twitter
    For Quick Alerts
    ALLOW NOTIFICATIONS  
    For Daily Alerts

    ವಿಜ್ಞಾನಿಗಳ ಚಿತ್ರದ ಜೊತೆ ಹಾಲಿವುಡ್‌ ನಟನ ಚಿತ್ರವಿಟ್ಟ ಆಂಧ್ರದ ಕಾಲೇಜು!

    |

    ಶಾಲೆ-ಕಾಲೇಜುಗಳಲ್ಲಿ ಮಹಾತ್ಮ ಗಾಂಧಿ, ಅಂಬೇಡ್ಕರ್ ಚಿತ್ರಗಳು ಸಾಮಾನ್ಯ. ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ವಿಶ್ವ ವಿಖ್ಯಾತ ವಿಜ್ಞಾನಿಗಳ ಚಿತ್ರಗಳನ್ನೂ ಸಹ ಗೋಡೆಯ ಮೇಲೆ ಪ್ರದರ್ಶನಕ್ಕೆ ಇಡಲಾಗಿರುತ್ತದೆ. ಆದರೆ ಆಂಧ್ರ ಪ್ರದೇಶದ ಕಾಲೇಜೊಂದರಲ್ಲಿ ವೆಬ್ ಸರಣಿಯೊಂದರ ನಟನ ಚಿತ್ರವನ್ನು ಗೋಡೆಗೆ ನೇತು ಹಾಕಲಾಗಿದೆ. ಅದೂ ವಿಶ್ವ ವಿಖ್ಯಾತ ವಿಜ್ಞಾನಿಗಳ ಜೊತೆಗೆ!

    ಹೌದು, ಆಂಧ್ರದ ಕಾಲೇಜೊಂದರ ವಿಜ್ಞಾನ ವಿಭಾಗದ ಗೋಡೆಯ ಮೇಲೆ ಕೆಲವು ವಿಜ್ಞಾನಿಗಳ ಚಿತ್ರಗಳನ್ನು ತೂಗಿಹಾಕಲಾಗಿದೆ. ಮೊದಲಿಗೆ ಮ್ಯಾಕ್ಸ್ ಪ್ಲಂಕ್, ಕ್ಯಾನಿಜಾರೊ ಆ ನಂತರ ಮೂರನೇ ಚಿತ್ರವಾಗಿ ಸೂಪರ್ ಹಿಟ್ ವೆಬ್ ಸರಣಿ 'ಬ್ರೇಕಿಂಗ್ ಬ್ಯಾಡ್‌'ನ ಮುಖ್ಯಪಾತ್ರಧಾರನ ಚಿತ್ರವನ್ನು ಹಾಕಲಾಗಿದೆ. ಹೀಗೆ ನಟನ ಚಿತ್ರವನ್ನು ವಿಜ್ಞಾನಿಗಳ ಚಿತ್ರದ ಜೊತೆಗೆ ಹಾಕಿರುವ ಫೊಟೊವನ್ನು ರಾಹುಲ್ ಎಂಬುವರು ಹಂಚಿಕೊಂಡಿದ್ದು ಅದು ಸಖತ್ ವೈರಲ್ ಆಗಿದೆ.

    Andhra Pradesh College Mistaken Breaking Bad Heisenberg As Scientist Werner Heisenberg

    'ಬ್ರೆಕಿಂಗ್ ಬ್ಯಾಡ್' ವೆಬ್ ಸರಣಿಯ ನಾಯಕ ಪಾತ್ರದ ಹೆಸರು ವಾಲ್ಟರ್ ವೈಟ್ ಆತನ ಎರಡನೇ ಹೆಸರು ಹೈಸನ್‌ಬರ್ಗ್. ಆಂಧ್ರದ ಕಾಲೇಜಿನವರು ಅನಿಶ್ಚಿತತೆಯ ತತ್ವ (ಅನ್‌ಸರ್ಟೇನಿಟಿ ಪ್ರಿನ್ಸಿಪಲ್) ಪರಿಚಯಿಸಿದ ವಿಜ್ಞಾನಿ ವರ್ನರ್ ಹೈಸನ್‌ಬರ್ಗ್‌ ಚಿತ್ರವನ್ನು ಹಾಕುವ ಬದಲಿಗೆ 'ಬ್ರೇಕಿಂಗ್‌ ಬ್ಯಾಡ್‌'ನ ಹೈಸನ್‌ಬರ್ಗ್‌ನ ಚಿತ್ರವನ್ನು ಹಾಕಿದ್ದಾರೆ.

    'ಬ್ರೇಕಿಂಗ್ ಬ್ಯಾಡ್‌' ವೆಬ್ ಸರಣಿಯಲ್ಲಿ ವಾಲ್ಟರ್ ವೈಟ್ ಅಲಿಯಾಸ್ ಹೈಸನ್‌ಬರ್ಗ್‌ ರಸಾಯನ ಶಾಸ್ತ್ರ ವಿಷಯದಲ್ಲಿ ಪರಿಣಿತನಾಗಿರುತ್ತಾನೆ. ಆದರೆ ಆತ ತನ್ನ ಪ್ರತಿಭೆಯನ್ನು 'ಮೆತಾಂಪಿಟಮೈನ್' (ಮೆತ್) ಎಂಬ ಮಾದಕ ವಸ್ತು ತಯಾರಿಸಲು ಬಳಸುತ್ತಾನೆ. ಆ ಮೂಲಕ ಭಾರಿ ಹಣ ಗಳಿಸುತ್ತಾನೆ ಆದರೆ ಅಷ್ಟೇ ಪ್ರಮಾದಕ್ಕೂ ಗುರಿಯಾಗುತ್ತಾನೆ. ಸಾಮಾನ್ಯ ಶಾಲಾ ಶಿಕ್ಷಕ ಆಗಿದ್ದ ಅವನು ಭೂಗತ ಲೋಕದ ನಂಟು ಬೆಳೆಸಿಕೊಂಡು ಕೊಲೆಗಾರನೂ ಆಗುತ್ತಾನೆ.

    'ಬ್ರೇಕಿಂಗ್ ಬ್ಯಾಡ್' ವಿಶ್ವದ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದು. ಗೂಗಲ್‌ನಲ್ಲಿ ವಿಜ್ಞಾನಿ ವರ್ನರ್ ಹೈಸನ್‌ಬರ್ಗ್‌ ಹೆಸರು ಹುಡುಕಿದರೆ ಬ್ರೇಕಿಂಗ್‌ ಬ್ಯಾಡ್‌ನ ವಾಲ್ಟರ್ ವೈಟ್ ಅಲಿಯಾಸ್ ಹೈಸನ್‌ಬರ್ಗ್‌ನ ಚಿತ್ರವೂ ಜೊತೆಗೆ ಮೂಡುತ್ತದೆ. ಹೀಗಾಗಿಯೇ ಆಂಧ್ರದ ಕಾಲೇಜಿನವರು ತಪ್ಪುಗ್ರಹಿಕೆಗೊಳಪಟ್ಟು 'ಬ್ರೆಕಿಂಗ್‌ ಬ್ಯಾಡ್‌'ನ ಹೈಸನ್‌ಬರ್ಗ್‌ನ ಚಿತ್ರಕ್ಕೆ ಚೌಕಟ್ಟು ಹಾಕಿಸಿ ತೂಗು ಹಾಕಿದ್ದಾರೆ.

    'ಬ್ರೇಕಿಂಗ್‌ ಬ್ಯಾಡ್‌' ನಲ್ಲಿ ವಾಲ್ಟರ್ ವೈಟ್ ಅಲಿಯಾಸ್ ಹೈಸನ್‌ಬರ್ಗ್ ಪಾತ್ರ ಮಾಡಿರುವ ನಟನ ಹೆಸರು ಬ್ರ್ಯಾನ್ ಕ್ರಾನ್‌ಸ್ಟನ್. ಆಸ್ಕರ್, ಬ್ರಿಟಿಷ್ ಆಸ್ಕರ್‌ಗೆ ನಾಮಿನೇಟ್ ಆಗಿದ್ದ ಬ್ರ್ಯಾನ್‌ಗೆ 'ಬ್ರೇಕಿಂಗ್ ಬ್ಯಾಡ್‌' ವೆಬ್ ಸರಣಿಯ ಅತ್ಯುತ್ತಮ ನಟನೆಗೆ ಆರು ಎಮಿ ಪ್ರಶಸ್ತಿಗಳು, ಎರಡು ಗೋಲ್ಡನ್ ಗ್ಲೋಬ್ ಪ್ರಶಸ್ತಿ, ಆಲಿವರ್, ಗಿಲ್ಡ್ ಅವಾರ್ಡ್‌ಗಳು ಸೇರಿ ಹಲವು ಪ್ರಶಸ್ತಿಗಳು ದೊರಕಿವೆ.

    Recommended Video

    Fake! Fake!! ಇದು ನಾನಲ್ಲ ಹುಷಾರಾಗಿರಿ ಎಂದ ಸೋನು ಸೂದ್ | Filmibeat Kannada

    ಐದು ಸೀಸನ್‌ನಲ್ಲಿ ಪ್ರಸಾರವಾದ 'ಬ್ರೇಕಿಂಗ್ ಬ್ಯಾಡ್‌' ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.

    English summary
    A Andhra Pradesh college mistaken Breaking Bad web series Heisenberg as Germen scientist Werner Heisenberg.
    Monday, May 17, 2021, 20:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X