»   » ಶಾಪಿಂಗ್ ಮಾಡಲು ಹೋಗಿ ಕದ್ದು ಸಿಕ್ಕಿ ಬಿದ್ದ ತಾರೆಯರು!

ಶಾಪಿಂಗ್ ಮಾಡಲು ಹೋಗಿ ಕದ್ದು ಸಿಕ್ಕಿ ಬಿದ್ದ ತಾರೆಯರು!

By ಜೇಮ್ಸ್ ಮಾರ್ಟಿನ್
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಹಾಲಿವುಡ್ ನ ಬೆಡಗಿಯರಲ್ಲಿ ಅನೇಕರಿಗೆ ಕದಿಯುವ ಚಾಳಿ ಗೊತ್ತೋ ಗೊತ್ತಿಲ್ಲದೆಯೋ ಅಂಟಿ ಕೊಂಡಿರುತ್ತದೆ. 64 ವಿದ್ಯೆಗಳಲ್ಲಿ ಕಳ್ಳತನವೂ ಒಂದು ವಿದ್ಯೆ ಎನ್ನಲಾಗುತ್ತದೆ. ಆದರೆ, ಈ ಸೆಲೆಬ್ರಿಟಿಗಳು ಏತಕ್ಕೆ ಶಾಪಿಂಗ್ ನೆಪದಲ್ಲಿ ಸಕತ್ತಾಗಿ ಕದಿಯುತ್ತಾರೆ ಎಂಬುದು ಇಂದಿಗೂ ಚರ್ಚೆಯ ವಿಷಯವಾಗಿ ಹಲವಾರು ಮನೋ ವಿಜ್ಞಾನಿಗಳನ್ನು ಕಾಡುತ್ತಿದೆ.

  ಇದೊಂದು ಸೈಕಾಲಾಜಿಕಲ್ ತೊಂದರೆ ಇದಕ್ಕೆ ಕ್ಲೆಪ್ಟೋಮ್ಯಾನಿಯಾ ಎಂಬ ಹೆಸರಿದೆ ಎಂದು ವೈದ್ಯರಂಗ ವಿವರಿಸಬಹುದು. ಆದರೆ, ಸೆಲೆಬ್ರಿಟಿಗಳು ಕೆಲಸಕ್ಕೆ ಬಾರದ ವಸ್ತುಗಳನ್ನು ಕದ್ದು ಸಿಕ್ಕಿ ಬಿದ್ದು ಅಯ್ಯೋ ನನಗೆ ಗೊತ್ತಿಲ್ಲ ಎನ್ನುವಾಗ ಯಾರನ್ನು ನಂಬುವುದೋ ಬಿಡುವುದೋ ಗೊತ್ತಿಲ್ಲ.[ಕ್ಯಾನ್ಸರ್ ಮೆಟ್ಟಿ ನಿಂತ ಸೆಲೆಬ್ರಿಟಿಗಳಿಗೆ ಸೆಲ್ಯೂಟ್]

  ಭಾರಿ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವ ತಾರೆಯರು 20-30 ಡಾಲರ್ ಮೌಲ್ಯದ ವಸ್ತುಗಳನ್ನು ಕದಿಯುತ್ತಾರೆ ಎಂದರೆ ಯಾರಿಗಾದರೂ ಸೋಜಿಗವೆನಿಸದೆ ಇರದು. ಅದರೆ, ಕದಿಯುವ ಸುಖ ಅವರಿಗೆ ಮಾತ್ರ ಗೊತ್ತು.[ರಸಿಕರ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಎರೋಟಿಕ್ ಸಿನ್ಮಾಗಳು]

  ಎಷ್ಟೇ ಗಳಿಕೆ ಹೊಂದಿದ್ದರೂ ದೈಹಿಕ ಹಾಗೂ ಮಾನಸಿಕ ಸಮಸ್ಯೆ ಅನೇಕ ಹಾಲಿವುಡ್ ಸೆಲಿಬ್ರಿಟಿಗಳಿಗೆ ಅಂಟಿಕೊಂಡಿರುತ್ತದೆ. ನಟಿ ಲಿನ್ ಆಂಡರ್ಸನ್ ಒಮ್ಮೆ ಹ್ಯಾರಿ ಪಾಟರ್ ಡಿವಿಡಿ ಕದ್ದು ಸಿಕ್ಕಿ ಬಿದ್ದಿದ್ದರು. ನೂರಾರು ಡಾಲರ್ ದಂಡ ತೆತ್ತು ಕ್ಷಮೆ ಕೋರಿದ್ದರು. [ಬಾಯ್ ಫ್ರೆಂಡ್ ಜೊತೆ ಜೆನ್ನಿಫರ್ ಲೋಪೆಜ್ ಕುಚ್ ಕುಚ್]

  ಹೀಗೆ ಗೊತ್ತಿಲ್ಲದೆ ಅನೇಕ ತಾರೆಗಳು ಕದಿಯುವ ಚಾಳಿಯಿಂದ ತಲೆ ತಗ್ಗಿಸಿದ ಪ್ರಸಂಗಗಳು ಒಂದೆರಡಲ್ಲ. ಇಲ್ಲಿ ಕೆಲ ಜನಪ್ರಿಯ ಸೆಲೆಬ್ರಿಟಿಗಳ ಕದಿಯುವ ಆಟದ ಬಗ್ಗೆ ಮುಂದೆ ಓದಿ..

  ಗಾಯಕಿ ಬ್ರಿಟ್ನಿ ಸ್ಪಿಯರ್ಸ್

  ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಶಾಪಿಂಗ್ ಗೆ ಹೋದಾಗ ಐಷಾರಾಮಿ ವಸ್ತುಗಳಿಗೆ ಕೈ ಹಾಕುವುದೇ ಇಲ್ಲ. ಬ್ರಿಟ್ನಿ ಅವರು ಹಸ್ಲರ್ ಸ್ಟೋರ್ ನಿಂದ 'ವಿಗ್' ಎತ್ತಿ ಸಿಕ್ಕಿ ಬಿದ್ದಿದ್ದರು. ಮತ್ತೊಮ್ಮೆ ಗ್ಯಾಸ್ ಸ್ಟೇಷನ್ ನಿಂದ ಲೈಟರ್ ಎಗರಿಸಿದ್ದರು.

  ನಟಿ ಮೇಗನ್ ಫಾಕ್ಸ್

  ನಟಿ ಮೇಗನ್ ಫಾಕ್ಸ್ ಅವರಿಗೆ ಕಾಸ್ಮೆಟಿಕ್ಸ್ ಎಂದರೆ ಹುಚ್ಚು. ಶಾಪಿಂಘ್ ಹೋದಾಗ ಮೇಕ್ ಅಪ್ ಕಿಟ್ ಗೆ ಬೇಕಾದ ನೆಚ್ಚಿನ ವಸ್ತು ಕಂಡು ಬಂದರೆ ತಕ್ಷಣವೇ ಎಗರಿಸಿಬಿಡುತ್ತಾರೆ. ಈ ಹಿಂದೆ ವಾಲ್ ಮಾರ್ಟ್ ನಲ್ಲಿ ಕಾಸ್ಮೆಟಿಕ್ ಐಟಂ ಕದ್ದಿದ್ದರು.

  ಗಾಯಕಿ ಕೇಶಾ

  ಗಾಯಕಿ ಕೇಶಾ ಅವರು ಸೆಲೆಬ್ರಿಟಿಯಾಗಿ ಜನಪ್ರಿಯತೆ ಗಳಿಸುವುದಕ್ಕೂ ಮುನ್ನ ಕಷ್ಟದ ದಿನಗಳನ್ನು ಎದುರಿಸಿದ್ದರು. ಈ ಸಮಯದಲ್ಲಿ ಶಾಪ್ ಲಿಫ್ಟಿಂಗ್ ಮಾಡುವುದು ಸಾಮಾನ್ಯ ಸಂಗತಿಯಾಗಿತ್ತು.

  ಲಿಂಡ್ಸೆ ಲೋಹನ್

  ನಟಿ ಲಿಂಡ್ಸೆ ಲೋಹನ್ ಅವರು ಮಿಕ್ಕವರಿಗಿಂತ ಕೊಂಚ ದುಬಾರಿ ವಸ್ತುವಿಗೆ ಕೈ ಹಾಕಿದ್ದರು. 2011ರಲ್ಲಿ ಆಭರಣ ಮಳಿಗೆಯೊಂದರಿಂದ 2,500 ಡಾಲರ್ ಮೌಲ್ಯದ ನೆಕ್ಲೇಸ್ ಎತ್ತಿ ಬಿಟ್ಟಿದ್ದರು. ಕೋರ್ಟಿನಲ್ಲಿ ವಿಚಾರಣೆ ಎದುರಿಸಿ ಕಣ್ಣೀರಿಟ್ಟಿದ್ದರು.

  ಅಮಂಡಾ ಬೈನ್ಸ್

  ಡಿಸ್ನಿ ತಾರೆ ಅಮಂಡಾ ಬೈನ್ಸ್ ಅವರು ಡ್ರಗ್ಸ್ ಬಳಕೆ ಅತಿಯಾಗಿ ಮಾಡಿ ಸುದ್ದಿಯಾಗಿದ್ದರು. ಮ್ಯಾಡಿಸನ್ ಅವಿನ್ಯೂನಲ್ಲಿ 200 ಡಾಲರ್ ಮೌಲ್ಯದ ಟೋಪಿಯೊಂದನ್ನು ಕದ್ದು ಸಿಕ್ಕಿ ಬಿದ್ದಿದ್ದರು.

  ಬಿಗ್ ಸೀನ್

  ಬೇರೆ ಸೆಲೆಬ್ರಿಟಿಗಳ ರೀತಿಯಲ್ಲಿ ಬೀಗ್ ಸೀನ್ ಅವರು ಕದಿಯಲು ಯಾವ ಶಾಪಿಂಗ್ ಮಾಲ್ ಗೂ ಹೋಗಿರಲಿಲ್ಲ. ತಮ್ಮ ಹಳೆ ಗೆಳತಿಯ ಮನೆಯಲ್ಲಿ ರೋಲೆಕ್ಸ್ ವಾಚ್ ಎತ್ತಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

  ವಿನೊನಾ ರೈಡರ್

  ನಟಿ ವಿನೊನಾ ರೈಡರ್ ಅವರು ಬಟ್ಟೆ ಬರೆ ಸೇರಿದಂತೆ ಸುಮಾರು 5500 ಡಾಲರ್ ಮೌಲ್ಯದ ವಸ್ತುಗಳನ್ನು 2001ರಲ್ಲಿ ಬೆವರ್ಲಿ ಹಿಲ್ಸ್ ನ ಶಾಪ್ ವೊಂದರಲ್ಲಿ ಕದ್ದಿದ್ದರು.

  ಫರ್ಹಾ ಫಾಚೆಟ್

  ಚಾರ್ಲಿಸ್ ಏಂಜೆಲ್ ಚಿತ್ರದ ನಟಿ ಫರ್ಹಾ ಫಾಚೆಟ್ ಎರಡು ಬಾರಿ ಬಟ್ಟೆ ಕದಿಯುವಾಗ ಸಿಕ್ಕಿ ಬಿದ್ದಿದ್ದರು. 1970ರಲ್ಲೇ ಈ ರೀತಿ ಕೃತ್ಯದಲ್ಲಿ ತೊಡಗಿ ಸಿಕ್ಕಿ ಬಿದ್ದಿದ್ದರು.

  English summary
  Have you ever had the urge to just pick something that really appeals to you from a store and not pay for it?We have all had our own experiences with shoplifting. So have these Hollywood celebrities who were caught shoplifting.The Hollywood celebrities mentioned below, who were caught shoplifting have had their own reasons.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more