»   » 59ನೇ ಗ್ರ್ಯಾಮಿ ಪ್ರಶಸ್ತಿ ವಿಜೇತರ ಪಟ್ಟಿ: ಇಬ್ಬರು ಭಾರತೀಯರಿಗೆ ಪ್ರಶಸ್ತಿ

59ನೇ ಗ್ರ್ಯಾಮಿ ಪ್ರಶಸ್ತಿ ವಿಜೇತರ ಪಟ್ಟಿ: ಇಬ್ಬರು ಭಾರತೀಯರಿಗೆ ಪ್ರಶಸ್ತಿ

Posted By:
Subscribe to Filmibeat Kannada

59ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಪ್ರಧಾನ ಸಮಾರಂಭ ಫೆಬ್ರುವರಿ 12 ರಂದು ಲಾಸ್ ಏಂಜಲೀಸ್ ನ ಸ್ಟಾಪ್ಲೆಸ್ ಸೆಂಟರ್ ನಲ್ಲಿ ನಡೆಯಿತು. ಖ್ಯಾತ ಗಾಯಕಿ ಅಡೆಲೆ ಟಾಪ್ 3 ವಿಭಾಗಗಳಲ್ಲಿ 2017 ನೇ ಸಾಲಿನ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದು, ಇಬ್ಬರು ಭಾರತೀಯರು ಸಹ ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

59ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಯಾವ್ಯಾವ ವಿಭಾಗಗಳಲ್ಲಿ, ಯಾರು ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದಾರೆ ಎಂಬ ವಿಜೇತರ ಪಟ್ಟಿ ಇಲ್ಲಿದೆ.

ಇಬ್ಬರು ಭಾರತೀಯರಿಗೆ ಗ್ರ್ಯಾಮಿ ಪ್ರಶಸ್ತಿ

ಭಾರತ ಮೂಲದ ರಿಕಿ ಕೇಜ್ ಅವರ ಆಲ್ಬಂ 'ವಿಂಡ್ಸ್ ಆಫ್ ಸಂಸಾರ'ಕ್ಕೆ ಬೆಸ್ಟ್ ನ್ಯೂ ಏಜ್ ಆಲ್ಬಂ ಟ್ರೋಪಿ ದೊರೆತಿದೆ. ಅಲ್ಲದೇ ಭಾರತದ ನೀಲಾ ವಾಸ್ವಾನಿ ಅವರ 'ಐ ಆಮ್ ಮಲಾಲ:ಹೌ ಒನ್ ಗರ್ಲ್ ಸ್ಟುಡ್ ಅಪ್ ಫಾರ್ ಎಜುಕೇಶನ್ ಅಂಡ್ ಚೇಂಜ್ಡ್ ದ ವರ್ಲ್ಡ್(ಮಲಾಲಾ ಯೂಸಫ್ ಝಾಯಿ)' ಆಲ್ಬಂಗೆ ಮಕ್ಕಳ ಚಿತ್ರ ವಿಭಾಗದಲ್ಲಿ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ.

ಅಡೆಲೆ ಗೆ ಒಟ್ಟು 5 ಗ್ರ್ಯಾಮಿ ಪ್ರಶಸ್ತಿಗಳು

ಖ್ಯಾತ ಗಾಯಕಿ ಅಡೆಲೆ ಅವರ '25' ಮತ್ತು ಬಿಯಾನ್ಸ್ ಅವರ 'Lemonade' ಆಲ್ಬಂಗಳು ಪ್ರಮುಖವಾಗಿ ಅತ್ಯುತ್ತಮ ವಾರ್ಷಿಕ ಆಲ್ಬಂಗಳಾಗಿ ಗ್ರ್ಯಾಮಿ ಪ್ರಶಸ್ತಿ ಪಡೆದಿವೆ. ಜೊತೆಗೆ ಅಡೆಲೆ 'ಹೆಲೋ' ಆಲ್ಬಂ ಗೆ ರೆಕಾರ್ಡ್ ಆಫ್ ದಿ ಇಯರ್ ಮತ್ತು ಸಾಂಗ್ ಆಫ್ ದಿ ಇಯರ್ ಗ್ರ್ಯಾಮಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟು 5 ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಬೆಸ್ಟ್ ರ್ಯಾಪ್ ಆಲ್ಬಂ

ಬೆಸ್ಟ್ ರ್ಯಾಪ್ ಆಲ್ಬಂ ವಿಭಾಗದಲ್ಲಿ ಕಾಲರಿಂಗ್ ಬುಕ್ ಅವರ 'ಚಾನ್ಸ್ ದಿ ರ್ಯಾಪ್ಪರ್' ಆಯ್ಕೆಯಾಗಿ ಅವರಿಗೆ ಗ್ರ್ಯಾಮಿ ಪ್ರಶಸ್ತಿ ತಂದುಕೊಟ್ಟಿದೆ.

ಬೆಸ್ಟ್ ಅರ್ಬನ್ ಕಾಂಟೆಂಪರರಿ ಆಲ್ಬಂ

ಬಿಯಾನ್ಸ್ ಅವರು ತಮ್ಮ 'Lemondade' ಆಲ್ಬಂಗೆ ಬೆಸ್ಟ್ ಅರ್ಬನ್ ಕಾಂಟೆಂಪರರಿ ಆಲ್ಬಂ ವಿಭಾಗದಿಂದ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದಾರೆ.

ಬೆಸ್ಟ್ ರಾಕ್ ಸಾಂಗ್

ಡೇವಿಡ್ ಬೋವಿ ಅವರ 'ಬ್ಲಾಕ್ ಸ್ಟಾರ್' ರಾಕ್ ಹಾಡಿಗೆ ಅತ್ಯುತ್ತಮ ಬೆಸ್ಟ್ ರಾಕ್ ಸಾಂಗ್ ವಿಭಾಗದಿಂದ ಗ್ರ್ಯಾಮಿ ಅವಾರ್ಡ್ ಲಭಿಸಿದೆ.

ಚಿತ್ರ ಕೃಪೆ: Getty Images

ಅತ್ಯುತ್ತಮ ಪಾಪ್ ಡ್ಯುಯೊ/ಗ್ರೂಪ್ ಡ್ಯಾನ್ಸ್

ಪಾಪ್ ಡ್ಯುಯೊ/ಗ್ರೂಪ್ ಡ್ಯಾನ್ಸ್ ವಿಭಾಗದಲ್ಲಿ 'ಟ್ವೆಂಟಿ ಒನ್ ಪೈಲಟ್ಸ್' ಎಂಬ ಬ್ಯಾಂಡ್ 'ಸ್ಟ್ರೆಸ್ಸ್ಡ್ ಔಟ್' ಎಂಬ ಪ್ರದರ್ಶನಕ್ಕೆ 59ನೇ ಗ್ರ್ಯಾಮಿ ಪ್ರಶಸ್ತಿ ಪಡೆದಿದೆ. ಪ್ರಶಸ್ತಿ ಸ್ವೀಕರಿಸಲು ಜಾನ್ ಡನ್ ಮತ್ತು ಟೇಲರ್ ಜೋಸೆಫ್ ಪ್ಯಾಂಟ್ ಇಲ್ಲದೆ ನಿಂತಿರುವುದನ್ನು ಚಿತ್ರದಲ್ಲಿ ನೋಡಬಹುದು.

ಅತ್ಯುತ್ತಮ ಹೊಸ ಕಲಾವಿದ

ಚಾನ್ಸ್ ದಿ ರ್ಯಾಪರ್ ಅವರಿಗೆ ಅತ್ಯುತ್ತಮ ಹೊಸ ಕಲಾವಿದನಾಗಿ 59 ನೇ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ಮ್ಯೂಸಿಕ್ ವಿಡಿಯೋ

ಅತ್ಯುತ್ತಮ ಮ್ಯೂಸಿಕ್ ವಿಡಿಯೋ ವಿಭಾಗದಲ್ಲಿ ಬಿಯಾನ್ಸ್ ತಮ್ಮ 'ಫಾರ್ಮೇಶನ್' ಮ್ಯೂಸಿಕ್ ವಿಡಿಯೋಗೆ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದಾರೆ.

English summary
India based Ricky Kej's collaborated album "Winds Of Samsara" won the Best New Age Album trophy at the 59th Annual Grammy Awards here. Ricky teamed up with South African musician Wouter Kellerman for the album, which symbolises peace and harmony.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada