For Quick Alerts
  ALLOW NOTIFICATIONS  
  For Daily Alerts

  ಜೆನ್ನಿಫರ್ ಆನಿಸ್ಟನ್ 2016ರ 'ಅತ್ಯಂತ ಸುಂದರಿ ಮಹಿಳೆ'

  By ಸೋನು ಗೌಡ
  |

  ಪೀಪಲ್ ಮ್ಯಾಗಜೀನ್ ನೀಡುವ 'ಅತ್ಯಂತ ಸುಂದರ ಮಹಿಳೆ 2016' ಎಂಬ ಪ್ರಶಸ್ತಿ ಎರಡನೇ ಬಾರಿಗೆ ಹಾಲಿವುಡ್ ನಟಿ ಜೆನ್ನಿಫರ್ ಆನಿಸ್ಟನ್ ಅವರು ಭಾಜನರಾಗಿದ್ದು, 'ಅತ್ಯಂತ ಸುಂದರ ಮಹಿಳೆ 2016' ಎಂಬ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

  ಸುಮಾರು 47 ವರ್ಷ ವಯಸ್ಸಿನ ನಟಿ ಜೆನ್ನಿಫರ್ ಆನಿಸ್ಟನ್ ಅವರು ಪೀಪಲ್ ಮ್ಯಾಗಜೀನ್ ನ 2016ರ 'ಅತ್ಯಂತ ಸುಂದರ ಮಹಿಳೆ' ಎಂಬ ಪ್ರಶಸ್ತಿ ಗಿಟ್ಟಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

  ಜೆನ್ನಿಫರ್ ಹೇಳುವ ಪ್ರಕಾರ ಅವರು 'ವರ್ಕೌಟ್ ಗಳನ್ನು ಮಾಡಲು ಶುರು ಹಚ್ಚಿಕೊಂಡ ನಂತರ ಇನ್ನೂ ಹೆಚ್ಚು ಸುಂದರಿಯಾದ ಅನುಭವ ನನಗೆ ಆಯಿತು' ಎನ್ನುತ್ತಾರೆ.

  ಅಂದಹಾಗೆ ಇವರು ಇದು ಎರಡನೇ ಬಾರಿಗೆ ಪ್ರಶಸ್ತಿ ಸ್ವೀಕರಿಸುತ್ತಿದ್ದು, 2004 ರಲ್ಲಿ ಕೂಡ ಇದೇ ಪ್ರಶಸ್ತಿಯನ್ನು ಜೆನ್ನಿಫರ್ ಆನಿಸ್ಟನ್ ಅವರು ತಮ್ಮ ಮುಡಿಗೇರಿಸಿಕೊಂಡಿದ್ದರು.

  ಈ ಹಿಂದೆ ಕ್ರಿಸ್ಟಿನಾ ಮಿಲಿನ್, ರೀಸ್ ವಿಥರ್ ಸ್ಪೊನ್, ಸೋಪಿಯಾ ವರ್ಗರಾ, ಕೆಕೆ ಪಾಮರ್ ಸೆಲೆನಾ ಗೊಮೇಜ್ ಮುಂತಾದ ಮಾಡೆಲ್ ಕಮ್ ನಟಿಯರು ಈ ಪ್ರಶಸ್ತಿಗೆ ಭಾಜನರಾಗಿದ್ದರು.

  ಸದ್ಯಕ್ಕೆ ನಟಿ ಜೆನ್ನಿಫರ್ ಆನಿಸ್ಟನ್ ಅವರು 'ಮದರ್ ಡೇ' ಚಿತ್ರದಲ್ಲಿ ಕೇಟ್ ಹಡ್ಸನ್ ಜೊತೆಯಲ್ಲಿ ನಟಿಸುತ್ತಿದ್ದಾರೆ.

  English summary
  People Magazine has named Actress Jennifer Aniston its “World’s Most Beautiful Woman” of 2016. The 47 year old actress graces the cover of People’s 27th annual “World’s Most Beautiful” double issue.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X