For Quick Alerts
  ALLOW NOTIFICATIONS  
  For Daily Alerts

  'ಹ್ಯಾರಿ ಪಾಟರ್' ಖ್ಯಾತಿಯ ಹಿರಿಯ ನಟ ರಾಬಿ ಕೋಲ್ಟ್ರೇನ್ ನಿಧನ

  |

  ಹಾಲಿವುಡ್‌ನ ಜನಪ್ರಿಯ ಸಿನಿಮಾ ಸರಣಿ 'ಹ್ಯಾರಿ ಪಾಟರ್‌'ನ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟ ರಾಬಿ ಕೋಲ್ಟ್ರೇನ್ ನಿಧನ ಹೊಂದಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.

  ಕಳೆದ ಎರಡು ವರ್ಷಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ ರಾಬಿ ಕೋಲ್ಟ್ರೇನ್ ನಿನ್ನೆ (ಅಕ್ಟೋಬರ್ 14) ಸ್ಟಾಟ್‌ಲೆಂಡ್‌ನ ಫೋರ್ತ್‌ ವ್ಯಾಲಿ ರಾಯಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ.

  1980 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ರಾಬಿ ಕೋಲ್ಟ್ರೇನ್ ಹಲವಾರು ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಶ್ವಪ್ರಸಿದ್ಧ 'ಹ್ಯಾರಿ ಪಾಟರ್‌'ನ ಆರು ಸಿನಿಮಾಗಳಲ್ಲಿ ರಾಬಿ ಕೋಲ್ಟ್ರೇನ್ ನಟಿಸಿದ್ದಾರೆ. ಹ್ಯಾರಿ ಪಾಟರ್‌ನಲ್ಲಿ ರಾಬಿ ನಟಿಸಿದ್ದ ಹಾಗ್ರಿಡ್ ಪಾತ್ರ ಬಹಳ ಜನಪ್ರಿಯಗೊಂಡಿತ್ತು.

  'ಹ್ಯಾರಿ ಪಾಟರ್' ಮಾತ್ರವೇ ಅಲ್ಲದೆ, ಜನಪ್ರಿಯ ಸಿನಿಮಾಗಳಾದ 'ವ್ಯಾನ್ ಹೆಲ್ಸಿಂಗ್'ನ ಎರಡು ಸರಣಿ, ಬಾಂಡ್ ಸಿನಿಮಾ 'ಗೋಲ್ಡನ್ ಐ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಟಿವಿ ಲೋಕದಲ್ಲಿಯೂ ರಾಬಿ ಬಹಳ ಜನಪ್ರಿಯ ನಟರಾಗಿದ್ದರು. ಟಿವಿ ಆಸ್ಕರ್‌ ಸಹ ರಾಬಿ ಪಡೆದುಕೊಂಡಿದ್ದಾರೆ.

  ರಾಬಿ ನಿಧನಕ್ಕೆ ಹಾಲಿವುಡ್‌ನ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ ಹ್ಯಾರಿ ಪಾಟರ್ ಸೃಷ್ಟಿಕರ್ತೆ ಜೆಕೆ ರೋಲಿಂಗ್ ಹಾಗೂ 'ಹ್ಯಾರಿ ಪಾಟರ್' ಪಾತ್ರಧಾರಿ ಡ್ಯಾನಿಯಲ್ ರ್ಯಾಡ್‌ಕ್ಲಿಫ್ ಸಹ ಸಂತಾಪ ಸೂಚಿಸಿದ್ದಾರೆ.

  ''ನಾನು ಭೇಟಿಯಾದ ಹಾಸ್ಯಮಯ ವ್ಯಕ್ತಿಗಳಲ್ಲಿ ರಾಬಿ ಒಬ್ಬರು ಮತ್ತು ಸೆಟ್‌ನಲ್ಲಿ ಮಕ್ಕಳಂತೆ ನಮ್ಮನ್ನು ನಿರಂತರವಾಗಿ ನಗಿಸುತ್ತಿದ್ದರು. 'ಪ್ರಿಸನರ್ಸ್ ಆಫ್ ಅಜ್ಕಬಾನ್' ಸಿನಿಮಾ ಚಿತ್ರೀಕರಿಸುವಾಗ ಧಾರಾಕಾರ ಮಳೆ ಬಂದು ನಾವೆಲ್ಲ ಗುಡಿಸಲೊಂದರಲ್ಲಿ ಸಿಲುಕಿಕೊಂಡಿದ್ದೆವು, ಆಗ ನಾವು ಭಯಪಡದಂತೆ ಇರಲೆಂದು ಅವರು ಹಲವು ಕತೆಗಳನ್ನು ಹೇಳಿದ್ದು ನನಗೆ ಈಗಲೂ ನೆನಪಿದೆ. ಅವರನ್ನು ಭೇಟಿಯಾಗಿದ್ದು, ಅವರೊಟ್ಟಿಗೆ ನಟಿಸಿದ್ದು ನನ್ನ ಪಾಲಿನ ಅದೃಷ್ಟವೆಂದೇ ನಾನು ಭಾವಿಸುತ್ತೇನೆ. ಅವರೊಬ್ಬ ಅದ್ಭುತವಾದ ವ್ಯಕ್ತಿ. ಅವರ ಅಗಲಿಕೆ ತೀವ್ರ ದುಃಖ ಉಂಟು ಮಾಡಿದೆ'' ಎಂದಿದ್ದಾರೆ.

  ಹ್ಯಾರಿ ಪಾಟರ್ ಲೇಖಕಿ ಜೆಕೆ ರೋಲಿಂಗ್ ಸಹ ರಾಬಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ''ರಾಬಿಯಂಥಹಾ ಇನ್ನೊಬ್ಬ ವ್ಯಕ್ತಿಯನ್ನು ನಾನು ನೋಡಿಲ್ಲ. ಅವರದ್ದು ಪರಿಪೂರ್ಣ ವ್ಯಕ್ತಿತ್ವ. ಅವರಂಥಹಾ ಮತ್ತೊಬ್ಬ ವ್ಯಕ್ತಿ ಇರಲು ಸಾಧ್ಯವೇ ಇಲ್ಲ. ಅವರನ್ನು ನಾನು ಭೇಟಿಯಾಗಲು, ಅವರ ಪರಿಚಯ ಆಗಲು, ಅವರೊಟ್ಟಿಗೆ ಕೆಲಸ ಮಾಡಲು ನಾನು ಪುಣ್ಯ ಮಾಡಿದ್ದೇನೆ. ಅವರ ಕುಟುಂಬಕ್ಕೆ ನಾನು ಪ್ರೀತಿ ಹಾಗೂ ಗೌರವವನ್ನು ನೀಡುತ್ತಿದ್ದೇನೆ. ನನ್ನ ಸಾಂತ್ವನ ಸದಾ ಅವರೊಟ್ಟಿಗೆ ಇರಲಿವೆ'' ಎಂದಿದ್ದಾರೆ.

  English summary
  Famous Harry Potter actor Robbie Coltrane passed away. He was 70. He lived with two children. Many famous actors pay tribute.
  Saturday, October 15, 2022, 17:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X