For Quick Alerts
  ALLOW NOTIFICATIONS  
  For Daily Alerts

  ಪುಸ್ತಕ ರೂಪದಲ್ಲಿ ಬರುತ್ತಿದೆ ಹಾಲಿವುಡ್ ಎವರ್ ಗ್ರೀನ್ ನಿರ್ದೇಶಕನ ಸಿನಿಮಾ

  By Suneetha
  |

  'ಗಾಡ್ ಫಾದರ್' ಚಿತ್ರದ ಖ್ಯಾತಿಯ ಹಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ಫ್ರಾನ್ಸಿಸ್ ಕೊಪ್ಪೋಲಾ ಅವರು 'ದ ಗಾಡ್ ಫಾದರ್' ಎಂಬ ನೋಟ್ ಪುಸ್ತಕವನ್ನು ಪ್ರಕಟಿಸಲು ಯೋಜನೆ ಹಾಕಿಕೊಂಡಿದ್ದಾರೆ.

  ಆಸ್ಕರ್ ಪ್ರಶಸ್ತಿ ವಿಜೇತ 1972ರ 'ದ ಗಾಡ್ ಫಾದರ್' ಎಂಬ ಚಲನಚಿತ್ರ ನಿರ್ದೇಶನ ಮಾಡುವ ವೇಳೆ ಚಿತ್ರದ ಬಗ್ಗೆ ನಿರ್ದೇಶಕರು ಹಾಕಿಕೊಂಡಿದ್ದ ಯೋಜನೆಗಳು ಹಾಗೂ ಚಿತ್ರದ ಬಗ್ಗೆ ಬರೆದುಕೊಂಡಿದ್ದ ಟಿಪ್ಪಣಿಗಳ ಬಗ್ಗೆ ಇರುವ ಪುಸ್ತಕ ಇದಾಗಿದೆ.

  ಸಿನಿಮಾದ ಬಗ್ಗೆ ನಿರ್ದೇಶಕ ಫ್ರಾನ್ಸಿಸ್ ಅವರಿಗಿದ್ದ ಚಿಂತನೆ ಹಾಗೂ ಯೋಜನೆಯನ್ನೊಳಗೊಂಡ ಕೈ ಬರಹದ ಟಿಪ್ಪಣಿಗಳಿರುವ ಈ ಪುಸ್ತಕ 20ನೇ ಶತಮಾನದ ಅತ್ಯದ್ಭುತ ನಿರ್ದೇಶಕ ಫ್ರಾನ್ಸಿಸ್ ಅವರ ಸೃಜನಶೀಲತೆಯನ್ನು ಬಿಚ್ಚಿಡಲಿದೆ ಎನ್ನುತ್ತಿದೆ ಹಾಲಿವುಡ್ ಮೂಲಗಳು.

  ಅಂದಹಾಗೆ 'ದಿ ಗಾಡ್ ಫಾದರ್' ಚಿತ್ರದ ಶೂಟಿಂಗ್ ಸ್ಟಿಲ್ಸ್ ಹಾಗೂ ಹಿಂದೆಂದೂ ಕಂಡಿರದ ಸ್ಟಿಲ್ಸ್ ಗಳು ಈ ಪುಸ್ತಕದಲ್ಲಿ ಲಭ್ಯವಾಗಲಿದೆಯಂತೆ. ಜೊತೆಗೆ ಈ ಪುಸ್ತಕಕ್ಕಾಗಿ ನಿರ್ದೇಶಕ ಫ್ರಾನ್ಸಿಸ್ ಅವರು ಸುಧೀರ್ಘ ಪ್ರಸ್ತಾವನೆಯೊಂದನ್ನು ಬರೆದಿದ್ದಾರಂತೆ.

  ಇನ್ನು ರೇಗನ್ ಆರ್ಟ್ಸ್ ಪ್ರಕಟಿಸಿರುವ ಈ ಪುಸ್ತಕ ನವೆಂಬರ್ 15 ರಿಂದ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ ಎಂದಿವೆ ಹಾಲಿವುಡ್ ಚಿತ್ರರಂಗದ ಮೂಲಗಳು.

  English summary
  Director Francis Ford Coppola is set to publish The Godfather Notebook, a reproduction of the working notebook he used during the making of the Oscar-winning 1972 film, publisher Regan Arts

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X