twitter
    For Quick Alerts
    ALLOW NOTIFICATIONS  
    For Daily Alerts

    ನೆಟ್‌ಫ್ಲಿಕ್ಸ್‌ನಲ್ಲಿ ಎಚ್‌ಡಿ ಗುಣಮಟ್ಟದ ವಿಡಿಯೋ ಪ್ರಸಾರಕ್ಕೆ ಬ್ರೇಕ್?

    |

    ಕೊರೊನಾ ವೈರಸ್ ಹಾವಳಿ ಕಾರಣದಿಂದ ಎಲ್ಲವೂ ಬಂದ್ ಆಗಿರುವುದರಿಂದ ಮನರಂಜನೆಗಾಗಿ ಜನರು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್‌ನಂತಹ ಪ್ರಸಾರ ಮಾಧ್ಯಮಗಳ ಮೊರೆ ಹೋಗುತ್ತಿದ್ದಾರೆ. ಇದರ ಜತೆಗೆ ಜನರು ಸುದ್ದಿಗಾಗಿಯೂ ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಾಲ ಬಳಸುತ್ತಿದ್ದಾರೆ. ಇದರಿಂದ ಇತ್ತೀಚಿನ ದಿನಗಳಲ್ಲಿ ಮುಖ್ಯವಾಗಿ ಮೊಬೈಲ್ ಇಂಟರ್ನೆಟ್ ಬಳಕೆ ಹೆಚ್ಚಾಗುತ್ತಿದೆ.

    ಕೊರೊನಾ ವೈರಸ್ ಪಿಡುಗಿನ ಹಿನ್ನೆಲೆಯಲ್ಲಿ ಇಂಟರ್ನೆಟ್ ಸೌಲಭ್ಯದ ಮೇಲೆ ಅಧಿಕ ಒತ್ತಡ ಬೀಳುತ್ತಿದೆ. ಹೀಗಾಗಿ ಅಡೆತಡೆಯಿಲ್ಲದಂತೆ ಅಂತರ್ಜಾಲದ ಬಳಕೆಗೆ ಅನುಕೂಲವಾಗುವಂತೆ ಮತ್ತು ಸ್ಟ್ರೀಮಿಂಗ್‌ನ ಅಡ್ಡಿಗಳನ್ನು ತಡೆಯಲು ಹೈ ಡಿಫಿನಿಷನ್ ವಿಡಿಯೋಗಳ ಪ್ರದರ್ಶನವನ್ನು ಸ್ಥಗಿತಗೊಳಿಸುವಂತೆ ಯುರೋಪಿಯನ್ ಒಕ್ಕೂಟವು ನೆಟ್‌ಫ್ಲಿಕ್ಸ್ ಹಾಗೂ ಇತರೆ ಸಂಸ್ಥೆಗಳಿಗೆ ಮನವಿ ಮಾಡಿದೆ.

    ಇಂಟರ್ನೆಟ್ ಮೇಲೆ ಒತ್ತಡ

    ಇಂಟರ್ನೆಟ್ ಮೇಲೆ ಒತ್ತಡ

    ಅನೇಕ ದೇಶಗಳು ವೈರಸ್ ಹರಡುವಿಕೆಯ ಭೀತಿಯಿಂದ ವಿಮಾನಗಳ ಹಾರಾಟ ಸ್ಥಗಿತಗೊಳಿಸಿವೆ. ಶಾಲೆಗಳಿಗೆ ರಜೆ ನೀಡಲಾಗಿದೆ. ಲಕ್ಷಾಂತರ ಜನರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗುತ್ತಿದೆ. ಈ ನಡುವೆ ಅಂತರ್ಜಾಲದ ವಿಪರೀತ ಬಳಕೆಯಿಂದ ಅದರ ವ್ಯವಸ್ಥೆ ಮೇಲೆ ಅತೀವ ಒತ್ತಡ ಬೀಳುತ್ತಿದೆ ಎಂದು ಯುರೋಪಿಯನ್ ಒಕ್ಕೂಟ ಅಭಿಪ್ರಾಯಪಟ್ಟಿದೆ.

    ಏನಿದು ಅನ್ಯಾಯ? ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡಿಕ್ಕಿಲ್ಲ ಆದ್ಯತೆಏನಿದು ಅನ್ಯಾಯ? ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡಿಕ್ಕಿಲ್ಲ ಆದ್ಯತೆ

    ಬದಲಿಸಲು ವ್ಯವಸ್ಥೆ ಮಾಡಿ

    ಈ ಬಗ್ಗೆ ತಾವು ನೆಟ್‌ಫ್ಲಿಕ್ಸ್ ಸಿಇಒ ರೀಡ್ ಹಾಸ್ಟಿಂಗ್ಸ್ ಅವರೊಂದಿಗೆ ಮಾತನಾಡಿರುವುದಾಗಿ ಯುರೋಪಿಯನ್ ಕಮಿಷನರ್ ಥಿಯೆರ್ರಿ ಬ್ರೆಟನ್ ತಿಳಿಸಿದ್ದಾರೆ. ಸುಮಾರು 450 ಮಿಲಿಯನ್‌ಗೂ ಅಧಿಕ ಜನರಿಗೆ ಯುರೋಪಿಯನ್ ಒಕ್ಕೂಟದ ಅಂತರ್ಜಾಲ ಮಾರುಕಟ್ಟೆಯ ಹೊಣೆಗಾರಿಕೆ ಹೊತ್ತಿರುವ ಅವರು, ಎಚ್‌ಡಿ ಗುಣಮಟ್ಟ ಅಗತ್ಯವಿಲ್ಲದೆ ಇರುವ ಜನರು ಮತ್ತು ಕಂಪೆನಿಗಳು ಸಾಮಾನ್ಯ ಗುಣಮಟ್ಟಕ್ಕೆ ಆಯ್ಕೆ ಬದಲಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

    ಅನುಕೂಲಕರವಾಗಬೇಕು

    ಅನುಕೂಲಕರವಾಗಬೇಕು

    'ಬ್ರೆಟನ್ ಹೇಳಿರುವುದು ಸೂಕ್ತವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇಂಟರ್ನೆಟ್ ಸರಾಗ ನಿರ್ವಹಣೆಗೆ ಅನುಕೂಲವಾಗುವಂತೆ ಇರಬೇಕು. ದೂರ ಸಂಪರ್ಕ ಸಂವಹನ ಕಂಪೆನಿಗಳಿಗೆ ಉಚಿತವಾಗಿ ನಮ್ಮ ಮುಕ್ತ ಸಂಪರ್ಕ ಸೇವೆಯನ್ನು ಒದಗಿಸುವುದು ಸೇರಿದಂತೆ ಹಲವು ವರ್ಷಗಳಿಂದ ನೆಟ್‌ಫ್ಲಿಕ್ಸ್‌ನ ದಕ್ಷತೆಯ ಮೇಲೆ ಗಮನ ಹರಿಸುತ್ತಿದ್ದೇವೆ' ಎಂದು ನೆಟ್‌ಫ್ಲಿಕ್ಸ್ ವಕ್ತಾರರು ತಿಳಿಸಿದ್ದಾರೆ.

    ಕೊರೊನಾ ಭೀತಿಯಿಂದ ಮನೆಯಲ್ಲಿದ್ದೀರಾ? ಅಮೆಜಾನ್‌-ನೆಟ್‌ಫ್ಲಿಕ್ಸ್‌ಗಳಲ್ಲಿ ಈ ಸಿನಿಮಾಗಳನ್ನು ನೋಡಿರಿಕೊರೊನಾ ಭೀತಿಯಿಂದ ಮನೆಯಲ್ಲಿದ್ದೀರಾ? ಅಮೆಜಾನ್‌-ನೆಟ್‌ಫ್ಲಿಕ್ಸ್‌ಗಳಲ್ಲಿ ಈ ಸಿನಿಮಾಗಳನ್ನು ನೋಡಿರಿ

    ಇಂಟರ್ನೆಟ್ ಬಳಕೆ ಕಡಿಮೆಯಾಗಲಿದೆ

    ಇಂಟರ್ನೆಟ್ ಬಳಕೆ ಕಡಿಮೆಯಾಗಲಿದೆ

    ಲಭ್ಯವಿರುವ ನೆಟ್‌ವರ್ಕ್ ಸಾಮರ್ಥ್ಯಕ್ಕೆ ಅನುಗುಣವಾಗಿ ಈಗಾಗಲೇ ಸ್ಟ್ರೀಮಿಂಗ್ ಗುಣಮಟ್ಟವನ್ನು ಹೊಂದಿಸಲಾಗಿದೆ. ಬಳಕೆದಾರರು ನೆಟ್‌ಫ್ಲಿಕ್ಸ್ ಬಳಸುವಾಗ ಕಡಿಮೆ ಇಂಟರ್ನೆಟ್ ಬಳಕೆಯಾಗುವಂತೆ ಮಾಡಲು ಕೂಡ ವಿಶೇಷ ಡೆಲಿವರಿ ನೆಟ್‌ವರ್ಕ್ ಉಪಯೋಗಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

    English summary
    European Union has urged Netflix to slow down streaming to stop internet from breaking as the usage become as due to the coronavirus pandemic.
    Thursday, March 19, 2020, 19:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X