Just In
- 2 hrs ago
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- 3 hrs ago
'ದಳಪತಿ 65' ಸಿನಿಮಾಗೆ ಇವರೇ ನಾಯಕಿ; ಟ್ವಿಟ್ಟರ್ ನಲ್ಲಿ ಅಭಿಮಾನಿಗಳ ಟ್ರೆಂಡ್
- 4 hrs ago
ಶಿವಣ್ಣನಿಗೆ ಕೃಷ್ಣ-ಮಿಲನಾ ಜೋಡಿಯ ಮದುವೆ ಆಮಂತ್ರಣ- ಡಿ ಬಾಸ್ ಗೆ ಯಾವಾಗ ಕೊಡ್ತೀರಾ ಎನ್ನುತ್ತಿದ್ದಾರೆ ಅಭಿಮಾನಿಗಳು
- 12 hrs ago
ಮತ್ತೆ ಬಾಲಿವುಡ್ಗೆ ಪಯಣ ಬೆಳೆಸಿದ ದುಲ್ಕರ್ ಸಲ್ಮಾನ್
Don't Miss!
- News
ಕೊವ್ಯಾಕ್ಸಿನ್ ಬಗ್ಗೆ ಎಚ್ಚರ: ಲಸಿಕೆಯು ಯಾರಿಗೆ ಸೂಕ್ತ, ಯಾರಿಗೆ ಸೂಕ್ತವಲ್ಲ?
- Finance
34,000 ರುಪಾಯಿ ತನಕ ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ
- Automobiles
ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಖರೀದಿ ಮೇಲೆ ಹೊಸ ವರ್ಷದ ಆಫರ್
- Sports
ಭಾರತ vs ಆಸ್ಟ್ರೇಲಿಯಾ: ಧೋನಿ ದಾಖಲೆ ಮುರಿದು 1000 ಟೆಸ್ಟ್ ರನ್ ಗಳಿಸಿದ ರಿಷಭ್ ಪಂತ್
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಂತರಿಕ್ಷದಲ್ಲಿ ಸಿನಿಮಾ: ಸಾಹಸಕ್ಕೆ ಮುಂದಾದ ರಷ್ಯಾ, ಅಮೆರಿಕದ ಜೊತೆ ಸ್ಪರ್ಧೆ
ಅಂತರಿಕ್ಷದ ಬಗ್ಗೆ ಈಗಾಗಲೇ ಹಲವಾರು ಸಿನಿಮಾಗಳು ಬಂದಿವೆ. ಅಂತರಿಕ್ಷವನ್ನೇ ಹೋಲುವ ಸೆಟ್‌ಗಳನ್ನು ಹಾಕಿ, ಗ್ರಾಫಿಕ್ಸ್, ವಿಎಫ್‌ಎಕ್ಸ್ ಬಳಸಿ ಅದ್ಭುತವಾದ ಸಿನಿಮಾಗಳನ್ನು ನಿರ್ಮಿಸಲಾಗಿದೆ. ಆದರೆ ಅಂತರಿಕ್ಷದಲ್ಲಿಯೇ ಸಿನಿಮಾ ಚಿತ್ರೀಕರಣ ಈ ವರೆಗೆ ಮಾಡಲಾಗಿಲ್ಲ.
ಟಾಮ್ ಕ್ರೂಸ್ ನಟನೆಯ 'ಮಿಷನ್ ಇಂಬಾಸಿಬಲ್' ಸರಣಿಯ ಹೊಸ ಸಿನಿಮಾವನ್ನು ಅಂತರಿಕ್ಷದಲ್ಲಿ ಚಿತ್ರೀಕರಿಸಲಾಗುತ್ತದೆ ಎನ್ನಲಾಗಿತ್ತು. ಆದರೆ ಕೊರೊನಾ ಹಾಗೂ ಇತರೆ ಕಾರಣಗಳಿಂದ ಯೋಜನೆ ಕೈಬಿಡಲಾಗಿದೆ.
ಆದರೆ ಈಗ ರಷ್ಯಾವು ಅಂತರಿಕ್ಷದಲ್ಲಿ ಪೂರ್ಣ ಸಿನಿಮಾವನ್ನು ಚಿತ್ರೀಕರಿಸಲು ತಯಾರಾಗಿದೆ. ಆದರೆ ಇದಕ್ಕೆ ಕೆಲವು ಷರತ್ತುಗಳನ್ನು ಸಹ ವಿಧಿಸಲಾಗಿದೆ.
ರಷ್ಯಾದ ಅಂತರಿಕ್ಷ ಕಾರ್ಯಕ್ರಮಗಳ ಮುಖ್ಯಸ್ಥ ಯೂರಿ ಬೊರಿಸೊವ್ ಮಾತನಾಡಿ, 'ನಟ-ನಟಿಯರು, ತಂತ್ರಜ್ಞರು ಅಂತರಿಕ್ಷದಲ್ಲಿ ಇರಲು ಖಾಸಗಿ ಹಣದ ವ್ಯವಸ್ಥೆ ಮಾಡಿಕೊಂಡರೆ ಹಾಗೂ ನಮ್ಮ ಐಎಸ್‌ಎಸ್ ಅಂತರಿಕ್ಷ ವಿಜ್ಞಾನ ಯೋಜನೆಗಳಿಗೆ ತೊಂದರೆ ಆಗದೇ ಚಿತ್ರೀಕರಣ ಮಾಡಲು ಒಪ್ಪಿದಲ್ಲಿ, ನಮ್ಮ ಸ್ಪೇಸ್‌ಶಿಪ್ ಬಳಸಿ ಅಂತರಿಕ್ಷದಲ್ಲಿ ಸಿನಿಮಾ ಚಿತ್ರೀಕರಿಸಿಕೊಳ್ಳಲು ಅಭ್ಯಂತರವಿಲ್ಲ' ಎಂದಿದ್ದಾರೆ.
'ದಿ ಚಾಲೆಂಜ್' ಹೆಸರಿನಲ್ಲಿ ಈಗಾಗಲೇ ಸಿನಿಮಾದ ಘೋಷಣೆ ಆಗಿದೆ. ಸಿನಿಮಾಕ್ಕೆ ಸೂಕ್ತವಾದ ನಟ-ನಟಿಯರನ್ನು ಹುಡುಕುತ್ತಿದ್ದೇವೆ ಎಂದಿದ್ದಾರೆ ಸಿನಿಮಾದ ನಿರ್ಮಾಪಕ ಅಲೆಕ್ಸಿ ಟ್ರೋಕ್ಸ್ಯೋಕ್. 'ಸೂಪರ್ ವುಮನ್ ಸಿನಿಮಾ ಇದಾಗಿರಲಿದ್ದು, ಭೂಮಿಯ ಮೇಲೆ ಹಾಗೂ ಅಂತರಿಕ್ಷದಲ್ಲಿ ಅಲ್ಲಿನ ವ್ಯವಸ್ಥೆಗಳಿಗೆ ಸರಿಹೊಂದಬಲ್ಲ ನಟಿಯ ಹುಡುಕಾಟದಲ್ಲಿದ್ದೇವೆ' ಎಂದಿದ್ದಾರೆ ನಿರ್ಮಾಪಕ.
ಇನ್ನೊಂದೆಡೆ ಅಮೆರಿಕದ ನಾಸಾ ಹಾಗೂ ಎಲಾನ್ ಮಸ್ಕ್ ರ 'ಸ್ಪೇಸ್ ಎಕ್ಸ್' ಜಂಟಿಯಾಗಿ ಅಂತರಿಕ್ಷದಲ್ಲಿ ಸಿನಿಮಾ ತೆಗೆಯಲು ಯೋಜನೆ ರೂಪಿಸಿದ್ದಾರೆ. ಆದರೆ ರಷ್ಯಾ ಅಥವಾ ಅಮೆರಿಕ ಎರಡು ದೇಶಗಳಲ್ಲಿ ಯಾರು ಮೊದಲಿಗೆ ಅಂತರಿಕ್ಷದಲ್ಲಿ ಸಿನಿಮಾ ತೆಗೆಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಮೊದಲ ಅಂತರಿಕ್ಷ ಯಾನದ ಸಮಯದಲ್ಲಿಯೂ ರಷ್ಯಾ ಮತ್ತು ಅಮೆರಿಕ ನಡುವೆ ಇದೇ ರೀತಿಯ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಅಮೆರಿಕ ಮೊದಲ ಅಂತರಿಕ್ಷ ಯಾನ ಮಾಡಿ ಗೆದ್ದಿತು.