For Quick Alerts
  ALLOW NOTIFICATIONS  
  For Daily Alerts

  ಥಾಯ್ಲೆಂಡ್ ದುರಂತ: ಸಿನಿಮಾ ಮಾಡಲು ಮುಂದಾದ ನಿರ್ಮಾಪಕರು

  By Bharath Kumar
  |

  ಥಾಯ್ಲೆಂಡ್ ನ ಗುಹೆಯೊಂದರಲ್ಲಿ ಜೂನ್ 23ರಿಂದ ಸಿಲುಕಿದ್ದ ಫುಟ್ಬಾಲ್ ತಂಡವೊಂದರ 12 ಬಾಲಕರು ಮತ್ತು ಅವರ ಕೋಚ್ ರಕ್ಷಿಸುವ ಕಾರ್ಯಾಚರಣೆ ಇಡೀ ಜಗತ್ತಿನ ಗಮನ ಸೆಳೆದಿದೆ.

  ಪ್ರವಾಸಕ್ಕೆಂದು ಜೂನ್ 23ರಂದು ಥಾಮ್ ಲುವಾಂಗ್ ನಂಗ್ ನಾನ್ ಎಂಬ ಗುಹೆಯೊಳಗೆ ಫುಟ್ಬಾಲ್ ತಂಡದ ಬಾಲಕರು ಹೋಗಿದ್ದರು. ಆದರೆ, ಇದ್ದಕ್ಕಿದ್ದಂತೆ ಸುರಿದ ಭಾರಿ ಮಳೆಗೆ ಉಂಟಾದ ಪ್ರವಾಹದಿಂದಾಗಿ ಕತ್ತಲೆಯ ಗುಹೆಯಿಂದ ಹೊರಬರಲಾರದೆ ಸಿಲುಕಿಕೊಂಡಿದ್ದರು.

  ಥಾಯ್ಲೆಂಡ್: ಬುದ್ಧನಿಂದಾಗಿ ಸಾವು ಗೆದ್ದರೇ ಈ ಬಾಲಕರು?

  ಕೊಂಚವೂ ಬೆಳಕಿನ ಕಿರಣ ಸ್ಪರ್ಶಿಸದ, ಆಮ್ಲಜನಕ ಕೂಡ ಸರಿಯಾಗಿ ಲಭ್ಯವಾಗದ ಆ ಕಗ್ಗತ್ತಲ ಗುಹೆಯಲ್ಲಿ ಅಷ್ಟು ದಿನ ಬಾಲಕರು ಜೀವ ಉಳಿಸಿಕೊಳ್ಳಲು ಹರಸಾಹಸಪಟ್ಟಿದ್ದಾರೆ. ನಂತರ ವಿಷ್ಯ ತಿಳಿದು ರಕ್ಷಣೆ ಪಡೆ ಇವರನ್ನ ರಕ್ಷಿಸಲು ಮುಂದಾಗಿತ್ತು. ಕೊನೆಗೂ ಎಲ್ಲರನ್ನ ಸುರಕ್ಷಿತವಾಗಿ ಕಾಪಾಡುವಲ್ಲಿ ಈ ಆಪರೇಷನ್ ಬಹುತೇಕ ಯಶಸ್ವಿಯಾಗಿದೆ.

  ಥಾಯ್ಲೆಂಡ್ ಗುಹೆ ಕಾರ್ಯಾಚರಣೆ ಇಂದೇ ಪೂರ್ಣಗೊಳ್ಳುವ ನಿರೀಕ್ಷೆ

  ಪ್ರಪಂಚದ ದಿಕ್ಕನ್ನ ತನ್ನತ್ತ ಸೆಳೆದ ಈ ದುರಂತದ ಬಗ್ಗೆ ಯಾರಾದರೂ ಒಳ್ಳೆ ಸಿನಿಮಾ ಮಾಡಬಹುದು ಎಂದು ಅದೇಷ್ಟೋ ಜನ ಮನಸ್ಸಿನಲ್ಲಿ ಅಂದುಕೊಂಡಿರುತ್ತಾರೆ. ಆ ಆಸೆ ನೆರವೇರಲಿದೆ ಎಂಬುದು ಮತ್ತೊಂದು ಥ್ರಿಲ್ಲಿಂಗ್ ಸಂಗತಿ.

  ಹೌದು, ಥಾಯ್ಲೆಂಡ್ ನ ಗುಹೆಯೊಳಗೆ ಸಿಲುಕಿಕೊಂಡು ಸಾವು-ಬದುಕಿನ ಮಧ್ಯೆ ಹೋರಾಟ ಮಾಡಿದ ಬಾಲಕರ ಕುರಿತು ಸಿನಿಮಾ ಮಾಡಲು ಹಾಲಿವುಡ್ ನಿರ್ಮಾಪಕರು ಮುಂದಾಗಿದ್ದಾರೆ.

  ಗುಹೆಯಲ್ಲಿ ಸಿಲುಕಿರುವ ಕೋಚ್‌ನ ಬದುಕು ಇನ್ನೂ ದುರಂತಮಯ

  ಅಮೇರಿಕಾದ ಖ್ಯಾತ ನಿರ್ಮಾಪಕರಾದ ಮಿಸ್ಟರ್ ಸ್ಕಾಟ್ ಮತ್ತು ಆಡಮ್ ಸ್ಮಿತ್ ಎಂಬುವವರು ಈ ಬಗ್ಗೆ ಸಿನಿಮಾ ಮಾಡಲು ಮನಸ್ಸು ಮಾಡಿದ್ದು, ಈ ಘಟನೆ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಆ ದುರಂತ ನಡೆದ ಸ್ಥಳಕ್ಕೆ ಧಾವಿಸಿ ಮಾಹಿತಿ ಕಲೆ ಹಾಕಿದ್ದಾರೆ. ಅಷ್ಟೇ ಅಲ್ಲದೇ ಈ ಚಿತ್ರಕ್ಕೆ ಚಿತ್ರಕಥೆ ಬರೆಯಲು ಬರಹಗಾರರನ್ನ ಕೂಡ ಆಯ್ಕೆ ಮಾಡಿಕೊಂಡಿದ್ದಾರಂತೆ.

  ಮೊದಲೇ ಹಾಲಿವುಡ್ ಮಂದಿ ಸಾಹಸಮಯ ಚಿತ್ರಗಳನ್ನ ಮಾಡುವುದರಲ್ಲಿ ಎತ್ತಿದ ಕೈ. ಅಂತಹದ್ರಲ್ಲಿ, ವಿಶ್ವದ ಮಟ್ಟಿಗೆ ಸುದ್ದಿಯಾದ ಈ ನೈಜ ಘಟನೆಯನ್ನ ಬಿಡ್ತಾರ.?

  English summary
  Hollywood producers have arrived in Thailand and are already plotting a movie about the young boys and their soccer coach trapped in a cave — before they’re all out.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X