For Quick Alerts
  ALLOW NOTIFICATIONS  
  For Daily Alerts

  ಹಿಜಬ್ ವಿರೋಧಿಸಿ ಅರೆಬೆತ್ತಲಾಗಿ ವಿಡಿಯೋ ಪೋಸ್ಟ್ ಮಾಡಿದ ಇರಾನಿ ನಟಿ ಎಲ್ನಾಜ್ ನೊರೌಜಿ!

  |

  ಇರಾನಿನಲ್ಲಿ ಹಿಜಬ್ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಸದ್ಯ ಈ ಪ್ರತಿಭಟನೆ ತಾರಕಕ್ಕೇರಿದ್ದು, ಇರಾನಿನ ನಟಿ ಎಲ್ನಾಜ್ ನೊರೌಜಿ ಹಿಜಬ್ ವಿರುದ್ಧದ ಬೆಂಬಲಕ್ಕೆ ನಿಂತಿದ್ದಾರೆ. ಈ ಸಂಬಂಧ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಒಂದೊಂದೇ ವಸ್ತ್ರವನ್ನು ತೆಗೆದು ಹಾಕಿದ್ದಾರೆ.

  ಎಲ್ನಾಜ್ ನೊರೌಜಿ ಧರಿಸಿದ ಒಂದೊಂದೇ ವಸ್ತ್ರವನ್ನು ತೆಗೆದು ಹಾಕಿ, ಅರೆಬೆತ್ತಲಾಗಿದ್ದಾರೆ. ಈ ಮೂಲಕ ಮಹಿಳೆಯರಿಗೆ ಯಾವ ರೀತಿಯ ಬಟ್ಟೆಯನ್ನು ಧರಿಸಬೇಕು ಅನ್ನುವುದನ್ನು ನಿರ್ಧರಿಸುವ ಪವರ್ ಬೇಕು ಎಂದು ಹೇಳಿದ್ದಾರೆ. ಈ ಸದ್ಯ ಈ ವಿಡಿಯೋ ಬಗ್ಗೆ ವಿಶ್ವದೆಲ್ಲೆಡೆ ಚರ್ಚೆಯಾಗುತ್ತಿದೆ.

  ಹಿಜಬ್ ವಿರೋಧಿಸಿ ಇರಾನಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ಉಗ್ರ ಸ್ವರೂಪವನ್ನು ಪಡೆದು ಕೊಳ್ಳುತ್ತಿದೆ. ಕೆಲವು ದಿನಗಳ ಹಿಂದೆ ಹಿಜಬ್ ವಿರೋಧಿಸಿದ್ದ 22 ವರ್ಷದ ಮಹ್ಸಾ ಅಮಿನಿ ಸಾವನ್ನಪ್ಪಿದ್ದರು. ಇರಾನ್‌ನಲ್ಲಿರೋ ಬಲವಂತದ ಹಿಜಬ್ ಕಾನೂನನ್ನು ಮಹಿಳೆಯರು ವಿರೋಧಿಸಿ ಹಿಜಬ್ ತೆಗೆಯುವಂತೆ ಪ್ರೇರೇಪಿಸಿದ್ದರು.

  'ಮಹಿಳೆಯರನ್ನು ತುಳಿಯಲಾಗುತ್ತಿದೆ'

  'ಮಹಿಳೆಯರನ್ನು ತುಳಿಯಲಾಗುತ್ತಿದೆ'

  " ಇರಾನಿನಲ್ಲಿ ಸದ್ಯ ಪರಿಸ್ಥಿತಿ ತುಂಬಾನೇ ಗಂಭೀರವಾಗಿದೆ. ಇರಾನಿನಲ್ಲಿ ಮಹಿಳೆಯನ್ನು ನಡೆಸಿಕೊಳ್ಳುತ್ತಿರುವ ರೀತಿ ಹಾಗೂ ಆಡಳಿತದ ವಿರುದ್ಧ ಜನರು ಪ್ರತಿಭಟನೆ ನಡೆಸಲಾಗುತ್ತಿದೆ. ಕಳೆದ 40 ವರ್ಷಗಳಿಂದ ಮಹಿಳೆಯರು ತುಳಿತಕ್ಕೆ ಒಳಗಾಗಿದ್ದಾರೆ. ನಾನು ಟೆಹ್ರೆನ್ ಹುಟ್ಟಿದ್ದರಿಂದ ನಾನು ಇದೆಲ್ಲವನ್ನೂ ನೋಡಿದ್ದೇನೆ. ನಾನು ಕೂಡ ಹಿಜಬ್ ಧರಿಸಲೇಬೇಕಿತ್ತು." ಎಂದು ಎಲ್ನಾಜ್ ನೊರೌಜಿ ಇಂಡಿಯಾ ಟುಡೇಗೆ ಪ್ರತಿಕ್ರಿಯೆ ನೀಡಿದ್ದಾರೆ.

  'ಮಹಿಳೆಯರನ್ನು ಹಿಂಸಿಸುತ್ತಾರೆ'

  "ಹಲವು ವರ್ಷಗಳ ಹಿಂದೆ ಟೆಹ್ರೆನ್‌ನಲ್ಲಿ ಪೊಲೀಸರು ತಡೆದಿದ್ದರು. ನನ್ನನ್ನು ಮತ್ತೆ ಶಿಕ್ಷಣ ಕೊಡಿಸಲೆಂದು ಕರೆದುಕೊಂಡು ಹೋಗಿದ್ದರು. ಅಲ್ಲಿ ಮಹಿಳೆಯರಿಗೆ ಹೊಡೆಯುತ್ತಾರೆ. ಮಹ್ಸಾರನ್ನೂ ಕೂಡ ಇಲ್ಲಿಗೇ ಕರೆದುಕೊಂಡು ಹೋಗಿದ್ದರು." ಎಂದು ಎಲ್ನಾಜ್ ನೊರೌಜಿ ವಿಡಿಯೋದಲ್ಲಿ ಹೇಳಿದ್ದಾರೆ. ಈ ಕಾರಣಕ್ಕೆ ಎಲ್ನಾಜ್ ನೊರೌಜಿ ಹಂಚಿಕೊಂಡ ವಿಡಿಯೋದಲ್ಲಿ ನಟಿ ಮೊದಲು ಧರಿಸಿದ್ದ ಬುರ್ಕಾ ತೆಗೆದು ಹಾಕಿ, ನಂತರ ಹಂತ ಹಂತವಾಗಿ ಬಟ್ಟೆಯನ್ನು ತೆಗೆದು ಅರೆಬೆತ್ತಲಾಗಿದ್ದಾರೆ. ವಿಡಿಯೋದುದ್ದಕ್ಕೂ ಇದು "ನಿಮ್ಮ ಆಯ್ಕೆ ಆಗಿದ್ದರೆ, ಪರವಾಗಿಲ್ಲ." ಅನ್ನೋ ಸಂದೇಶವನ್ನು ನೀಡಿದ್ದಾರೆ.

  'ಈ ಸ್ಥಿತಿ ನೋಡಲು ದು:ಖವಾಗುತ್ತೆ'

  'ಈ ಸ್ಥಿತಿ ನೋಡಲು ದು:ಖವಾಗುತ್ತೆ'

  "ವಿಶ್ವದ ಯಾವುದೇ ಮೂಲೆಯಲ್ಲಿರುವ ಪ್ರತಿಯೊಬ್ಬ ಮಹಿಳೆಗೂ ಯಾವಾಗ? ಎಲ್ಲಿ? ಯಾವ ರೀತಿಯ ಬಟ್ಟೆ ತೊಡಬೇಕು ಎನ್ನುವ ಹಕ್ಕು ಇದೆ. ಇದು ಬದುಕಲು ಭಯ ಆಗುವ ಪ್ರದೇಶ. ನನಗೆ ಹಾಗೆಲ್ಲ ಬದುಕಲು ಸಾಧ್ಯವಿಲ್ಲ. ಎಂದೆಂದೂ ಹೊರಬರಲಾರಗದಂತಹ ಮನೆಯೊಳಗೆ ಬದುಕಲು ನನ್ನಿಂದ ಸಾಧ್ಯವಿಲ್ಲ. ನಮ್ಮ ಮಹಿಳೆಯರು, ನಮ್ಮ ಜನ ಹೀಗೆ ಬದುಕಲು ನಮಗೆ ಇಷ್ಟವಿಲ್ಲ. ಇಂತಹ ಸ್ಥಿತಿಯನ್ನು ನೋಡಿದಾಗ ದು:ಖ ಆಗುತ್ತೆ" ಎಂದು ಇರಾನಿ ನಟಿ ಎಲ್ನಾಜ್ ನೊರೌಜಿ ಹೇಳಿದ್ದಾರೆ.

  'ಪ್ರಿಯಾಂಕಾ ಚೋಪ್ರಾ ಬೆಂಬಲ'

  'ಪ್ರಿಯಾಂಕಾ ಚೋಪ್ರಾ ಬೆಂಬಲ'

  ವಿಶ್ವಸಂಸ್ಥೆಯ ಗ್ಲೋಬಲ್ ಗುಡ್‌ವಿಲ್ ರಾಯಭಾರಿ ಆಗಿರುವ ಪ್ರಿಯಾಂಕಾ ಚೋಪ್ರಾ ಹಿಜಬ್ ವಿರೋಧಿ ಪ್ರತಿಭಟನೆಯನ್ನು ಬೆಂಬಲಿಸಿದ್ದರು. ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿ, "ಯಗ ಯುಗಗಳಿಂದಲೂ ಬಲವಂತವಾಗಿ ಧಮನಿಸಲಾಗಿದ್ದ ನಿಮ್ಮ ಧ್ವನಿಯು ಈಗ ಜ್ವಾಲಾಮುಖಿಯಂತೆ ಸಿಡಿಯುತ್ತಿದೆ. ನಿಮ್ಮ ಧೈರ್ಯ ಮತ್ತು ಹೋರಾಟ ಕಂಡು ನಾನು ವಿಸ್ಮಯಗೊಂಡಿದ್ದೇನೆ. ನಿಮ್ಮ ಜೀವವನ್ನು ಪಣಕ್ಕಿಟ್ಟು, ಪ್ರಭುತ್ವಕ್ಕೆ ಸವಾಲು ಎಸೆಯುವುದು ಹಾಗೂ ನಿಮ್ಮ ಹಕ್ಕುಗಳಿಗಾಗಿ ಹೋರಾಡುವುದು ಅಷ್ಟು ಸುಲಭದ ಮಾತಲ್ಲ. ಆದರೆ, ನೀವು ಧೈರ್ಯಶಾಲಿ ಮಹಿಳೆಯರು, ನಿಮ್ಮ ಜೀವ ಪಣಕ್ಕಿಟ್ಟು ನೀವು ಹೋರಾಟ ಮಾಡುತ್ತಿದ್ದೀರಿ." ಎಂದಿದ್ದರು.

  English summary
  Iranian Actor Elnaaz Norouzi Seen Stripping Her Clothes In Support Of anti Hijab Protests, Know More.
  Tuesday, October 11, 2022, 21:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X