For Quick Alerts
  ALLOW NOTIFICATIONS  
  For Daily Alerts

  'ಅವೇಂಜರ್ಸ್‌' ನಟನಿಗೆ ಅಪಘಾತ, ಸ್ಥಿತಿ ಗಂಭೀರ

  |

  ವಿಶ್ವ ವಿಖ್ಯಾತ ಸಿನಿಮಾ ಸರಣಿ 'ಅವೇಂಜರ್ಸ್‌'ನ ಮುಖ್ಯ ನಟನೊಬ್ಬನಿಗೆ ಅಪಘಾತವಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ.

  'ಅವೇಂಜರ್ಸ್‌' ಸರಣಿಯ ಮೂಲ ಅವೇಂಜರ್‌ಗಳಲ್ಲಿ ಒಬ್ಬನಾಗಿರುವ ಹಾಕ್‌ಐ ಪಾತ್ರದಲ್ಲಿ ನಟಿಸುವ ಜೆರ್ಮಿ ರನ್ನರ್‌ಗೆ ಅಪಘಾತವಾಗಿದ್ದು ಅವರ ಪರಸ್ಥಿತಿ ಗಂಭೀರವಾಗಿದೆ. ವಿಷಮ ವಾತಾವರಣದಿಂದಾಗಿ ಅಪಘಾತ ಸಂಭವಿಸಿದೆ ಎಂದು ಜೆರ್ಮಿ ರನ್ನರ್‌ ಅವರ ಮ್ಯಾನೇಜರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

  ದಟ್ಟ ಮಂಜು ಕವಿದಿದ್ದ ಕಾರಣ ಜೆರ್ಮಿ ರನ್ನರ್‌ ಕಾರು ಅಪಘಾತಕ್ಕೆ ಈಡಾಗಿದೆ ಎನ್ನಲಾಗುತ್ತಿದೆ. ಅಪಘಾತದಲ್ಲಿ ಜೆರ್ಮಿ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಏರ್‌ಲಿಫ್ಟ್‌ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ.

  ಜೆರ್ಮಿ ರನ್ನರ್‌ ನಿವಾಸವಿರುವ ರೋಸ್ ಸ್ಕೀ ಬಳಿ ಕಳೆದ ಕೆಲ ವಾರಗಳಿಂದ ತೀವ್ರ ಹಿಮಪಾತವಾಗುತ್ತಿದೆ. ಆ ಪ್ರದೇಶದಲ್ಲಿ ವಾಹನ ಸಂಚಾರ ಸಂಪೂರ್ಣ ವ್ಯತ್ಯಯವಾಗಿದೆ. ವಿದ್ಯುತ್ ಸಹ ಕಡಿತಗೊಂಡಿದೆ. ಉತ್ತರ ನೆವಾಡಾದ ಸುಮಾರು 35,000 ಮನೆಗಳು ಹಿಮದಿಂದ ಆವೃತ್ತವಾಗಿದ್ದು ಸಮಸ್ಯೆ ಎದುರಿಸಿವೆ. ಇಂಥಹಾ ಸನ್ನಿವೇಶದಲ್ಲಿ ಕಾರು ಚಲಾಯಿಸಿರುವ ಕಾರಣ ಜೆರ್ಮಿಗೆ ಅಪಘಾತವಾಗಿದೆ ಎನ್ನಲಾಗುತ್ತಿದೆ.

  ಜೆರ್ಮಿ ರನ್ನರ್‌ ಹಾಲಿವುಡ್‌ನ ಹೆಸರಾಂತ ನಟ, 'ಅವೇಂಜರ್ಸ್' ಸಿನಿಮಾದಲ್ಲಿ ಜೆರ್ಮಿ ಹಾಕ್‌ಐ ಅವೇಂಜರ್ ಆಗಿ ನಟಿಸುತ್ತಾರೆ. ಅವರ ಪಾತ್ರ 'ಹಾಕ್‌ಐ' ಅನ್ನೇ ಪ್ರಧಾನವಾಗಿರಿಸಿಕೊಂಡು ಪ್ರತ್ಯೇಕ ವೆಬ್ ಸರಣಿಯನ್ನು ಸಹ ಮಾರ್ವೆಲ್ ನಿರ್ಮಾಣ ಮಾಡಿದೆ. 'ಅವೇಂಜರ್ಸ್' ಮಾತ್ರವೇ ಅಲ್ಲದೆ ಮತ್ತೊಂದು ವಿಶ್ವವಿಖ್ಯಾತ ಸಿನಿಮಾ ಸರಣಿ 'ಮಿಷನ್ ಇಂಪಾಸಿಬಲ್'ನಲ್ಲಿಯೂ ಜೆರ್ಮಿ ನಟಿಸಿದ್ದಾರೆ.

  ಅದಕ್ಕೂ ಮುನ್ನ ಆಸ್ಕರ್ ವಿಜೇತ ಸಿನಿಮಾ 'ಹರ್ಟ್‌ ಲಾಕರ್' ಸಿನಿಮಾದಲ್ಲಿ ಜೆರ್ಮಿ ನಟಿಸಿದ್ದರು. ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್‌ಗೆ ನಾಮಿನೇಟ್ ಸಹ ಆಗಿದ್ದರು. ಅದರ ಬಳಿಕ 'ದಿ ಟೌನ್' ಸಿನಿಮಾಕ್ಕಾಗಿಯೂ ಒಮ್ಮೆ ಆಸ್ಕರ್‌ಗೆ ನಾಮಿನೇಟ್ ಆಗಿದ್ದರು. ಎರಡೂ ಬಾರಿ ಆಸ್ಕರ್‌ ಗೆಲ್ಲುವಲ್ಲಿ ಜೆರ್ಮಿ ವಿಫಲರಾಗಿದ್ದರು.

  ಇತ್ತೀಚೆಗೆ ಬಿಡುಗಡೆ ಆಗಿರುವ ಥ್ರಿಲ್ಲರ್ ಕತೆಯುಲ್ಳ 'ಗ್ಲಾಸ್ ಆನಿಯನ್; ಎ ನೈವ್ಸ್ ಔಟ್ ಮಿಸ್ಟರಿ' ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಪ್ರಸಾರವಾಗುತ್ತಿರುವ 'ಮೇಯರ್ ಆಫ್ ಕಿಂಗ್ಸ್‌ಟೌನ್' ವೆಬ್ ಸರಣಿಯಲ್ಲಿ ಸಹ ನಟಿಸುತ್ತಿದ್ದಾರೆ.

  English summary
  Avengers actor Jermey Renner met with accident. His condition is criticle. Jermey Renner acted as Hawkeye in Avengers movie.
  Monday, January 2, 2023, 13:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X