Don't Miss!
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಅವತಾರ್ - 2' ಚಿತ್ರಕ್ಕೂ ಲೀಕಾಸುರರ ಕಾಟ: ಸಂಪೂರ್ಣ ಸಿನಿಮಾ ಪೈರಸಿ ಲಿಂಕ್‌ಗಳು ವೈರಲ್
ವಿಶ್ವದಾದ್ಯಂತ 'ಅವತಾರ್'- 2 ಆರ್ಭಟ ಶುರುವಾಗಿದೆ. ಬೆಳ್ಳಂಬೆಳಗ್ಗೆಯಿಂದಲೇ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಭಾರತದಲ್ಲೂ ಸಿನಿಮಾ ಕ್ರೇಜ್ ಜೋರಾಗಿದ್ದು, ಭರ್ಜರಿ ಓಪನಿಂಗ್ ಸಿಗುವ ನಿರೀಕ್ಷೆಯಿದೆ. ಆದರೆ ಒಂದು ದಿನ ಮೊದಲೇ ಸಿನಿಮಾ ಪೈರಸಿ ಆಗಿದೆ. ಇದು ಸಿನಿಮಾ ಕಲೆಕ್ಷನ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಸ್ಯಾಂಡಲ್‌ವುಡ್‌ನಿಂದ ಹಾಲಿವುಡ್‌ವರೆಗೆ ಪೈರಸಿ ಎನ್ನುವುದು ಸರ್ವೇಸಾಮಾನ್ಯ ಎನ್ನುವಂತಾಗಿಬಿಟ್ಟಿದೆ. ದೊಡ್ಡ ದೊಡ್ಡ ಸಿನಿಮಾಗಳಿಗೆ ಇದರಿಂದ ಭಾರೀ ಪೆಟ್ಟು ಬೀಳುತ್ತಿದೆ. ಈಗಾಗಲೇ 'ಅವತಾರ್- 2' ಸಿನಿಮಾ ಕಾಪಿಗಳನ್ನು ಟೆಲಿಗ್ರಾಂ ಹಾಗೂ ಟೊರೆಂಟ್ ವೆಬ್‌ಸೈಟ್‌ಗಳಲ್ಲಿ ಕಿಡಿಗೇಡಿಗಳು ಅಪ್‌ಲೋಡ್ ಮಾಡಿದ್ದಾರೆ. ಸಿನಿಮಾ ಲೀಕ್ ಮಾಡಿ ಲಿಂಕ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಲಂಡನ್‌ನಲ್ಲಿ ಡಿಸೆಂಬರ್ 6ರಂದೇ 'ಅವತಾರ್- 2' ಸಿನಿಮಾ ರಿಲೀಸ್ ಆಗಿತ್ತು.
ರಿಲೀಸ್‌ಗೂ
ಮೊದ್ಲೆ
ದೇಶದಲ್ಲಿ
'ಅವತಾರ್'-
2
ಕಲೆಕ್ಷನ್
12
ಕೋಟಿ:
ಎಷ್ಟು
ಸ್ಕ್ರೀನ್ಸ್,
ಕಾಲಾವಧಿ
ಎಷ್ಟು?
ಕಳೆದೊಂದು ವಾರದಿಂದ ಭಾರತ ಸೇರಿದಂತೆ ವಿದೇಶಗಳಲ್ಲಿ ಪ್ರೀಮಿಯರ್ ಶೋಗಳು ನಡೀತಿದೆ. ಹಾಗಾಗಿ ಕಿಡಿಗೇಡಿಗಳು ಸಿನಿಮಾ ಶೂಟ್ ಮಾಡಿ ಲೀಕ್ ಮಾಡಿದ್ದಾರೆ. ಸಿನಿಮಾ ರಿಲೀಸ್‌ಗೂ ಒಂದು ದಿನ ಮೊದಲೇ ಹೀಗೆ ಪೈರಸಿ ಆಗಿರುವುದು ಸಹಜವಾಗಿಯೇ ಚಿತ್ರತಂಡ ಹಾಗೂ ವಿತರಕರಿಗೆ ಆತಂಕ ತಂದಿದೆ.

ದೇಶಾದ್ಯಂತ 4000 ಸ್ಕ್ರೀನ್ಸ್
ಭಾರತದಲ್ಲೂ ಹಾಲಿವುಡ್ ಸಿನಿರಸಿಕರು 'ಅವತಾರ್- 2' ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ. ದೇಶ್ಯಾದ್ಯಂತ ಚಿತ್ರವನ್ನು ಬಹಳ ದೊಡ್ಡಮಟ್ಟದಲ್ಲಿ ಪ್ರೇಕ್ಷಕರ ಮುಂದೆ ತರಲಾಗಿದೆ. 4000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಜೇಮ್ಸ್ ಕ್ಯಾಮರೂನ್ ದೃಶ್ಯಕಾವ್ಯ ಅನಾವರಣವಾಗಿದೆ. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ನಲ್ಲೂ ಸಿನಿಮಾ ದಾಖಲೆ ಬರೆದಿದೆ. ಈಗಾಗಲೇ ಶೋಗಳು ಶುರುವಾಗಿದ್ದು, ಪ್ರೇಕ್ಷಕರು ಸಿನಿಮಾ ಕಣ್ತುಂಬಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಇಂಗ್ಲೀಷ್ ಸೇರಿ 6 ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸಿದೆ.
1000,
1200,
1450
ರೂಪಾಯಿಗಳಿಗೆ
'ಅವತಾರ್
2'
ಟಿಕೆಟ್
ಸೇಲ್;
ಭಾರತದ
ಯಾವ
ನಗರದಲ್ಲಿ
ದುಬಾರಿ?

KGF - 2 ಆ ದಾಖಲೆ ಉಡೀಸ್
ದೇಶದಲ್ಲಿ ರಿಲೀಸ್‌ಗೂ ಮೊದಲು ಅತಿ ಹೆಚ್ಚು ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆದ ಸಿನಿಮಾಗಳ ಲಿಸ್ಟ್‌ನಲ್ಲಿ 'KGF - 2' ಮೊದಲ ಸ್ಥಾನದಲ್ಲಿತ್ತು. ಆದರೆ ಇದೀಗ ಆ ದಾಖಲೆ 'ಅವತಾರ್- 2' ಪಾಲಾಗಿದೆ. ಫಸ್ಟ್ ವೀಕೆಂಡ್‌ನಲ್ಲಿ 'ಅವತಾರ್- 2' ಸಿನಿಮಾ ನೋಡೋಕೆ ಈಗಾಗಲೇ 4,41,960 ಜನ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ. 'KGF' ಸೀಕ್ವೆಲ್ ನೋಡೊಕೆ 4,11,000 ಜನ ಟಿಕೆಟ್ ಬುಕ್ ಮಾಡಿಕೊಂಡಿದ್ದು ಈ ಹಿಂದೆ ದಾಖಲೆಯಾಗಿತ್ತು.

2D, 3D, ಐಮ್ಯಾಕ್ಸ್‌ನಲ್ಲಿ 'ಅವತಾರ್- 2'
'ಅವತಾರ್- 2' ಚಿತ್ರವನ್ನು 2D, 3D, ಐಮ್ಯಾಕ್ಸ್‌ನಲ್ಲಿ ವರ್ಷನ್‌ಗಳಲ್ಲಿ ಪ್ರೇಕ್ಷಕರ ಮುಂದೆ ತರಲಾಗಿದೆ. ದಶಕದ ಹಿಂದೆಯೇ 3Dಯಲ್ಲಿ 'ಅವತಾರ್' ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಅದರ ಸೀಕ್ವೆಲ್ ಅಂದಮೇಲೆ ಕೇಳಬೇಕಾ? ಅದಕ್ಕಿಂತ ರೋಚಕ ಅನುಭವ ನೀಡುವುದು ಗ್ಯಾರೆಂಟಿ. ಇನ್ನು ಸಿನಿಮಾ ಪೈರಸಿ ಆದರೂ ಕೂಡ ಪ್ರೇಕ್ಷಕರು ಥಿಯೇಟರ್‌ಗಳಲ್ಲಿ ಸಿನಿಮಾ ನೋಡುವ ಸಾಧ್ಯತೆ ಹೆಚ್ಚು. ಕಾರಣ ಇದು 3Dಗಾಗಿ ಮಾಡಿರುವ ಸಿನಿಮಾ. ಇದನ್ನು 3D ಕನ್ನಡಕದಲ್ಲಿ ನೋಡುವ ಮಜಾನೇ ಬೇರೆ.

ಭಾರೀ ಓಪನಿಂಗ್ ನಿರೀಕ್ಷೆ
'ಅವತಾರ್' ಸಿನಿಮಾ ಅಲ್ಲಿವರೆಗೆ ಇದ್ದ ಬಾಕ್ಸಾಫೀಸ್ ದಾಖಲೆಗಳನ್ನುಅಳಿಸಿ ಹೊಸ ದಾಖಲೆ ಬರೆದಿತ್ತು. ಇದೀಗ 'ಅವತಾರ್- 2' ಕೂಡ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಭಾರತದಲ್ಲಿ ಬರೀ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ನಿಂದಲೇ 12 ಕೋಟಿ ಕಲೆಕ್ಷನ್ ಆಗಿತ್ತು. ಆದರೆ ಪ್ರೀಮಿಯರ್ ಶೋಗಳಲ್ಲಿ ಸಿನಿಮಾ ನೋಡಿದವರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಹಾಗಾಗಿ ಜೇಮ್ಸ್ ಕ್ಯಾಮರೂನ್ ಸಿನಿಮಾ ಭವಿಷ್ಯ ಏನಾಗುತ್ತಾ ಕಾದು ನೋಡಬೇಕು.