For Quick Alerts
  ALLOW NOTIFICATIONS  
  For Daily Alerts

  ಬ್ಯಾಟ್‌ಮ್ಯಾನ್‌ಗೆ ಪತ್ನಿಯಾದ ಜೆನ್ನಿಫರ್ ಲೊಪೇಜ್: ನಾಲ್ಕನೇ ಮದುವೆ

  |

  ಖ್ಯಾತ ಹಾಲಿವುಡ್ ಗಾಯಕಿ, ನಟಿ ಜೆನ್ನಿಫರ್ ಲೊಪೇಜ್ ನಾಲ್ಕನೇ ಬಾರಿ ವಿವಾಹವಾಗಿದ್ದಾರೆ. ಹಾಲಿವುಡ್‌ನ ಖ್ಯಾತ ನಟ ಬೆನ್ ಅಫ್ಲೆಕ್‌ ಜೊತೆ ಕೆಲ ವರ್ಷಗಳಿಂದಲೂ ಸುತ್ತಾಡುತ್ತಿದ್ದರು. ಕೊನೆಗೂ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗಿದೆ.

  ಇದೇ ಶನಿವಾರ ಮತ್ತು ಭಾನುವಾರ ಇವರಿಬ್ಬರು ಆಪ್ತೇಷ್ಟರು ಗೆಳೆಯರ ಸಮ್ಮುಖದಲ್ಲಿ ಲಾಸ್ ವೆಗಾಸ್‌ನಲ್ಲಿ ವಿವಾಹವಾಗಿದ್ದಾರೆ. ಜೆನ್ನಿಫರ್ ಲೊಪೇಜ್‌ಗೆ ಇದು ನಾಲ್ಕನೇ ಮದುವೆಯಾದರೆ, ಬೆನ್ ಅಫ್ಲಿಕ್‌ಗೆ ಇದು ಎರಡನೇ ಮದುವೆ. ಈ ಮೊದಲು 2003 ರಲ್ಲಿಯೇ ಈ ಜೋಡಿ ವಿವಾಹವಾಗಲು ಬಯಸಿ ಘೋಷಣೆ ಸಹ ಮಾಡಿದ್ದರು. ಆದರೆ ಕೆಲವು ಕಾರಣಗಳಿಂದ ಇವರ ಸಂಬಂಧ ಮುರಿದು ಬಿತ್ತು. ಇದೀಗ 19 ವರ್ಷಗಳ ಬಳಿಕ ವಿವಾಹವಾಗುತ್ತಿದೆ ಈ ಜೋಡಿ.

  ಕಂಗನಾ ಸಿನಿಮಾ ನಿರ್ಮಿಸಿ ಲಾಸ್, ಕಚೇರಿ ಮಾರಿದ ನಿರ್ಮಾಪಕ!ಕಂಗನಾ ಸಿನಿಮಾ ನಿರ್ಮಿಸಿ ಲಾಸ್, ಕಚೇರಿ ಮಾರಿದ ನಿರ್ಮಾಪಕ!

  ಜೆನ್ನಿಫರ್ ಲೊಪೇಜ್ ಹಾಗೂ ಬೆನ್ ಅಫ್ಲಿಕ್‌ ಮೊದಲಿಗೆ 2002 ರಲ್ಲಿ ಸಿನಿಮಾ ಒಂದರ ಶೂಟಿಂಗ್‌ನಲ್ಲಿ ಭೇಟಿಯಾಗಿದ್ದರು. ಅಲ್ಲಿಂದ ಇವರ ಪ್ರೇಮ ಪ್ರಸಂಗ ಶುರುವಾಗಿತ್ತು. ಈ ಜೋಡಿ ಮಾಧ್ಯಮಗಳ ಮೆಚ್ಚಿನ ಜೋಡಿಯಾಗಿತ್ತು. ಜೋಡಿಗೆ ಮಾಧ್ಯಮಗಳು 'ಬೆನ್ನಿಫರ್' ಎಂಬ ಹೆಸರು ಸಹ ನೀಡಿದ್ದರು. ಆದರೆ 2004 ರಲ್ಲಿ ಈ ಜೋಡಿ ಬೇರೆಯಾಗಿತ್ತು.

  ಜೆನಿಫರ್ ಲೊಪೇಜ್ 1997 ರಲ್ಲಿ ಒಜೈ ನೋನಾ ಹೆಸರಿನ ಕ್ಯೂಬಾದ ವೈಟರ್ ಒಬ್ಬರನ್ನು ವಿವಾಹವಾಗಿದ್ದರು. ಬಳಿಕ ಕ್ರಿಸ್ ಜಡ್ ಎಂಬುವರನ್ನು 2001 ರಲ್ಲಿ ವಿವಾಹವಾಗಿ 2002 ರಲ್ಲಿ ವಿಚ್ಛೇಧನ ನೀಡಿದರು. ಬಳಿಕ ಕೆಲ ಕಾಲ ಬೆನ್ ಅಫ್ಲಿಕ್‌ ಜೊತೆ ಡೇಟಿಂಗ್‌ ಮಾಡಿದರು. ಬಳಿಕ ಅವರಿಂದ 2004 ರಲ್ಲಿ ದೂರಾಗಿ ಅದೇ ವರ್ಷ ಮಾರ್ಕ್ ಆಂಥನಿ ಹೆಸರಿನ ಸಂಗೀತಗಾರನನ್ನು ವಿವಾಹವಾದರು. ಇವರಿಬ್ಬರು ಎಂಟು ವರ್ಷ ಜೊತೆಗಿದ್ದರು. ಇವರಿಗೆ ಅವಳಿ ಮಕ್ಕಳು ಸಹ ಇದ್ದಾರೆ. 2014 ರಲ್ಲಿ ಇವರಿಬ್ಬರು ದೂರಾದರು. ಬಳಿಕ 2019 ರಲ್ಲಿ ಜೆನ್ನಿಫರ್ ಬಾಸ್ಕೆಟ್‌ಬಾಲ್ ಆಟಗಾರ ಅಲೆಕ್ಸ್ ರೋಡ್ರಿಗೋಜ್ ಅನ್ನು ವಿವಾಹವಾಗುವುದಾಗಿ ಘೋಷಿಸಿದರು ಆದರೆ ಕೋವಿಡ್ ಕಾರಣದಿಂದ ಮದುವೆ ನಡೆಯಲಿಲ್ಲ. ಬಳಿಕ ಅವರಿಂದಲೂ ದೂರಾಗಿ ಬೆನ್ ಅಫ್ಲೆಕ್ಸ್‌ ಜೊತೆ ಸುತ್ತಾಡಲು ಆರಂಭಿಸಿದರು. ಇದೀಗ ಅವರನ್ನೇ ವಿವಾಹವೂ ಆಗಿದ್ದಾರೆ.

  ಇನ್ನು ಬೆನ್ ಅಪ್ಲೆಕ್ಸ್, ನಟಿ ಜೆನ್ನಿಫರ್ ಅನ್ನು ವಿವಾಹವಾಗಿದ್ದರು. ಅವರಿಗೆ ಮೂರು ಮಂದಿ ಮಕ್ಕಳಿದ್ದಾರೆ. ಬೆನ್‌ಗೆ ಇದು ಎರಡನೇ ಮದುವೆ. ಜೆನ್ನಿಫರ್‌ ವಯಸ್ಸು 52 ಹಾಗೂ ಬೆನ್ ಅಫ್ಲಿಕ್ ವಯಸ್ಸು 49.

  ಇನ್ನು ಬೆನ್ ಅಫ್ಲೆಕ್ಸ್‌ ಹಾಲಿವುಡ್‌ನ ಜನಪ್ರಿಯ ನಟರಾಗಿದ್ದು, 'ಗುಡ್‌ ವಿಲ್ ಹಂಟಿಂಗ್', 'ಆರ್ಮಗೆಡಾನ್', 'ಪರ್ಲ್‌ ಹಾರ್ಬರ್', 'ಆರ್ಗೊ', 'ಬ್ಯಾಟ್‌ಮ್ಯಾನ್‌ v/s ಸೂಪರ್‌ ಮ್ಯಾನ್', 'ಸೂಸೈಡ್ ಸ್ಕ್ವಾಡ್', 'ದಿ ಅಕೌಂಟ್', 'ಸೂಸೈಡ್ ಸ್ಕ್ವಾಡ್' ಇನ್ನೂ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬ್ಯಾಟ್‌ಮ್ಯಾನ್ v/s ಸೂಪರ್ ಮ್ಯಾನ್ ಹಾಗೂ ಜಸ್ಟಿಸ್ ಲೀಗ್ ಸಿನಿಮಾಗಳಲ್ಲಿ ಇವರು ಬ್ಯಾಟ್‌ಮ್ಯಾನ್ ಪಾತ್ರದಲ್ಲಿ ನಟಿಸಿದ್ದಾರೆ.

  Recommended Video

  Salman Khan and Kiccha Sudeep dance | 'ರಾ ರಾ ರಕ್ಕಮ್ಮ' ಹಾಡಿಗೆ ಸಲ್ಮಾನ್ ಖಾನ್ ಡ್ಯಾನ್ಸ್ *Press Meet
  English summary
  Actress, Singer Jennifer Lopez and Ben Affleck get married in Las Vegas. This is Jennifer's fourth marriage and Ben's second marriage.
  Tuesday, July 19, 2022, 10:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X