For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಗ್ಲೋಬ್ ವಿಜೇತರ ಸಂಪೂರ್ಣ ಪಟ್ಟಿ, RRR ಹೊರತಾಗಿ ಪ್ರಶಸ್ತಿ ಗೆದ್ದವರಿವರು

  By ಫಿಲ್ಮಿಬೀಟ್ ಡೆಸ್ಕ್
  |

  2023 ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು 'RRR' ಸಿನಿಮಾದ ನಾಟು ನಾಟು ಹಾಡು ಪಡೆದುಕೊಂಡು ಇತಿಹಾಸ ನಿರ್ಮಿಸಿದೆ. 'RRR' ಸಂಗೀತ ನಿರ್ದೇಶಕ ಎಂಎಂ ಕೀರವಾಣಿಗೆ ಈ ಪ್ರಶಸ್ತಿ ಸಂದಿದೆ.

  ಆಸ್ಕರ್‌ನಷ್ಟೆ ಪ್ರತಿಷ್ಠಿತ ಪ್ರಶಸ್ತಿಯೆಂದು ಗೋಲ್ಡನ್ ಗ್ಲೋಬ್ ಗುರುತಿಸಿಕೊಂಡಿದ್ದು, ಇಲ್ಲಿ ಗೆದ್ದ ಸಿನಿಮಾಗಳು ಆಸ್ಕರ್‌ನಲ್ಲಿ ಗೆಲ್ಲುವುದು ಪಕ್ಕಾ ಎನ್ನಲಾಗುತ್ತದೆ.

  RRR ಸಿನಿಮಾವು ಗೋಲ್ಡನ್ ಗ್ಲೋಬ್‌ನ ಹಲವು ವಿಭಾಗಗಳಲ್ಲಿ ಸ್ಪರ್ಧೆ ಮಾಡಿತ್ತು, ಆದರೆ ಒರಿಜಿನಲ್ ಮ್ಯೂಸಿಕ್ ವಿಭಾಗದಲ್ಲಿ ನಾಟು ನಾಟು ಹಾಡಿಗೆ ಪ್ರಶಸ್ತಿ ಪಡೆದುಕೊಂಡಿತು. ಹಾಗಿದ್ದರೆ ಇನ್ನುಳಿದ ವಿಭಾಗಗಳಲ್ಲಿ ಸ್ಪರ್ಧೆಗಿದ್ದ ಸಿನಿಮಾಗಳು ಯಾವುವು ಗೆದ್ದವರು ಯಾರು? ಇಲ್ಲಿದೆ ಪಟ್ಟಿ. ವಿಶೇಷವೆಂದರೆ 'ಅವತಾರ್; ದಿ ವೇ ಆಫ್ ವಾಟರ್', 'ಟಾಪ್ ಗನ್; ಮೇವರಿಕ್' ಸಿನಿಮಾಗಳನ್ನು ಹಿಂದಿಕ್ಕಿ ದಿ ಫ್ಯಾಬಲ್‌ಮ್ಯಾನ್ಸ್ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗೆದ್ದಿದೆ. ಇನ್ನೂ ಹಲವು ವಿಭಾಗಗಳಲ್ಲಿ 'ಅವತಾರ್' ಸಿನಿಮಾ ಪ್ರಶಸ್ತಿ ಗೆದ್ದಿಲ್ಲ.

  ಅತ್ಯುತ್ತಮ ಡ್ರಾಮಾ ಸಿನಿಮಾ- ದಿ ಫ್ಯಾಬಲ್‌ಮ್ಯಾನ್ಸ್

  ಸಂಗೀತ ಹಾಗೂ ಕಾಮಿಡಿ ಜಾನರ್‌ನ ಅತ್ಯುತ್ತಮ ಸಿನಿಮಾ- ದಿ ಬನ್‌ಶೀಸ್ ಆಫ್ ಇನೆಶೆರಿನ್

  ಅತ್ಯುತ್ತಮ ಟಿವಿ ಸೀರೀಸ್- ಹೌಸ್ ಆಫ್ ಡ್ರ್ಯಾಗನ್ಸ್

  ಸಂಗೀತ ಹಾಗೂ ಕಾಮಿಡಿ ಜಾನರ್‌ನ ಟಿವಿ ಸೀರೀಸ್- ಅಬಾಟ್ ಎಲಿಮೆಂಟ್ರಿ

  ಅತ್ಯುತ್ತಮ ಟಿವಿ ಸಿನಿಮಾ- ದಿ ವೈಟ್ ಲೋಟಸ್: ಸಿಸಿಲಿ

  ಟಿವಿ ಸೀರೀಸ್‌ನ ಅತ್ಯುತ್ತಮ ನಟ- ಕೆವಿನ್ ಕೋಸ್ಟರ್ (ಯೆಲ್ಲೊಸ್ಟೋನ್)

  ಟಿವಿ ಸಿನಿಮಾದ ಅತ್ಯುತ್ತಮ ನಟ- ಇವಾನ್ ಪೆಟರ್ಸ್ (ಮಾನ್‌ಸ್ಟರ್; ದಿ ಜೆಫ್ರಿ ಡಾಮೆರ್ ಸ್ಟೋರಿ)

  ಟಿವಿ ಸಿನಿಮಾದ ಅತ್ಯುತ್ತಮ ನಟಿ- ಅಮಾಂಡಾ ಸೇಫ್ರೆಡ್ (ದಿ ಡ್ರಾಪೌಟ್)

  ಟಿವಿ ಸಿನಿಮಾದ ಅತ್ಯುತ್ತಮ ಪೋಷಕ ನಟಿ- ಜೆನ್ನಿಫರ್ ಕೂಲಿಡ್ಜ್ (ದಿ ವೈಟ್ ಲೋಟಸ್)

  ಟಿವಿ ಸಿನಿಮಾದ ಅತ್ಯುತ್ತಮ ಪೋಷಕ ನಟ- ಪೌಲ್ ವಾಲ್ಟರ್ (ಬ್ಲಾಕ್ ಬರ್ಡ್)

  ಅತ್ಯುತ್ತಮ ಚಿತ್ರಕತೆ- ದಿ ಬ್ಯಾನ್‌ಶೀಸ್ ಆಫ್ ಇನೆಶೆರೀನ್

  ಅತ್ಯುತ್ತಮ ನಿರ್ದೆಶಕ- ಸ್ಟಿವನ್ ಸ್ಪೀಲ್‌ಬರ್ಗ್, (ದಿ ಫೇಬಲ್‌ಮ್ಯಾನ್ಸ್)

  ಅತ್ಯುತ್ತಮ ಇಂಗ್ಲೀಷೇತರ ಸಿನಿಮಾ- ಅರ್ಜೆಂಟೀನಾ 1985 (RRR ಸಿನಿಮಾ ಈ ವಿಭಾಗದಲ್ಲಿ ಸೋತಿದೆ)

  ಅತ್ಯುತ್ತಮ ನಟಿ- ಕೇಟ್ ಬ್ಲಾಂಚೆಟ್ (ಕಾರ್)

  ಅತ್ಯುತ್ತಮ ನಟ- ಆಸ್ಟಿನ್ ಬಟ್ಲರ್ (ಎಲ್ವಿಸ್)

  ಟಿವಿ ಸೀರೀಸ್ ಅತ್ಯುತ್ತಮ ಪೋಷಕ ನಟಿ- ಜೂಲಿಯಾ ಗಾರ್ನರ್ (ಓಜಾರ್ಕ್)

  ಅತ್ಯುತ್ತಮ ಪೋಷಕ ನಟ- ಕೆ ಹ್ಯು ಕಾನ್ (ಎವರಿತಿಂಗ್ ಎವರಿವೇರ್ ಆಲ್‌ ಅಟ್ ಒನ್ಸ್)

  ಅತ್ಯುತ್ತಮ ಪೋಷಕ ನಟಿ- ಆಂಗೆಲಾ ಬೆಸೆಟ್ (ವಕಾಂಡಾ ಫಾರೆವರ್)

  ಅತ್ಯುತ್ತಮ ನಟ ಟಿವಿ ಸೀರೀಸ್- ಟೈಲರ್ ಜೇಮ್ಸ್ ವಿಲಿಯಮ್ಸ್ (ಅಬಾಟ್ ಎಲಿಮೆಂಟ್ರಿ)

  ಅತ್ಯುತ್ತಮ ಸಂಗೀತ- ಜಸ್ಟಿನ್ ಹರ್‌ವಿಟ್ಜ್ (ಬ್ಯಾಬಿಲಾನ್)

  ಅತ್ಯುತ್ತಮ ಹಾಡು- ನಾಟು-ನಾಟು (RRR)

  ಅತ್ಯುತ್ತಮ ಅನಿಮೇಟೆಡ್ ಸಿನಿಮಾ- ಪಿನಾಕಿಯೋ

  English summary
  Golden Globe 2023: here is the winners list. RRR movie won best original song category. lost in best other language best movie category.
  Wednesday, January 11, 2023, 10:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X