For Quick Alerts
  ALLOW NOTIFICATIONS  
  For Daily Alerts

  'ಅವತಾರ್' ಸರಣಿ ವಿಚಾರದಲ್ಲಿ ಜೇಮ್ಸ್ ಕ್ಯಾಮರೂನ್ ಶಾಕಿಂಗ್ ನಿರ್ಧಾರ!

  |

  ಹಾಲಿವುಡ್ ಪ್ರೇಕ್ಷಕರಿಗೆ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಬೇಸರದ ಸುದ್ದಿ ಕೊಟ್ಟಿದ್ದಾರೆ. 'ಅವತಾರ್' ಸಿನಿಮಾ ಬಾಕ್ಸ್‌ಫೀಸ್ ಶೇಕ್ ಮಾಡಿದ್ದು, ಈಗ ಅದರ ಸೀಕ್ವೆಲ್ ಬರ್ತಿರೋದು ಗೊತ್ತೇಯಿದೆ. ಒಂದು ವೇಳೆ 'ಅವತಾರ್- 2' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡದೇ ಇದ್ದರೆ ಸರಣಿಯನ್ನು ಮೂರೇ ಚಿತ್ರಕ್ಕೆ ನಿಲ್ಲಿಸೋದಾಗಿ ನಿರ್ದೇಶಕರು ಹೇಳಿದ್ದಾರೆ.

  ಕ್ರಿಸ್‌ಮಸ್‌ ಸಂಭ್ರಮದಲ್ಲಿ ಡಿಸೆಂಬರ್ 16ಕ್ಕೆ 'ಅವತಾರ್- 2' ಸಿನಿಮಾ ತೆರೆಗಪ್ಪಳಿಸಿದೆ. ಪ್ರಪಂಚದಾದ್ಯಂತ ಇರುವ ಪ್ರೇಕ್ಷಕರು ಚಿತ್ರವನ್ನು ಕಣ್ತುಂಬಿಕೊಳ್ಳುವುದಕ್ಕೆ ಕಾತರರಾಗಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಿ ಸಿನಿರಸಿಕರ ಗಮನ ಸೆಳೆದಿದೆ. ಈ ಬಾರಿ ನೀರಿನ ಒಳಗೆ ಚಿತ್ರದ ಕಥೆ ಹೇಳುವ ಸಾಹಸ ಮಾಡಲಾಗ್ತಿದೆ. ಜೇಮ್ಸ್ ಕ್ಯಾಮರೂನ್ ಮೇಕಿಂಗ್, ಗ್ರಾಫಿಕ್ಸ್ ವಿಷ್ಯುವಲ್ಸ್ ನೋಡಿದವರು ಬೆರಗಾಗಿದ್ದಾರೆ. ಯಾವಾಗ್ಯಾವಾಗ ಸಿನಿಮಾ ನೋಡುತ್ತೇವೋ ಎಂದು ಕಾಯುತ್ತಿದ್ದಾರೆ. ಸರಣಿಯ 3ನೇ ಸಿನಿಮಾ ಶೂಟಿಂಗ್ ಕೂಡ ಬಹುತೇಕ ಕಂಪ್ಲೀಟ್ ಆಗಿದೆ.

  'ಕೆಜಿಎಫ್', 'ಕಾಂತಾರ' ವಿಶ್ವದ ಗಮನ ಸೆಳೆದರೂ 'ಅವತಾರ್ 2' ಕನ್ನಡದಲ್ಲಿ ಯಾಕಿಲ್ಲ? ನೆಟ್ಟಿಗರ ಆಕ್ರೋಶ!'ಕೆಜಿಎಫ್', 'ಕಾಂತಾರ' ವಿಶ್ವದ ಗಮನ ಸೆಳೆದರೂ 'ಅವತಾರ್ 2' ಕನ್ನಡದಲ್ಲಿ ಯಾಕಿಲ್ಲ? ನೆಟ್ಟಿಗರ ಆಕ್ರೋಶ!

  2009ರಲ್ಲಿ 'ಅವತಾರ್' ಪ್ರೀಕ್ವೆಲ್ ರಿಲೀಸ್ ಆಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಎಲ್ಲಾ ಬಾಕ್ಸಾಫೀಸ್ ದಾಖಲೆಗಳನ್ನು ಮುರಿದು ಸಿನಿಮಾ ದಾಖಲೆ ಬರೆದಿತ್ತು. ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. 'ಟೈಟಾನಿಕ್' ಸಿನಿಮಾ ಹೆಸರಿನಲ್ಲಿದ್ದ ಬಾಕ್ಸಾಫೀಸ್‌ ದಾಖಲೆಗಳನ್ನು ಅಳಿಸಿ ಹೊಸ ದಾಖಲೆ ಬರೆದಿತ್ತು.

  ಅವತಾರ್- 4, 5 ಇರುತ್ತಾ ಇರಲ್ವಾ?

  ಅವತಾರ್- 4, 5 ಇರುತ್ತಾ ಇರಲ್ವಾ?

  ಸರಣಿಯ 2ನೇ ಸಿನಿಮಾ ಬಿಡುಗಡೆಗೂ ಮೊದಲೇ 4 ಹಾಗೂ 5ನೇ ಸಿನಿಮಾಗಳ ಬಗ್ಗೆ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. 'ಅವತಾರ್' ಸರಣಿ ಸಿನಿಮಾಗಳನ್ನು ಮುಂದುವರೆಸೋದಾಗಿ ಬಹಳ ಹಿಂದೆಯೇ ನಿರ್ದೇಶಕರು ಹೇಳಿದ್ದರು. ಇದೀಗ ಸರಣಿಯ 2ನೇ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. 3ನೇ ಸಿನಿಮಾ ಕೂಡ ಬರುತ್ತೆ. ಆದರೆ 4 ಹಾಗೂ 5ನೇ ಸಿನಿಮಾ ಅನುಮಾನ ಎನ್ನುವಂತೆ ಮಾತನಾಡಿದ್ದಾರೆ. 2ನೇ ಸಿನಿಮಾ ರಿಲೀಸ್ ಆದರೆ ಮಾತ್ರ 4 ಹಾಗೂ 5ನೇ ಸಿನಿಮಾ ಇರುತ್ತದೆ. ಇಲ್ಲ ಅಂದರೆ 3ನೇ ಚಿತ್ರಕ್ಕೆ ಕಥೆಗೆ ಅಂತ್ಯ ಹಾಡುವುದಾಗಿ ಜೇಮ್ಸ್ ಕ್ಯಾಮರೂನ್ ಹೇಳಿದ್ದಾರೆ.

  24 ಗಂಟೆಯಲ್ಲಿ 'ಅವತಾರ್ 2' ಟೀಸರ್ ನೋಡಿದ್ದೆಷ್ಟು ಮಂದಿ? ಚೀನಾ ಮಂದಿಗೆ ಹುಚ್ಚು ಹಿಡಿಸಿದ್ದೇಗೆ?24 ಗಂಟೆಯಲ್ಲಿ 'ಅವತಾರ್ 2' ಟೀಸರ್ ನೋಡಿದ್ದೆಷ್ಟು ಮಂದಿ? ಚೀನಾ ಮಂದಿಗೆ ಹುಚ್ಚು ಹಿಡಿಸಿದ್ದೇಗೆ?

  ಹಾಲಿವುಡ್ ಪ್ರೇಕ್ಷಕರಿಗೆ ಶಾಕ್

  ಹಾಲಿವುಡ್ ಪ್ರೇಕ್ಷಕರಿಗೆ ಶಾಕ್

  ಜೇಮ್ಸ್ ಕ್ಯಾಮರೂನ್ ಹೇಳಿಕೆ ಕೆಲವರಿಗೆ ಶಾಕ್ ತಂದಿದೆ. ಮತ್ತೆ ಕೆಲವರಿಗೆ ಅಚ್ಚರಿ ಉಂಟು ಮಾಡಿದೆ. 'ಅವತಾರ್' ಸರಣಿ ಸಿನಿಮಾಗಳ ಬಗ್ಗೆ ಪ್ರೇಕಕ್ಷರು ಬಹಳ ಕಾತರರಾಗಿದ್ದಾರೆ. ಆ ಕಥೆ, ಆ ಸಿನಿಮಾ ಅಂಥಾದೊಂದು ಟ್ರೆಂಡ್ ಸೆಟ್ ಮಾಡಿದೆ. 8 ವರ್ಷಗಳ ಹಿಂದೆಯೇ ನಿರ್ದೇಶಕರು ಸೀಕ್ವೆಲ್ ಘೋಷಿಸಿದ್ದರು. ಅಂದಿನಿಂದಲೂ ಯಾವಾಗ ಸಿನಿಮಾ ಬರುತ್ತೋ ಎಂದು ಕಾಯುತ್ತಿದ್ದಾರೆ. ಕಾರಣಾಂತರಗಳಿಂದ ತಡವಾಗುತ್ತಾ ಬಂದಿತ್ತು. ಕೊರೋನ ಹಾವಳಿಯಿಂದ ಮತ್ತಷ್ಟು ತಡವಾಗಿದೆ.

  'ಅವತಾರ್: ದಿ ವೇ ಆಫ್ ವಾಟರ್'

  'ಅವತಾರ್: ದಿ ವೇ ಆಫ್ ವಾಟರ್'

  2009ರಲ್ಲಿ ತೆರೆಮೇಲೆ ಅವತಾರ್ ಎನ್ನುವ ಅದ್ಭುತವನ್ನು ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಸೃಷ್ಟಿಸಿದ್ದರು. ಇದೀಗ ಅದರ ಸೀಕ್ವೆಲ್ 'ಅವತಾರ್: ದಿ ವೇ ಆಫ್ ವಾಟರ್' ಮತ್ತಷ್ಟು ರೋಚಕವಾಗಿ ತಿದ್ದಿ ತೀಡಿದ್ದಾರೆ. ಗ್ರಾಫಿಕ್ಸ್‌ನಲ್ಲಿ ತೆರೆಮೇಲೆ ಮ್ಯಾಜಿಕ್ ಮಾಡುವ ಸುಳಿವು ಸಿಕ್ಕಿದೆ. ಜೇಕ್ ಸುಲ್ಲಿ ಮಗಳನ್ನು ಪರಿಚಯಿಸಿದ್ದು, ಬಹಳ ರೋಚಕ ಹಾಗೂ ಭಾವನಾತ್ಮಕ ಕಥೆಯನ್ನು ಹೇಳೊಕೆ ಬರುತ್ತಿರುವುದು ಗೊತ್ತಾಗುತ್ತಿದೆ. 3Dಯಲ್ಲಿ ಸಿನಿಮಾ ಹೊಸ ಲೋಕಕ್ಕೆ ಕರೆದುಕೊಂಡು ಹೋಗಲಿದೆ.

  ಕನ್ನಡದಲ್ಲಿ ಡಬ್ ಆಗಿಲ್ಲ ಸೀಕ್ವೆಲ್

  ಕನ್ನಡದಲ್ಲಿ ಡಬ್ ಆಗಿಲ್ಲ ಸೀಕ್ವೆಲ್

  ಪ್ರಪಂಚದ 160ಕ್ಕೂ ಅಧಿಕ ಭಾಷೆಗಳಲ್ಲಿ 'ಅವತಾರ್'-2 ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ. ದಕ್ಷಣ ಭಾರತದ ಭಾಷೆಗಳಿಗೂ ಡಬ್ ಆಗುತ್ತಿದೆ. ಆದರೆ ಕನ್ನಡಕ್ಕೆ ಸಿನಿಮಾ ಡಬ್ ಆಗಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಕನ್ನಡ ಸಿನಿಮಾಗಳು ಪ್ರಪಂಚದಾದ್ಯಂತ ಸದ್ದು ಮಾಡುತ್ತಿರುವಾಗ 'ಅವತಾರ್‌'- 2 ಯಾಕೆ ಡಬ್ ಆಗುತ್ತಿಲ್ಲ ಎಂದು ಕೆಲವರು ಕೇಳುತ್ತಿದ್ದಾರೆ. ಇನ್ನು 2024ರ ಡಿಸೆಂಬರ್‌ನಲ್ಲಿ 'ಅವತಾರ್' - 3 ರಿಲೀಸ್ ಆಗುವ ಸಾಧ್ಯತೆಯಿದೆ.

  English summary
  Director James Cameron Shocking Decision on Avatar franchise. If Avatar 2 underperforms at the Box office, then Avatar 4 and Avatar 5 will be shelved Says James Cameron. know more.
  Tuesday, November 8, 2022, 22:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X