For Quick Alerts
  ALLOW NOTIFICATIONS  
  For Daily Alerts

  ಧನುಶ್ ನಟನೆಯ ಹಾಲಿವುಡ್ ಸಿನಿಮಾ ಟ್ರೇಲರ್ ಬಿಡುಗಡೆ: ಅಭಿಮಾನಿಗಳಿಗೆ ನಿರಾಸೆ

  |

  ತಮಿಳು ನಟ ಧನುಶ್ ತಮ್ಮ ಪ್ರತಿಭೆಯಿಂದ ಗಡಿಗಳನ್ನೆಲ್ಲ ದಾಟಿ ಸಾಗುತ್ತಿದ್ದಾರೆ. ತಮಿಳು ಮಾತ್ರವೇ ಅಲ್ಲದೆ, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿಯೂ ನಟಿಸಿ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

  ಧನುಶ್‌ ಅದ್ಭುತ ನಟನಾ ಪ್ರತಿಭೆಯಿಂದಾಗಿ ಹಾಲಿವುಡ್ ಆಫರ್ ಸಹ ಅವರನ್ನು ಅರಸಿ ಬಂದಿತ್ತು. ಇದೀಗ ಧನುಶ್ ನಟನೆಯ ಹಾಲಿವುಡ್ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಆದರೆ ಟ್ರೇಲರ್ ನೋಡಿದ ಧನುಶ್ ಅಭಿಮಾನಿಗಳಿಗೆ ಬೇಸರವಾಗಿದೆ.

  ಧನುಶ್, ಹಾಲಿವುಡ್‌ನ 'ದಿ ಗ್ರೇ ಮ್ಯಾನ್' ಹೆಸರಿನ ಆಕ್ಷನ್, ಥ್ರಿಲ್ಲರ್ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ ಟ್ರೇಲರ್ ನಿನ್ನೆಯಷ್ಟೆ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದ್ದು, ಟ್ರೇಲರ್‌ನಲ್ಲಿ ಧನುಶ್ ಕಾಣಿಸಿಕೊಳ್ಳುವುದು ಎರಡು ಸೆಕೆಂಡ್ ಮಾತ್ರ!

  'ದಿ ಗ್ರೇ ಮ್ಯಾನ್' ಸಿನಿಮಾದ ಟ್ರೇಲರ್ ತುಂಬಾ ರ್ಯಾನ್ ಗೋಸ್ಲಿಂಗ್ ಹಾಗೂ ಕ್ರಿಸ್ ಇವಾನ್ಸ್ ಇಬ್ಬರೇ ತುಂಬಿಕೊಂಡಿದ್ದಾರೆ. ಟ್ರೇಲರ್‌ನಲ್ಲಿ ಧನುಶ್ ಸರಿಯಾಗಿ ಕಾಣುವುದು ಒಮ್ಮೆ ಮಾತ್ರ, ಇನ್ನೆರಡು ದೃಶ್ಯಗಳಲ್ಲಿ ಒಂದು ದೃಶ್ಯದಲ್ಲಿ ಧನುಶ್ ಒಬ್ಬನನ್ನು ಒದ್ದರೆ ಮತ್ತೊಂದು ದೃಶ್ಯದಲ್ಲಿ ಏಟು ತಿನ್ನುತ್ತಿದ್ದಾರೆ. ಈ ಮೂರು ದೃಶ್ಯಗಳು ಸರಿಯಾಗಿ ಎರಡು ಸೆಕೆಂಡ್ ಸಹ ಇಲ್ಲ.

  'ದಿ ಗ್ರೇ ಮ್ಯಾನ್' ಸಿನಿಮಾವು ಅದೇ ಹೆಸರಿನ ಕಾದಂಬರಿ ಆಧರಿತ ಸಿನಿಮಾ ಆಗಿದ್ದು, ಸಿಐಎ ಏಜೆಂಟ್ ಹಾಗೂ ಭಿನ್ನ ಮನಸ್ಥಿತಿಯ ಅಪರಾಧಿಯ ನಡುವೆ ನಡೆವ ಮಾರಾ-ಮಾರಿಯ ಕತೆಯನ್ನು 'ದಿ ಗ್ರೇ ಮ್ಯಾನ್' ಸಿನಿಮಾ ಹೊಂದಿದೆ. ಸಿನಿಮಾದಲ್ಲಿ ರ್ಯಾನ್ ಗೋಸ್ಲಿಂಗ್, ಕ್ರಿಸ್ ಇವಾನ್ಸ್, ಧನುಶ್ ಮಾತ್ರವೇ ಅಲ್ಲದೆ ಅನಾ ಡೆ ಅರ್ಮಾಸ್, ಜೆಸ್ಸಿಕಾ ಹೆನ್ವಿಕ್ ಇನ್ನೂ ಹಲವರಿದ್ದಾರೆ.

  'ಅವೇಂಜರ್ಸ್: ಎಂಡ್‌ ಗೇಮ್', 'ಅವೇಂಜರ್ಸ್; ಇನ್‌ಫಿನಿಟಿ ವಾರ್', 'ಕ್ಯಾಪ್ಟನ್ ಅಮೆರಿಕ; ಸಿವಿಲ್ ವಾರ್', 'ಕ್ಯಾಪ್ಟರ್ ಅಮೆರಿಕ; ವಿಂಟರ್ ಸೋಲ್ಜರ್', 'ಎಕ್ಸ್‌ಟಾರ್ಶನ್' ಇನ್ನೂ ಕೆಲವು ಸೂಪರ್ ಹಿಟ್ ಆಕ್ಷನ್ ಸಿನಿಮಾ ನಿರ್ದೇಶನ ಮಾಡಿರುವ ರುಸ್ಸೊ ಬ್ರದರ್ಸ್‌ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

  'ದಿ ಗ್ರೇ ಮ್ಯಾನ್' ಸಿನಿಮಾವು ಜುಲೈ 15 ರಂದು ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಆ ನಂತರ ಜುಲೈ 22 ರಂದು ನೆಟ್‌ಫ್ಲಿಕ್ಸ್‌ ನಲ್ಲಿ ಬಿಡುಗಡೆ ಆಗಲಿದೆ.

  English summary
  Dhanush starrer Hollywood movie The Gray Man trailer released. Movie will release on July 22 on Netflix.
  Wednesday, May 25, 2022, 9:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X