ ನೀಡಿದೆ. ಎಂಜಿಎಂನ ಘನತೆಯನ್ನು ಹಾಗೆಯೇ ಉಳಿಸಿಕೊಂಡು. ಎಂಜಿಎಂ ಮಾದರಿಯ ಗುಣಮಟ್ಟದ ಸಿನಿಮಾಗಳ ನಿರ್ಮಾಣವನ್ನು ಮುಂದುವರೆಸಲಾಗುವುದು. ಎಂಜಿಎಂನ ಸೃಜನಶೀಲ ಮಾದರಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ' ಎಂದಿದೆ.

    Recommended Video

    ಸೀಲ್ ಡೌನ್ ಆಗಿರೋ ಏರಿಯಾದಲ್ಲಿ Harshaka ಮತ್ತು Bhuvan ಮಾಡಿದ್ದೇನು ನೋಡಿ | Filmibeat Kannada
    ಹಿಟ್ ನೀಡುವಲ್ಲಿ ವಿಫಲವಾಗಿದ್ದ ಎಂಜಿಎಂ

    ಹಿಟ್ ನೀಡುವಲ್ಲಿ ವಿಫಲವಾಗಿದ್ದ ಎಂಜಿಎಂ

    ಸಾವಿರಾರು ಸಿನಿಮಾಗಳನ್ನು ನೀಡಿರುವ ಎಂಜಿಎಂ ಇತ್ತೀಚೆಗೆ ದೊಡ್ಡ ಹಿಟ್ ನೀಡಲು ವಿಫಲವಾಗಿತ್ತು. ಇತ್ತೀಚೆಗೆ ಸಿನಿಮಾಗಳ ಬದಲಿಗೆ ಟಿವಿ ಶೋಗಳ ಮೇಲೆ ಹೆಚ್ಚು ಗಮನ ಹರಿಸಿತ್ತು. ಜೊತೆಗೆ ಎಂಜಿಎಂ ಹೋಟೆಲ್ ಮತ್ತು ಕಸೀನೊ ವ್ಯವಹಾರವನ್ನು ಹಲವೆಡೆ ಆರಂಭಿಸಿತ್ತು.

    English summary
    Amazon agrees to buy one of the oldest movie production company MGM for 6.13 lakh crore rs. (8.45 billion dollar)
    Friday, May 28, 2021, 9:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X