Don't Miss!
- Sports
Ind vs NZ 3rd T20: ಸರಣಿ ಗೆಲ್ಲುವ ಉತ್ಸಾಹದಲ್ಲಿ ಟೀಂ ಇಂಡಿಯಾ: ಪಿಚ್ ವರದಿ ನೋಡಿ ತಂಡದಲ್ಲಿ ಬದಲಾವಣೆ
- News
ತ್ರಿಪುರಾ ಚುನಾವಣೆ: ಟಿಎಂಸಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
- Technology
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾ. ಪ್ರೀತಿ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
167 ಭಾಷೆಗಳಲ್ಲಿ ಬಿಡುಗಡೆ ಆಗಲಿದೆ 'ಅವತಾರ್ 2' ಸಿನಿಮಾ
ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಸಿನಿಮಾಗಳು ಬಹಳ ದೊಡ್ಡ ಯಶಸ್ಸನ್ನು ಗಳಿಸಿವೆ. ಸಿನಿಮಾಗಳನ್ನು ಬೇರೆ ಬೇರೆ ಭಾಷೆಗೆ ಡಬ್ ಮಾಡಿ ವೀಕ್ಷಕರು ತಮ್ಮದೇ ಭಾಷೆಯಲ್ಲಿ ಸಿನಿಮಾವನ್ನು ನೋಡಲು ಅವಕಾಶ ಮಾಡಿಕೊಡುವ ತಂತ್ರ ದೊಡ್ಡ ಲಾಭವನ್ನೇ ನಿರ್ಮಾಪಕರಿಗೆ ಮಾಡಿಕೊಡುತ್ತಿದೆ.
ವಿಶ್ವ ಸಿನಿಮಾಗಳು ಸಹ ಇದೇ ತಂತ್ರವನ್ನು ಅನುಸರಿಸಲು ಮುಂದಾಗಿವೆ. 'ಅವತಾರ್ 2' ಸಿನಿಮಾ ಇದೇ ವರ್ಷಾಂತ್ಯಕ್ಕೆ ಬಿಡುಗಡೆ ಆಗಲಿದ್ದು, ಬರೋಬ್ಬರಿ 167 ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
Avatar
2:
'ಅವತಾರ್
2'
ಟೀಸರ್
ಬಿಡುಗಡೆಗೆ
ದಿನಾಂಕ
ಪ್ರಕಟ
11 ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ 'ಅವತಾರ್' ಸಿನಿಮಾ ಪ್ರೇಕ್ಷಕರನ್ನು ಬೇರೆಯದ್ದೇ ಲೋಕಕ್ಕೆ ಕರೆದೊಯ್ದು ಮಂತ್ರಮುಗ್ಧಗೊಳಿಸಿತ್ತು. ಆ ಸಿನಿಮಾದ ಎರಡನೇ ಭಾಗ ಕೆಲವೇ ತಿಂಗಳಲ್ಲಿ ಬಿಡುಗಡೆ ಆಗುತ್ತಿದೆ. ವಿಶ್ವದಾದ್ಯಂತ ಹಲವು ರಾಷ್ಟ್ರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು, ಎಲ್ಲರೂ ಅವರ ಭಾಷೆಯಲ್ಲಿಯೇ ಸಿನಿಮಾ ನೋಡಲೆಂದು ಹೀಗೆ ಹೆಚ್ಚು ಭಾಷೆಗಳಿಗೆ ಸಿನಿಮಾವನ್ನು ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.
'ಅವತಾರ್
ಪುರುಷ'
ಚಿತ್ರದ
ಬಿಡುಗಡೆ
ದಿನಾಂಕ
ಘೋಷಣೆ

167 ಭಾಷೆಗಳಲ್ಲಿ ಡಬ್ ಮಾಡಲಾಗುತ್ತದೆ
ಈ ಹಿಂದೆ ಹಾಲಿವುಡ್ ಸಿನಿಮಾಗಳನ್ನು ಕೆಲವು ಭಾಷೆಗಳಲ್ಲಿ ಮಾತ್ರವೇ ಡಬ್ ಮಾಡಲಾಗುತ್ತಿತ್ತು, ಚೈನೀಸ್, ಫ್ರೆಂಚ್, ಹಿಂದಿ, ತೆಲುಗು ಇನ್ನಿತರ ಕೆಲವು ಭಾಷೆಗಳಿಗೆ ಡಬ್ ಮಾಡಿ ಅಷ್ಟೆ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ 'ಅವತಾರ್ 2' ಸಿನಿಮಾವನ್ನು ಬರೋಬ್ಬರಿ 167 ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.

ಸಿನಿಮಾ ಬಿಡುಗಡೆ ಯಾವಾಗ?
ವಿಶ್ವದ ಅತಿ ದೊಡ್ಡ ಬಜೆಟ್‌ನ ಸಿನಿಮಾ ಎಂದೇ ಕರೆಸಿಕೊಳ್ಳುತ್ತಿರುವ 'ಅವತಾರ್ 2' ಇದೇ ವರ್ಷ ಡಿಸೆಂಬರ್ 16 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಟೀಸರ್ ಮೇ 06ರಂದು ಬಿಡುಗಡೆ ಆಗಲಿದೆ. ಟೀಸರ್ ಬಿಡುಗಡೆಯ ಮತ್ತೊಂದು ವಿಶೇಷತೆಯೆಂದರೆ 'ಅವತಾರ್ 2' ಸಿನಿಮಾದ ಟೀಸರ್ ಅನ್ನು ಮಾರ್ವೆಲ್ ಸಿನಿಮಾಸ್‌ನ 'ಡಾಕ್ಟರ್ ಸ್ಟ್ರೇಂಜ್' ಸಿನಿಮಾ ಸರಣಿಯ ಹೊಸ ಸಿನಿಮಾದೊಟ್ಟಿಗೆ ಬಿಡುಗಡೆ ಮಾಡಲಾಗುತ್ತಿದೆ. ಇದು ಸಹ ಕುತೂಹಲ ಕೆರಳಿಸಿದೆ. 'ಅವತಾರ್ 2' ಸಿನಿಮಾವನ್ನು ಸಿನಿಮಾದ ನಿರ್ದೇಶಕರೂ ಆಗಿರುವ ಜೇಮ್ಸ್ ಕ್ಯಾಮರೂನ್ ನಿರ್ಮಾಣ ಮಾಡಿದ್ದಾರೆ. ಇವರ ಜೊತೆಗೆ 'ಟೈಟಾನಿಕ್' ಸಿನಿಮಾಕ್ಕೆ ಬಂಡವಾಳ ಹೂಡಿದ್ದ ಜೇಮ್ಸ್ ಲಾಂಡೌ ಸಹ ಇದ್ದಾರೆ. ಸಿನಿಮಾವನ್ನು ಲೈಟ್‌ಸ್ಟ್ರಾಮ್ ನಿರ್ಮಾಣ ಸಂಸ್ಥೆಯ ವತಿಯಿಂದ ನಿರ್ಮಾಣ ಮಾಡಲಾಗುತ್ತಿದೆ. ವಿತರಣೆ ಮಾಡಲಿರುವುದು 20 ಸೆಂಚುರಿ ಫಾಕ್ಸ್.
Recommended Video


'ಅವತಾರ್' ಸರಣಿಯ ಐದು ಸಿನಿಮಾಗಳು ತೆರೆಗೆ ಬರಲಿವೆ
'ಅವತಾರ್ 2' ಹಾಗೂ 'ಅವತಾರ್ 3' ಸಿನಿಮಾ ಏಕಕಾಲದಲ್ಲಿ ಚಿತ್ರೀಕರಣ ಪ್ರಾರಂಭಿಸಿದವು. 2017 ರಲ್ಲಿ ಪ್ರಾರಂಭವಾದ ಚಿತ್ರೀಕರಣ ಇದೀಗ ಐದು ವರ್ಷಗಳ ಬಳಿಕ ಬಹುತೇಕ ಪೂರ್ಣವಾಗಿದ್ದು ಕೆಲವು ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಬಳಿಕ ಮೊದಲಿಗೆ 'ಅವತಾರ್ 2' ಸಿನಿಮಾ ಇದೇ ವರ್ಷದ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ನಂತರ 2024ರ ಡಿಸೆಂಬರ್ ವೇಳೆಗೆ 'ಅವತಾರ್ 3' ಸಿನಿಮಾ ಬಿಡುಗಡೆ ಆಗಲಿದೆ. ಆ ಬಳಿಕ ಅವತಾರ್ ಸಿನಿಮಾ ಸರಣಿಯ ನಾಲ್ಕನೇ ಸಿನಿಮಾ 'ಅವತಾರ್: ಟಲ್ಕನ್ ರೈಡರ್' ಸಿನಿಮಾ 2026 ಕ್ಕೆ ಬಿಡುಗಡೆ ಆಗಲಿದೆ. ಬಳಿಕ 2028 ಕ್ಕೆ 'ಅವತಾರ್ 5' ಬಿಡುಗಡೆ ಆಗಲಿದೆ. ಈ ಎಲ್ಲ ಸಿನಿಮಾಗಳನ್ನು ಜೇಮ್ಸ್ ಕ್ಯಾಮರನ್ ಅವರೇ ನಿರ್ದೇಶಿಸಲಿದ್ದಾರೆ.

ನಿರ್ದೇಶಕ ಜೇಮ್ಸ್ ಕ್ಯಾಮೆರಾನ್
ಜೇಮ್ಸ್ ಕ್ಯಾಮೆರಾನ್ ವಿಶ್ವದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. 1982 ರಲ್ಲಿ 'ಫಿರ್ಹಾನಾ 2' ಸಿನಿಮಾ ಮೂಲಕ ನಿರ್ದೇಶನ ಆರಂಭಿಸಿದ ಜೇಮ್ಸ್, ಆ ಬಳಿಕ ಆಲ್ ಟೈಮ್ ಬ್ಲಾಕ್ ಬಸ್ಟರ್ 'ಟರ್ಮಿನೇಟರ್', 'ಟರ್ಮಿನೇಟರ್ 2' ಸಿನಿಮಾಗಳನ್ನು ನಿರ್ದೇಶಿಸಿದರು. ಅದರ ಜೊತೆ 'ಏಲಿಯನ್ಸ್', 'ದಿ ಅಬಿಸ್', 'ಟ್ರು ಲೈಸ್', 'ಗೋಸ್ಟ್ಸ್ ಆಫ್ ದಿ ಅಬೀಸ್', 'ಏಲಿಯನ್ಸ್ ಆಫ್ ದಿ ಡೀಪ್', 'ಅವತಾರ್' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. 2009 ರಲ್ಲಿ ಬಿಡುಗಡೆ ಆದ 'ಅವತಾರ್' ಸಿನಿಮಾದ ಬಳಿಕ ಇನ್ಯಾವ ಸಿನಿಮಾವನ್ನು ಜೇಮ್ಸ್ ನಿರ್ದೇಶಿಸಿಲ್ಲ. ತಮ್ಮನ್ನು ಸಂಪೂರ್ಣವಾಗಿ 'ಅವತಾರ್' ಸಿನಿಮಾ ಸರಣಿಗೆ ಸಮರ್ಪಿಸಿಕೊಂಡಿದ್ದಾರೆ ಜೇಮ್ಸ್.