Don't Miss!
- News
ಫೆಬ್ರವರಿ 2023ರ ಮಾಸಭವಿಷ್ಯ: ಸಂಕ್ರಮಣದ ನಂತರದ ಫೆಬ್ರವರಿ ತಿಂಗಳಿನಲ್ಲಿ ಯಾವೆಲ್ಲ ರಾಶಿಗಳಿಗೆ ಶುಭವಾಗಲಿದೆ?
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಅವತಾರ್' 3, 4 ಚಿತ್ರೀಕರಣ ಈಗಾಗಲೇ ಮುಗಿದೆ! ಆತುರದ ಚಿತ್ರೀಕರಣ ಮಾಡಿದ್ದೇಕೆ?
ಜೇಮ್ಸ್ ಕ್ಯಾಮರನ್ ನಿರ್ದೇಶನದ 'ಅವತಾರ್' ಸಿನಿಮಾದ ಎರಡನೇ ಭಾಗ 'ಅವತಾರ್; ದಿ ವೇ ಆಫ್ ವಾಟರ್' ಕಳೆದ ವಾರವಷ್ಟೆ ಬಿಡುಗಡೆ ಆಗಿ ವಿಶ್ವದಾದ್ಯಂತ ಸೂಪರ್-ಡೂಪರ್ ಹಿಟ್ ಆಗಿದೆ.
'ಅವತಾರ್' ಸಿನಿಮಾ ಬಂದ ಬರೋಬ್ಬರಿ 13 ವರ್ಷದ ಬಳಿಕ ಎರಡನೇ ಭಾಗ ಬಿಡುಗಡೆ ಆಗಿದೆ. ಹಾಗಿದ್ದರೂ ಸಹ ಜನ ಸಾಲುಗಟ್ಟಿ ಸಿನಿಮಾ ವೀಕ್ಷಿಸುತ್ತಿದ್ದಾರೆ.
ಅವತಾರ್
2
ಮೊದಲ
ವಾರಾಂತ್ಯ
ಯಾವ
ದೇಶಗಳಲ್ಲಿ
ಅತಿಹೆಚ್ಚು
ಕಲೆಕ್ಷನ್
ಮಾಡಿದೆ?
ಇಲ್ಲಿದೆ
ಟಾಪ್
6
ಪಟ್ಟಿ
ಮೊದಲ ಸಿನಿಮಾ ಬಿಡುಗಡೆ ಆಗಿ 9-10 ವರ್ಷದ ಬಳಿಕ ಎರಡನೇ ಭಾಗ ಚಿತ್ರೀಕರಣ ಆರಂಭಿಸಿದ್ದರು ನಿರ್ದೇಶಕ ಜೇಮ್ಸ್ ಕ್ಯಾಮರನ್. ಆದರೆ 'ಅವತಾರ್' ಸಿನಿಮಾ ಮುಂದಿನ ಭಾಗಗಳನ್ನು ಹೀಗೆ ವರ್ಷಗಟ್ಟಲೆ ತಡವಾಗಿ ತೆರೆಗೆ ತರುವುದಿಲ್ಲ ಎಂದು ಖಾತ್ರಿ ಪಡಿಸಿದ್ದಾರೆ. ಅಸಲಿಗೆ 'ಅವತಾರ್' ಸಿನಿಮಾದ ಮೂರು ಹಾಗೂ ನಾಲ್ಕನೇ ಭಾಗದ ಚಿತ್ರೀಕರಣ ಸಹ ಮುಗಿದು ಹೋಗಿದೆಯಂತೆ! ಇದಕ್ಕೆ ಕಾರಣವೂ ಇದೆ.

ಮೂರನೇ ಹಾಗೂ ನಾಲ್ಕನೇ ಭಾಗದ ಚಿತ್ರೀಕರಣ ಮುಗಿದಿದೆ
'ಅವತಾರ್' ಸಿನಿಮಾದ ಮೂರು ಹಾಗೂ ನಾಲ್ಕನೇ ಭಾಗದ ಚಿತ್ರೀಕರಣ ಮುಗಿದು ಬಿಟ್ಟಿದೆ. ಅದರಲ್ಲಿಯೂ ಅವತಾರ್ ಸಿನಿಮಾದ ಮೂರನೇ ಭಾಗದ ಪೋಸ್ಟ್ ಪ್ರೊಡಕ್ಷನ್ ಕಾರ್ಯವೂ ಪೂರ್ಣವಾಗಿದೆಯಂತೆ! ನಾಲ್ಕನೇ ಭಾಗದ ಪೋಸ್ಟ್ ಪ್ರೊಡಕ್ಷನ್ ಕಾರ್ಯವಷ್ಟೆ ಬಾಕಿ ಉಳಿದುಕೊಂಡಿದೆ. 'ಅವತಾರ್ 2' ಸಿನಿಮಾ ಚಿತ್ರೀಕರಿಸುವಾಗಲೇ ಮೂರು ಹಾಗೂ ನಾಲ್ಕನೇ ಭಾಗದ ಚಿತ್ರೀಕರಣ ಮಾಡಿಬಿಟ್ಟಿದ್ದಾರೆ ಜೇಮ್ಸ್ ಕ್ಯಾಮರನ್. ಇದಕ್ಕೆ ಕಾರಣವೂ ಇದೆ.

ಮಕ್ಕಳ ದೇಹಾಕಾರ, ಮುಖ ಲಕ್ಷಣ ಬದಲಾಗುತ್ತದೆ
ಹೀಗೆ ಒಟ್ಟಿಗೆ ಮೂರು ಸಿನಿಮಾಗಳ ಚಿತ್ರೀಕರಣ ಮಾಡಲು ಮುಖ್ಯ ಕಾರಣವೆಂದರೆ ಪಾತ್ರಧಾರಿಗಳ ವಯಸ್ಸು. ಈಗ ಬಿಡುಗಡೆ ಆಗಿರುವ 'ಅವತಾರ್; ದಿ ವೇ ಆಫ್ ವಾಟರ್' ಸಿನಿಮಾದಲ್ಲಿ ಕೆಲವು ಮಕ್ಕಳು, ಯುವಕ-ಯುವತಿಯರನ್ನು ಬಳಸಿಕೊಳ್ಳಲಾಗಿದೆ. ಒಂದೊಮ್ಮೆ ಒಟ್ಟಿಗೆ ಚಿತ್ರೀಕರಣ ಮಾಡಲಿಲ್ಲವೆಂದರೆ ಅವರಿಗೆ ವಯಸ್ಸಾಗಿ ಅವರ ಮುಖ, ದೇಹಾಕಾರದ ಬದಲಾವಣೆ ಆಗುತ್ತದೆಂಬ ಕಾರಣಕ್ಕೆ ಅವರು ಬಾಲ್ಯಾವಸ್ಥೆಯಲ್ಲಿರುವ ಕತೆ ಇರುವ ಸಿನಿಮಾಗಳ ಚಿತ್ರೀಕರಣವನ್ನು ಒಟ್ಟಿಗೆ ಮುಗಿಸಿಬಿಟ್ಟಿದ್ದಾರೆ.

ಪಾತ್ರಧಾರಿಗಳ ಕಾರಣದಿಂದ ಬೇಗನೆ ಚಿತ್ರೀಕರಣ
ಸ್ವತಃ ಜೇಮ್ಸ್ ಕ್ಯಾಮರನ್ ಹೇಳಿರುವಂತೆ, 'ಅವತಾರ್; ದಿ ವೇ ಆಫ್ ವಾಟರ್' ಸಿನಿಮಾದಲ್ಲಿ ಜೇಕ್ ಸುಲಿಯ ಕೊನೆಯ ಮಗಳು ಕುಟು ಪಾತ್ರದಲ್ಲಿ ನಟಿಸಿರುವ ಟ್ರಿನಿಟಿ ಜೋ-ಲಿ ಬ್ಲಿಸ್ ಅನ್ನು ಸಿನಿಮಾಕ್ಕಾಗಿ ತೆಗೆದುಕೊಂಡಾಗ ಆಕೆಗೆ ಏಳು ವರ್ಷ ವಯಸ್ಸು, ಈಗ 13 ವರ್ಷ. ಇಷ್ಟು ಅವಧಿಯಲ್ಲಿ ಆಕೆಯ ದೇಹಾಕಾರ, ಮುಖದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸೊಕೊರೊ ಪಾತ್ರದಲ್ಲಿ ನಟಿಸಿರುವ ಜಾಕ್ ಚಾಂಪಿಯನ್ ಅನ್ನು ಸಿನಿಮಾಕ್ಕಾಗಿ ತೆಗೆದುಕೊಂಡಾಗ ಅವನಿಗೆ 12 ವರ್ಷ ವಯಸ್ಸು ಈಗ 18 ವರ್ಷ ಮಕ್ಕಳು ಬಹಳ ಬೇಗನೆ ಬೆಳೆದು ಬಿಡುತ್ತಾರೆ'' ಎಂದಿದ್ದಾರೆ ಜೇಮ್ಸ್.

ಬಿಡುಗಡೆ ತಡವಾಗಿಯೇ ಆಗಲಿದೆ
ಮಕ್ಕಳ ಪಾತ್ರಗಳಲ್ಲಿ ಬದಲಾವಣೆ ಮಾಡಲು ಸಾಧ್ಯವಾಗದ ಕಾರಣ ಹಾಗೂ ಮುಂದಿನ ಎರಡು ಸಿನಿಮಾಗಳ ಕತೆಗಳಲ್ಲಿ ಮಕ್ಕಳ ಪಾತ್ರಗಳು ಅದೇ ವಯಸ್ಸಿನಲ್ಲಿಯೇ ಇರಲಿವೆಯಾದ್ದರಿಂದ ತಡ ಮಾಡದೆ ಒಟ್ಟಿಗೆ ಮೂರು ಸಿನಿಮಾದ ಚಿತ್ರೀಕರಣ ಮಾಡಿದೆವು ಎಂದಿದ್ದಾರೆ. ಒಟ್ಟಿಗೆ ಚಿತ್ರೀಕರಣವಾಗಿದ್ದರೂ ಸಹ ಸಿನಿಮಾದ ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯವಿದೆ. 'ಅವತಾರ್ 3' 2024 ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆದರೆ, 'ಅವತಾರ್ 4' ಸಿನಿಮಾ 2026 ರ ಡಿಸೆಂಬರ್‌ನಲ್ಲಿ ಬಿಡುಗಡೆ ಆಗಲಿದೆ.