Don't Miss!
- Technology
ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್ಫೋನ್ಗಳ ವಿವರ ಇಲ್ಲಿದೆ!
- News
Philips Layoffs : ಫಿಲೀಪ್ಸ್ನಿಂದ 6000 ಉದ್ಯೋಗಿಗಳ ವಜಾ
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಅವತಾರ್ 2' ಅಸಲಿ ಟೈಟಲ್ 'ಅವತಾರ್: ದಿ ವೇ ಆಫ್ ವಾಟರ್'!
ಹಾಲಿವುಡ್‌ನ 'ಅವತಾರ್' ಚಿತ್ರವನ್ನು ನೀವೆಲ್ಲಾ ನೋಡಿರ್ತೀರಾ. ಆ ಚಿತ್ರದ ಮುಂದಿನ ಭಾಗ ಯಾವಾಗ ಎಂದು ಕಾಯುತ್ತಿದ್ದವರಿಗೆ ಈಗಾಗಲೇ ರಿಲೀಸ್ ದಿನಾಂಕದ ಮೂಲಕ ಚಿತ್ರತಂಡ ಉತ್ತರ ಕೊಟ್ಟಿದೆ. ನೀವು ಇಷ್ಟು ದಿನ 'ಅವತಾರ್ 2' ಎಂದು ಕರೆಯುತ್ತಿದ್ದ ಚಿತ್ರದ ಶೀರ್ಷಿಕೆ ಅದಲ್ಲ. ಇನ್ನು 'ಅವತಾರ್' ಭಾಗ ಎರಡನ್ನು 'ಅವತಾರ್: ದಿ ವೇ ಆಫ್ ವಾಟರ್' ಎಂದು ಕರೆಯಬೇಕು. ಇದು ಜೇಮ್ಸ್ ಕ್ಯಾಮರೂನ್ ನಿರ್ದೇಶನದಲ್ಲಿ 2009ರಲ್ಲಿ ಬಂದು ಬ್ಲಾಕ್ ಬಸ್ಟರ್ ಹಿಟ್ ಆದ 'ಅವತಾರ್' ಚಿತ್ರದ ಮುಂದುವರೆದ ಭಾಗದ ಅಧಿಕೃತ ಶೀರ್ಷಿಕೆಯಾಗಿದೆ.
ಲಾಸ್ ವೇಗಾಸ್‌ನಲ್ಲಿ ನಡೆಯುತ್ತಿರುವ 'ಸಿನಿಮಾಕಾನ್ 2022' ಸಮಾವೇಶದಲ್ಲಿ ಈ ಶೀರ್ಷಿಕೆಯನ್ನು ಘೋಷಣೆ ಮಾಡಲಾಯಿತು. 20th ಸೆಂಚುರಿ ಸ್ಟುಡಿಯೋಸ್‌ನ ಮೂಲ ಕಂಪನಿಯಾದ ಡಿಸ್ನಿ ಈ ಸಮಾವೇಶದಲ್ಲಿ ಚಿತ್ರದ ಅಧಿಕೃತ ಟೈಟಲ್ ಘೋಷಣೆಯನ್ನು ಮಾಡಿದೆ.
167
ಭಾಷೆಗಳಲ್ಲಿ
ಬಿಡುಗಡೆ
ಆಗಲಿದೆ
'ಅವತಾರ್
2'
ಸಿನಿಮಾ
ಜೇಮ್ಸ್ ಕ್ಯಾಮರೂನ್ ಮತ್ತು ನಿರ್ಮಾಪಕ ಜಾನ್ ಲ್ಯಾಂಡೌ ಈ ಸಮಾವೇಶದಲ್ಲಿ ನ್ಯೂಜಿಲೆಂಡ್‌ನಿಂದ ವರ್ಚುವಲ್ ತಂತ್ರಜ್ಞಾನದ ಮೂಲಕ ಪಾಲ್ಗೊಂಡಿದ್ದರು. ಇದೇ ವೇಳೆ 'ಅವತಾರ್: ದಿ ವೇ ಆಫ್ ವಾಟರ್' ಚಿತ್ರದ ವಿಶೇಷ ತುಣುಕನ್ನು ಪ್ರದರ್ಶಿಸಲಾಯಿತು.
'ಅವತಾರ್: ದಿ ವೇ ಆಫ್ ವಾಟರ್' ಟ್ರೈಲರ್ ತುಣುಕುಗಳು ಜೇಕ್ ಮತ್ತು ನೆಯ್ಟಿರಿಯ ಮೇಲೆ ಕೇಂದ್ರೀಕರಿಸಿದ್ದು, ಅನ್ಯಲೋಕ 'ಪಂಡೋರಾ'ದ ಪ್ರಕಾಶಮಾನವಾದ ನೀಲಿ ನೀರಿನ ಸುಂದರವಾದ ಚಿತ್ರಣಗಳನ್ನು ಒಳಗೊಂಡಿದೆ. ಮೊದಲ ಭಾಗದಲ್ಲಿ ಪರಿಚಯಿಸಲಾದ ಹಾರುವ ಜೀವಿಯಾದ 'ತೊರುಕ್' ಮತ್ತು ಹೊಸ ತಿಮಿಂಗಿಲದಂತಹ ಜೀವಿಗಳ ಸೃಷ್ಟಿ ಇದರಲ್ಲಿದೆ ಎನ್ನುವುದು ತಿಳಿದು ಬಂದಿದೆ.
ಮಗಳಿಗೆ
ಭಾರತೀಯ
ಹೆಸರಿಟ್ಟ
ಪ್ರಿಯಾಂಕಾ-ನಿಕ್
"ಜೇಮ್ಸ್ ಕ್ಯಾಮರೂನ್ ಸ್ಕ್ರಿಪ್ಟ್‌ಗಳ ಸಾಮರ್ಥ್ಯವೆಂದರೆ, ಸಾರ್ವತ್ರಿಕ ವಿಷಯಗಳನ್ನು ಯಾವಾಗಲು ತಮ್ಮ ಕಥೆಯಲ್ಲಿ ಹೆಣೆಯುತ್ತಾರೆ. ಈ ನಾಲ್ಕು ಸೀಕ್ವೆಲ್‌ಗಳ ಕೇಂದ್ರ ಬಿಂದು ಸುಲ್ಲಿ ಕುಟುಂಬ. ಪ್ರತಿಯೊಂದು ಕಥೆಯು ಅದ್ವಿತೀಯವಾಗಿರುತ್ತದೆ ಮತ್ತು ಪ್ರತಿಯೊಂದೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರತಿ ಚಿತ್ರಕ್ಕೂ ಒಂದು ಪೂರ್ಣವಾದ ನಿರ್ಣಯವಿರುತ್ತದೆ. ಆದರೆ ಒಟ್ಟಾರೆಯಾಗಿ ನೋಡಿದಾಗ, ನಾಲ್ಕು ಸೀಕ್ವೆಲ್‌ಗಳ ನಡುವಿನ ಪ್ರಯಾಣ ಒಂದು ದೊಡ್ಡ ಮಹಾಕಾವ್ಯವನ್ನು ಸೃಷ್ಟಿಸುತ್ತದೆ." ಎಂದು ಜಾನ್ ಲ್ಯಾಂಡೌ ಹೇಳಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ನಿರ್ದೇಶಕ "ಪಂಡೋರಾಗೆ ನಾವು ಹಿಂತಿರುಗುವುದು ನಿಜವಾಗಿಯೂ ವಿಶೇಷವಾಗಿದೆ ಎಂದು ನಾನು ಬಯಸುತ್ತೇನೆ. ಪ್ರತಿ ದೃಶ್ಯವನ್ನು ದೊಡ್ಡ ಪರದೆ ಮೇಲೆ, ಹೆಚ್ಚಿನ ರೆಸಲ್ಯೂಶನ್ ಜೊತೆಗೆ 3Dಗಾಗಿ ವಿನ್ಯಾಸಗೊಳಿಸಲಾಗಿದೆ. ನಾವು ಅದನ್ನು ಸಾಧಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ". ಎಂದು ಜೇಮ್ಸ್ ಕ್ಯಾಮರೂನ್ ಹೇಳಿದ್ದಾರೆ.
ಈ ಸೈನ್ಸ್ ಫಿಕ್ಷನ್ ಸಿನಿಮಾ 'ಅವತಾರ್: ದಿ ವೇ ಆಫ್ ವಾಟರ್' ಇದೇ ಡಿಸೆಂಬರ್ 16 ರಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.