For Quick Alerts
  ALLOW NOTIFICATIONS  
  For Daily Alerts

  ಫೋರ್ಬ್ಸ್ ಅತಿ ಶ್ರೀಮಂತ ಬೆಡಗಿಯರ ಪಟ್ಟಿಯಲ್ಲಿ ದೀಪಿಕಾ

  By ಜೇಮ್ಸ್ ಮಾರ್ಟಿನ್
  |

  ಹಾಲಿವುಡ್ ಬೆಡಗಿಯರ ಸಾಲಿಗೆ ಬೆಂಗಳೂರಿನ ಬೆಡಗಿ ದೀಪಿಕಾ ಪಡುಕೋಣೆ ಕೂಡಾ ಸೇರಿಕೊಂಡಿದ್ದಾರೆ. XXX ಸರಣಿಯ ಚಿತ್ರದಲ್ಲಿ ನಟಿಸಿರುವ ದೀಪಿಕಾ ಈಗ ವಿಶ್ವದ ಅತಿ ಶ್ರೀಮಂತ ನಟಿಯರ ಪೈಕಿ 10ನೇ ಸ್ಥಾನಕ್ಕೇರಿದ್ದಾರೆ. ಜೆನ್ನಿಫರ್ ಲಾರೆನ್ಸ್ ಅಗ್ರಸ್ಥಾನದಲ್ಲಿದ್ದಾರೆ.

  ವಾರ್ಷಿಕ ಹತ್ತು ಮಿಲಿಯನ್ ಡಾಲರ್ ಸಂಭಾವನೆ ಪಡೆಯುವ ದೀಪಿಕಾ ಪಡುಕೋಣೆ ಈಗ ಫೋರ್ಬ್ಸ್ ಮ್ಯಾಗಜೀನ್ ಪ್ರಕಟಿಸಿರುವ ಟಾಪ್ ಟೆನ್ ಶ್ರೀಮಂತ ನಟಿಯರ ಪಟ್ಟಿಯಲ್ಲಿ ಹತ್ತನೇ ಸ್ಥಾನ ಅಲಂಕರಿಸಿದ್ದಾರೆ.[ಫೋರ್ಬ್ಸ್ ಪಟ್ಟಿ: ಶಾರುಖ್ ಹಿಂದಿಕ್ಕಿದ ಅಮಿತಾಬ್, ಸಲ್ಮಾನ್]

  ಬಾಲಿವುಡ್ ನಲ್ಲಿ ಸದ್ದು ಮಾಡಿ ಭರ್ಜರಿ ಹಿಟ್ ಚಿತ್ರಗಳನ್ನು ನೀಡಿರುವ ದೀಪಿಕಾ ಈಗಷ್ಟೇ ಹಾಲಿವುಡ್ ಅಂಗಳಕ್ಕೆ ಇಳಿದಿದ್ದಾರೆ. XXX: ದಿ ರಿಟರ್ನ್ ಆಫ್ ಕ್ಸಾಂಡರ್ ಕೇಜ್ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಹಿಂದಿಯಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಲಿರುವ ಹೊಸ ಚಿತ್ರ ಪದ್ಮಾವತಿಗಾಗಿ ಬರೊಬ್ಬರಿ 12 ಕೊಟಿ ಕೊಟಿ ರು ಆಫರ್ ಸಿಕ್ಕಿದೆ. ಬಾಲಿವುಡ್ ನಲ್ಲಿ ಅತ್ಯಂತ ಶ್ರೀಮಂತ ನಟಿ ಕೂಡಾ ಹೌದು.[ಫೋರ್ಬ್ಸ್ ಪಟ್ಟಿ: ಮಾಡೆಲಿಂಗ್ ಜಗತ್ತಿನ ರಾಣಿಯರು]

  ಈಗ ಜೂಲಿಯಾ ರಾಬರ್ಟ್ಸ್, ಮಿಲಾ ಕುನಿಸ್ ರಂಥ ನಟಿಯರ ಸಾಲಿಗೆ ದೀಪಿಕಾ ಎಂಟ್ರಿ ಕೊಟ್ಟಿದ್ದಾರೆ. ದೀಪಿಕಾ ಸಂಭಾವನೆಯ ಜೊತೆಗೆ ವೋಗ್, ತನಿಷ್ಕ್, ಟಿಸ್ಸೊ, ಆಕ್ಸಿಸ್ ಬ್ಯಾಂಕ್,ವಿಸ್ತಾರಾ ಏರ್ ಲೈನ್ ಸೇರಿದಂತೆ ಅನೇಕ ಬ್ರ್ಯಾಂಡ್ ಗಳಿಗೆ ರಾಯಭಾರಿಯಾಗಿದ್ದಾರೆ.[ಭಾರತದ ಸೆಲೆಬ್ರಿಟಿಗಳ ಸಂಭಾವನೆ ಇಷ್ಟೊಂದಾ?]

  ಹಾಲಿವುಡ್​ನಟಿ ಜೆನ್ನಿಫರ್ ಲಾರೆನ್ಸ್

  ಹಾಲಿವುಡ್​ನಟಿ ಜೆನ್ನಿಫರ್ ಲಾರೆನ್ಸ್

  ಹಾಲಿವುಡ್ ​ನಟಿ ಜೆನ್ನಿಫರ್ ಲಾರೆನ್ಸ್ 46 ಮಿಲಿಯನ್ ಡಾಲರ್ (46,000,000 ಯುಎಸ್ ಡಾಲರ್) ವಾರ್ಷಿಕ ಸಂಭಾವನೆ ಪಡೆಯುವ ನಟಿ.

  ಶ್ರೀಮಂತ ಬೆಡಗಿ ನಂ 2

  ಶ್ರೀಮಂತ ಬೆಡಗಿ ನಂ 2

  ಅಮೆರಿಕ ನಟಿ ಮೆಲಿಸ್ಸಾ ಮೆಕಾರ್ಥಿ 33 ಮಿಲಿಯನ್ ಡಾಲರ್($33,000,000) ಸಂಭಾವನೆ ಪಡೆಯುವ ಮೂಲಕ ದ್ವಿತೀಯ ಸ್ಥಾನದಲ್ಲಿದ್ದಾರೆ.

  ಶ್ರೀಮಂತ ಬೆಡಗಿ ನಂ 3

  ಶ್ರೀಮಂತ ಬೆಡಗಿ ನಂ 3

  ನಟಿ, ರೂಪದರ್ಶಿ ಸ್ಕಾರ್ಲೆಟ್ ಜಾನ್ಸನ್ ಗಳಿಕೆ $25,000,000.

  ಶ್ರೀಮಂತ ಬೆಡಗಿ ನಂ 4

  ಶ್ರೀಮಂತ ಬೆಡಗಿ ನಂ 4

  ನಾಲ್ಕನೇ ಸ್ಥಾನದಲ್ಲಿ ಅಮೆರಿಕದ ನಟಿ ಜೆನ್ನಿಫರ್ ಅನಿಸ್ಟನ್ 21 ಮಿಲಿಯನ್ ಡಾಲರ್$21,000,000.

  ಶ್ರೀಮಂತ ಬೆಡಗಿ ನಂ 5

  ಶ್ರೀಮಂತ ಬೆಡಗಿ ನಂ 5

  ಐದನೇ ಸ್ಥಾನ ಚೀನಾದ ಗಾಯಕಿ, ನಿರ್ದೇಶಕಿ ಫ್ಯಾನ್ ಬಿಗ್ಬಿಂಗ್ $17,000,000.

  ಶ್ರೀಮಂತ ಬೆಡಗಿ ನಂ 6

  ಶ್ರೀಮಂತ ಬೆಡಗಿ ನಂ 6

  ಆರನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ನಟಿ ಚಾರ್ಲಿಜ್ ಥೆರಾನ್ 16.5 ಮಿಲಿಯನ್ ಡಾಲರ್ $16,500,000.

  ಶ್ರೀಮಂತ ಬೆಡಗಿ ನಂ 7

  ಶ್ರೀಮಂತ ಬೆಡಗಿ ನಂ 7

  ಏಳನೇ ಸ್ಥಾನದಲ್ಲಿ ಅಮೆರಿಕದ ನಟಿ ಏಮಿ ಆಡಮ್ಸ್ 13.5 ಮಿಲಿಯನ್ ಡಾಲರ್

  ಶ್ರೀಮಂತ ಬೆಡಗಿ ನಂ 8

  ಶ್ರೀಮಂತ ಬೆಡಗಿ ನಂ 8

  ಎಂಟನೇ ಸ್ಥಾನದಲ್ಲಿ ಅಮೆರಿಕದ ಜೂಲಿಯಾ ರಾಬರ್ಟ್ಸ್ 12 ಮಿಲಿಯನ್ ಡಾಲರ್

  ಶ್ರೀಮಂತ ಬೆಡಗಿ ನಂ 9

  ಶ್ರೀಮಂತ ಬೆಡಗಿ ನಂ 9

  ಅಮೆರಿಕದ ನಟಿ ಮಿಲಾ ಕುನಿಸ್ 11 ಮಿಲಿಯನ್ ಡಾಲರ್

  ಶ್ರೀಮಂತ ಬೆಡಗಿ ನಂ 10

  ಶ್ರೀಮಂತ ಬೆಡಗಿ ನಂ 10

  ಹತ್ತನೇ ಸ್ಥಾನದಲ್ಲಿ ಭಾರತದ ದೀಪಿಕಾ ಪಡುಕೋಣೆ 10 ಮಿಲಿಯನ್ ಡಾಲರ್.

  English summary
  Deepika is now the 10th highest paid film actress in the world standing shoulder to shoulder with the likes of Julia Roberts and Mila Kunis.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X