For Quick Alerts
  ALLOW NOTIFICATIONS  
  For Daily Alerts

  ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ಗ್ಲೋಬಲ್ ಸ್ಟಾರ್ ಪಟ್ಟಿಯಲ್ಲಿ ಅಮಿತಾಭ್ ಬಚ್ಚನ್

  |

  ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ಭಾರತೀಯ ಸೆಲೆಬ್ರಿಟಿಗಳ ಪೈಕಿ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಟಾಪ್‌ನಲ್ಲಿದ್ದರು. ನಂತರ ಅಮಿತಾಭ್ ಬಚ್ಚನ್, ರಿಯಾ ಚಕ್ರವರ್ತಿ, ಕಂಗನಾ ರಣಾವತ್ ಮತ್ತು ಅಂಕಿತಾ ಲೋಖಂಡೆ ಟಾಪ್ ಹತ್ತರ ಪಟ್ಟಿಯಲ್ಲಿದ್ದರು. ಇದು ಭಾರತದಲ್ಲಿ ಸರ್ಚ್ ಆದ ಸ್ಟಾರ್‌ಗಳ ಪಟ್ಟಿ.

  ಇದೀಗ, ಜಗತ್ತಿನಾದ್ಯಂತ ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆದ ಸೆಲೆಬ್ರಿಟಿಗಳ ಪಟ್ಟಿ ಬಹಿರಂಗವಾಗಿದೆ. ಈ ಪಟ್ಟಿಯಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಮಾತ್ರ ಟಾಪ್ ಹತ್ತರ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅಷ್ಟಕ್ಕೂ, ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ಗ್ಲೋಬಲ್ ಸ್ಟಾರ್ ಪಟ್ಟಿಯಲ್ಲಿ ಅಮಿತಾಭ್ ಬಚ್ಚನ್‌ಗೆ ಎಷ್ಟನೇ ಸ್ಥಾನ? ಮೊದಲ ಸ್ಥಾನದಲ್ಲಿ ಯಾರಿದ್ದಾರೆ? ಮುಂದೆ ಓದಿ...

  ಮೊದಲ ಸ್ಥಾನದಲ್ಲಿ ಟಾಮ್ ಹ್ಯಾಂಕ್ಸ್

  ಮೊದಲ ಸ್ಥಾನದಲ್ಲಿ ಟಾಮ್ ಹ್ಯಾಂಕ್ಸ್

  ಜಗತ್ತಿನಾದ್ಯಂತ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳ ಪೈಕಿ ಅಮೆರಿಕ ನಟ ಟಾಮ್ ಹ್ಯಾಂಕ್ಸ್ ಮೊದಲ ಸ್ಥಾನದಲ್ಲಿದ್ದಾರೆ. ಯುಕೆ, ಆಸ್ಟ್ರೇಲಿಯಾ, ಐರ್ಲೆಂಡ್, ಕೆನಡಾ ಹಾಗೂ ಯುಕೆಯಲ್ಲಿ ಹೆಚ್ಚು ಸರ್ಚ್ ಆಗಿದ್ದಾರೆ.

  2020 ಗೂಗಲ್ ಸರ್ಚ್: ಅಮಿತಾಭ್, ಕಂಗನಾ, ರಿಯಾ ಚಕ್ರವರ್ತಿ ಹೆಸರು

  ಎರಡನೇ ಸ್ಥಾನದಲ್ಲಿ ಜೋಕರ್ ನಟ

  ಎರಡನೇ ಸ್ಥಾನದಲ್ಲಿ ಜೋಕರ್ ನಟ

  ಜಗತ್ತಿನಾದ್ಯಂತ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆಗಿರುವ ಸೆಲೆಬ್ರಿಟಿ ಪಟ್ಟಿಯಲ್ಲಿ ಅಮೆರಿಕನ್ ನಟ ಜೊವಾಕ್ವಿನ್ ಫೀನಿಕ್ಸ್ ಎರಡನೇ ಸ್ಥಾನದಲ್ಲಿದ್ದಾರೆ. ಜೊವಾಕ್ವಿನ್ ಫೀನಿಕ್ಸ್ ನಟಿಸಿದ್ದ ಜೋಕರ್ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿತ್ತು. 92ನೇ ಅಕಾಡೆಮಿ ಪ್ರಶಸ್ತಿಯಲ್ಲಿ ಜೊವಾಕ್ವಿನ್ ಫೀನಿಕ್ಸ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರು.

  ಮೂರನೇ ಸ್ಥಾನದಲ್ಲಿ ಬಿಗ್ ಬಿ

  ಮೂರನೇ ಸ್ಥಾನದಲ್ಲಿ ಬಿಗ್ ಬಿ

  ಗೂಗಲ್‌ ಸರ್ಚ್‌ನಲ್ಲಿ ಅಮಿತಾಭ್ ಬಚ್ಚನ್ ಮೂರನೇ ಸ್ಥಾನದಲ್ಲಿದ್ದಾರೆ. ಕೊರೊನಾ ವೈರಸ್‌ಗೆ ತುತ್ತಾಗಿದ್ದ ನಟನ ಬಗ್ಗೆ ತಿಳಿಯಲು ಜಗತ್ತಿನಾದ್ಯಂತ ಜನರು ಆಸಕ್ತಿ ತೋರಿದ್ದಾರೆ. ಭಾರತ, ನೇಪಾಳ, ಪಾಕಿಸ್ತಾನ, ಯುಎಇ ದೇಶಗಳಲ್ಲಿ ಹೆಚ್ಚು ಹುಡುಕಲ್ಪಟ್ಟಿದ್ದಾರೆ.

  ಏಷ್ಯಾದ ಟಾಪ್ 50 ಸೆಲೆಬ್ರಿಟಿಗಳಲ್ಲಿ ಮೊದಲ ಎರಡು ಸ್ಥಾನದಲ್ಲಿ ಇಬ್ಬರು ಭಾರತೀಯರು!

  ನಾಲ್ಕನೇ ಸ್ಥಾನದಲ್ಲಿ Ricky Gervais

  ನಾಲ್ಕನೇ ಸ್ಥಾನದಲ್ಲಿ Ricky Gervais

  ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ಗ್ಲೋಬಲ್ ಸ್ಟಾರ್ ಪಟ್ಟಿಯಲ್ಲಿ ಇಂಗ್ಲೀಷ್ ಹಾಸ್ಯನಟ, ನಟ Ricky Gervais ನಾಲ್ಕನೇ ಸ್ಥಾನದಲ್ಲಿದ್ದಾರೆ. ಯುಕೆ, ಐರ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಕೆನಡಾದಲ್ಲಿ ಹೆಚ್ಚು ಸರ್ಚ್ ಆಗಿದ್ದಾರೆ.

  ಜಾಡಾ ಪಿಂಕೆಟ್ ಸ್ಮಿತ್

  ಜಾಡಾ ಪಿಂಕೆಟ್ ಸ್ಮಿತ್

  ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ಗ್ಲೋಬಲ್ ಸ್ಟಾರ್ ಪಟ್ಟಿಯಲ್ಲಿ ಅಮೆರಿಕ ಮೂಲದ ನಟಿ ಜಾಡಾ ಪಿಂಕೆಟ್ ಸ್ಮಿತ್ ಐದನೇ ಸ್ಥಾನದಲ್ಲಿದ್ದಾರೆ. ಬಹಾಮಾಸ್, ಜಿಂಬಾಬ್ವೆ, ಜಮೈಕಾ, ಟ್ರಿನಿಡಾಡ್ ಮತ್ತು ಟೊಬಾಗೊ ದೇಶಗಳಲ್ಲಿ ಹೆಚ್ಚು ಸರ್ಚ್ ಆಗಿದ್ದಾರೆ.

  ಕೊನೆಯ ಹತ್ತು ಸ್ಥಾನದಲ್ಲಿ ಯಾರಿದ್ದಾರೆ?

  ಕೊನೆಯ ಹತ್ತು ಸ್ಥಾನದಲ್ಲಿ ಯಾರಿದ್ದಾರೆ?

  ಇನ್ನುಳಿದಂತೆ ಆರನೇ ಸ್ಥಾನದಲ್ಲಿ ಜಸ್ಟಿನ್ ಹಾರ್ಟ್ಲೆ (ಅಮೆರಿಕ ನಟ), ಏಳನೇ ಸ್ಥಾನದಲ್ಲಿ ಲೀ ಮೈಕೆಲ್ (ಅಮೆರಿಕ ನಟಿ), ಏಂಟನೇ ಸ್ಥಾನದಲ್ಲಿ ಎಲೀಜರ್ ಗೊಮೆಜ್ (ಮೆಕ್ಸಿಕೋ ನಟ), ಒಂಬತ್ತನೇ ಸ್ಥಾನದಲ್ಲಿ ಅನ್ಸೆಲ್ ಎಲ್ಗೋರ್ಟ್ (ಅಮೆರಿಕ ಗಾಯಕ) ಹಾಗೂ ಹತ್ತನೇ ಸ್ಥಾನದಲ್ಲಿ ಮಿಖಾಯಿಲ್ ಎಫ್ರೆಮೊವ್ (ರಷ್ಯಾ ನಟ) ಇದ್ದಾರೆ.

  English summary
  Google Year In Search 2020: World's top searched celebrities.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X