For Quick Alerts
  ALLOW NOTIFICATIONS  
  For Daily Alerts

  ಬಾಯ್ ಫ್ರೆಂಡ್ ಗೆ ಗೂಸಾ; ಹೀರೋಯಿನ್ ಅರೆಸ್ಟ್

  By ರವಿಕಿಶೋರ್
  |

  ಇವರಿಬ್ಬರದ್ದೂ ಇನ್ನೂ ಇಪ್ಪತ್ತು ಪ್ಲಸ್ ಪ್ರಾಯ. ಪ್ರೀತಿ ಪ್ರೇಮ ಪ್ರಣಯ ಎಂದು ಮರ ಸುತ್ತುವ ವಯಸ್ಸು. ಸಣ್ಣ ಪುಟ್ಟ ಜಗಳ, ವಿರಸ, ಸರಸ ಕಾಮನ್ ತಾನೆ. ಪ್ರಿಯಕರ ಅದೇನು ಕೀಟಲೆ ಮಾಡಿದನೋ ಏನೋ ಗೊತ್ತಿಲ್ಲ. ಬೆಂಡೆತ್ತಿ ಬ್ರೇಕ್ ಹಾಕಿದ ಹುಡುಗಿ ಈಗ ಅರೆಸ್ಟ್ ಆಗಿದ್ದಾರೆ.

  ಈ ರೀತಿಯ ಘಟನೆಗಳು ನಮ್ಮ ಸ್ಯಾಂಡಲ್ ವುಡ್ ನಲ್ಲಿ ನಡೆದಿಲ್ಲ ಎಂಬುದೇ ಸಮಾಧಾನದ ಸಂಗತಿ. ಹಾಲಿವುಡ್ ಖ್ಯಾತ ತಾರೆ ಎಮ್ಮಾ ರಾಬರ್ಟ್ ಸನ್ ಅರೆಸ್ಟ್ ಆಗಿರುವ ತಾರಾಮಣಿ. ತನ್ನ ಬಾಯ್ ಫ್ರೆಂಡ್ ಇವಾನ್ ಪೀಟರ್ಸ್ ಮೇಲೆ ದಾಳಿ ಮಾಡಿದ ಕಾರಣ ಆಕೆಯನ್ನು ಬಂಧಿಸಲಾಗಿದೆ.

  ಇಪ್ಪತ್ತೆರಡರ ಎಮ್ಮಾ ರಾಬರ್ಟ್ಸ್ ಹಾಗೂ 26ರ ಹರೆಯದ ಇವಾನ್ ಪೀಟರ್ಸ್ ಒಬ್ಬರನ್ನೊಬ್ಬರು ಗಾಢವಾಗಿ ಪ್ರೇಮಿಸಿಕೊಳ್ಳುತ್ತಿದ್ದಾರೆ. ಕಳೆದ ಒಂದು ವರ್ಷದಿಂದಲೂ ಇವರಿಬ್ಬರ ಜೂಟಾಟ ನಡೆಯುತ್ತಿದೆ. ಅದೇನಾಯಿತೋ ಏನೋ ಇಬ್ಬರೂ ಜಗಳವಾಡಿಕೊಂಡಿದ್ದಾರೆ.

  ಎಮ್ಮಾ ರಾಬರ್ಟ್ಸ್ ಅವರನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ. ಈಕೆ ಬಂಧನವಾಗಿದ್ದು ಜುಲೈ 7ರಂದು. ಆದರೆ ಘಟನೆ ಮಾತ್ರ ತಡವಾಗಿ ಬೆಳಕಿಗೆ ಬಂದಿದೆ. ಹೋಟೆಲ್ ರೂಂ ಒಂದರಲ್ಲಿ ಇಬ್ಬರೂ ಕಿತ್ತಾಡುತ್ತಿದ್ದಾಗ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.

  ಅಲ್ಲಿಗೆ ದೌಡಾಯಿಸಿದ ಪೊಲೀಸರಿಗೆ ಅಚ್ಚರಿ ಕಂಡಿತು. ಎಮ್ಮಾ ಪ್ರಿಯಕರನ ಮೂಗಿನಲ್ಲಿ ರಕ್ತ ಸೋರುತ್ತಿತ್ತು. ಬಿದ್ದ ಹೊಡೆತಗಳಿಗೆ ಆತ ಸಂಪೂರ್ಣ ನಿತ್ರಾಣನಾಗಿದ್ದನಂತೆ. ಎಮ್ಮಾ ಹೊಡೆದ ಪೆಟ್ಟುಗಳಿಗೆ ಅಯ್ಯಯಮ್ಮೋ ಎಂದು ಬೊಬ್ಬೆ ಹಾಕಿದ್ದ ಎನ್ನಿಸುತ್ತದೆ!

  ಬಂಧನದ ಬಳಿಕ ಎಮ್ಮಾ ರಾಬರ್ಟ್ಸ್ ಅಷ್ಟೇ ಸಲೀಸಾಗಿ ಬಿಡುಗಡೆಯಾದರು ಬಿಡಿ. ಪೀಟರ್ ಆಕೆಯ ಮೇಲೆ ಯಾವುದೇ ದೂರು ನೀಡದೆ ಇದ್ದ ಕಾರಣ ಎಮ್ಮಾ ಸುಲಭವಾಗಿ ಪೊಲೀಸರ ಕೈಯಿಂದ ಬಿಡಿಸಿಕೊಂಡು ಬಂದರು. ಸರಿ ಇಷ್ಟೆಲ್ಲಾ ಕಿತ್ತಾಟ ರಂಪಾದ ಬಳಿಕ ಇಬ್ಬರೂ ಅಮೆರಿಕಾಗೆ ವಾಪಸ್ ಆಗಿದ್ದಾರೆ.

  ಇನ್ನೂ ಇಂಟರೆಸ್ಟಿಂಗ್ ವಿಚಾರ ಎಂದರೆ, ಈಗ ಇಬ್ಬರೂ ಒಂದೇ ಚಿತ್ರದಲ್ಲಿ ಅಭಿನಯಿಸುತ್ತಿರುವುದು. ಅದೂ ಹಾರರ್ ಚಿತ್ರ ಎಂಬುದು ಇನ್ನೊಂದು ವಿಶೇಷ. ಪ್ರೇಮಿಗಳು ಎಂಬ ಮೇಲೆ ಜಗಳ, ಕೋಪ ತಾಪ, ಪ್ರತಾಪ ಇಲ್ಲದೆ ಇರಲು ಸಾಧ್ಯವೆ?

  English summary
  Emma Roberts was arrested for domestic violence in Canada for allegedly hitting her actor boyfriend Evan Peters. The 22-year-old niece of actress Julia Roberts was taken into custody on July 7 in Montreal after getting into a fight with her beau that left 26-year-old Peters bloody, according to TMZ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X