»   » ಹಾರರ್ ಚಿತ್ರ ಅನ್ನಾಬೆಲ್ ಗಳಿಕೆಯಲ್ಲಿ ಟಾಪ್ 1

ಹಾರರ್ ಚಿತ್ರ ಅನ್ನಾಬೆಲ್ ಗಳಿಕೆಯಲ್ಲಿ ಟಾಪ್ 1

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಾಲಿವುಡ್ ಚಿತ್ರ ಅನ್ನಾಬೆಲ್ ಅಂತಾರಾಷ್ಟ್ರೀಯ ಬಾಕ್ಸಾಫೀಸ್ ನಲ್ಲಿ ಭರ್ಜರಿ ಬೆಳೆ ತೆಗೆದಿದೆ. ವಿಶ್ವದೆಲ್ಲೆಡೆ ಗಳಿಕೆ 200 ಮಿಲಿಯನ್ ಡಾಲರ್ ದಾಟಿದೆ.

ಅಕ್ಟೋಬರ್ ಮೊದಲ ವಾರ ಅಮೆರಿಕ ಹಾಗೂ ಕೆನಡಾದಲ್ಲಿ ಬಿಡುಗಡೆಗೊಂಡು ಕಲೆಕ್ಷನ್ ನಲ್ಲಿ ಉತ್ತಮ ಓಪನಿಂಗ್ ಪಡೆದುಕೊಂಡ 'ಅನ್ನಾಬೆಲ್' ಸುಮಾರು ನಿವ್ವಳ 206.2 ಮಿಲಿಯನ್ ಯುಎಸ್ ಡಾಲರ್ ಬಾಚಿಕೊಂಡಿದೆ. ಯುಎಸ್ ಹಾಗೂ ಕೆನಡಾ ಹೊರಗಡೆ ಅಂದಾಜು 126.7 ಮಿಲಿಯನ್ ಡಾಲರ್ ಗಳಿಕೆ ಹೊಂದಿದೆ. ವೆರೈಟಿ.ಕಾಂ ವರದಿಯಂತೆ ಸಾಗರೋತ್ತರ ದೇಶಗಳಲ್ಲಿ ಅನ್ನಾಬೆಲ್ ಗಳಿಕೆ ಹಿಗ್ಗುತ್ತಲೇ ಇದೆಯಂತೆ.

Horror flick

ಮೆಕ್ಸಿಕೋದಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದ್ದು ಹಾರರ್ ಚಿತ್ರದ ಅದರಲ್ಲೂ 3ಡಿ ರಹಿತ ಚಿತ್ರವೊಂದು ಈ ರೀತಿ ಗಳಿಸಿದ್ದು ಇದೇ ಮೊದಲು ಎನ್ನಲಾಗಿದೆ. ಮೆಕ್ಸಿಕೋವೊಂದರಲ್ಲೇ 11.7 ಮಿಲಿಯನ್ ಡಾಲರ್ ಗಳಿಕೆ ಬಂದಿದೆ. ಬ್ರೆಜಿಲ್ ನಲ್ಲಿ 11.5 ಮಿಲಿಯನ್ ಡಾಲರ್ ಕಳೆದ ಮೂರು ವಾರಗಳಲ್ಲಿ ದಾಖಲಾಗಿದೆ. [ಟಾಪ್ ಹಾರರ್ ಚಿತ್ರಗಳು]

ಪ್ಯಾರನಾರ್ಮಲ್ ಆಕ್ಟಿವಿಟಿಗಳ ಸುತ್ತ ಹೆಣೆಯಲಾದ ಕಥೆಯುಳ್ಳ, 1970ರಲ್ಲಿ ರೋಡ್ ದ್ವೀಪದ ತೋಟದ ಮನೆಯಲ್ಲಿ ನಡೆದ ಘಟನಾವಳಿಗಳನ್ನು ಆಧಾರಿಸಿದ ದಿ ಕಾಂಜೂರಿಂಗ್ ಚಿತ್ರದ ಪೂರ್ವ ಅವತರಣಿಕೆ 'ಅನ್ನಾಬೆಲ್' ಚಿತ್ರ. [ಹ್ಯಾಪಿ ನ್ಯೂ ಇಯರ್ 100 ಕೋಟಿ ಕ್ಲಬ್ಬಿಗೆ]

ಈ ಚಿತ್ರದಲ್ಲಿ ಗೊಂಬೆಯ ಭೂತಚೇಷ್ಟೆಗಳನ್ನು ನಿರ್ದೇಶಿಸಿರುವುದು ಜಾನ್ ಆರ್ ಲಿಯೊನೆಟ್ಟಿ. ಅನ್ನಾಬೆಲ್ ವಾಲ್ಲಿಸ್, ವಾರ್ಡ್ ಹಾರ್ಟನ್, ಅಲ್ಫ್ರೆ ವೂಡಾರ್ಡ್, ಎರಿಕ್ ಲಾಡಿನ್, ಬ್ರಿಯಾನ್ ಹೊವೆ ಈ ಚಿತ್ರ ತಾರೆಗಳು. ದಂಪತಿಗಳು ಭೂತ ಬಂಗಲೆಯಲ್ಲಿ ಕಾಲ ಕಳೆಯುವ ಸನ್ನಿವೇಶಗಳು ರೋಮಾಂಚನಕಾರಿಯಾಗಿದೆ.

English summary
Horror flick "Annabelle" has topped the international box office charts with a collection of $200 million.The film, which opened in the US and Canada the first weekend of October, has collected $206.2 million worldwide.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada