ರಜನಿ 'ಕಾಲ'ಗೆ ಹಾಲಿವುಡ್ ಸಿನಿಮಾ ಚಾಲೆಂಜ್.!
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲ' ಸಿನಿಮಾ ಜೂನ್ 7 ತಂದು ತೆರೆಕಾಣುತ್ತಿದೆ. ಕಾವೇರಿ ವಿಚಾರವಾಗಿ ಹೇಳಿಕೆ ನೀಡಿದ್ದ ರಜನಿಕಾಂತ್ ಸಿನಿಮಾಗಳನ್ನ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಕಳೆದ ಕೆಲ ತಿಂಗಳ ಹಿಂದೆಯೂ ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ರಜನಿ 'ಕಾಲ'ಗೆ ಎಷ್ಟರ ಮಟ್ಟಿಗೆ ಯಶಸ್ಸು ಸಿಗುತ್ತೆ ಎಂಬುದು ಕುತೂಹಲ ಮೂಡಿಸಿದೆ.
ಆದ್ರೆ, ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಮಾತ್ರ ರಜನಿಕಾಂತ್ 'ಕಾಲ'ಗೆ ಬಿಗ್ ಒಪನಿಂಗ್ ನಿರೀಕ್ಷೆ ಮಾಡಲಾಗುತ್ತಿದೆ. ಮತ್ತೊಂದೆಡೆ ಸೂಪರ್ ಸ್ಟಾರ್ ಸಿನಿಮಾಗೆ ಹಾಲಿವುಡ್ ಚಿತ್ರವೊಂದು ಸವಾಲ್ ಹಾಕಿ ಬರ್ತಿದೆ.
ಹೌದು, ಹಾಲಿವುಡ್ ನ ಬಹುನಿರೀಕ್ಷೆಯ 'ಜುರಾಸಿಕ್ ಪಾರ್ಕ್' ಸೀರಿಸ್ ನ ಐದನೇ ಭಾಗ ಜುರಾಸಿಕ್ ವರ್ಲ್ಡ್: ದಿ ಫಾಲೆನ್ ಕಿಂಗ್ ಡಮ್' ಸಿನಿಮಾ ಜೂನ್ 7 ರಂದು ತೆರೆಗೆ ಬರಲು ಸಜ್ಜಾಗಿದೆ. ಇಂಗ್ಲೀಷ್-ಹಿಂದಿ-ತಮಿಳು-ತೆಲುಗು ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರ್ತಿದ್ದು, ಸೌತ್ ಸಿನಿ ದುನಿಯಾದಲ್ಲೂ ಕಮಾಲ್ ಮಾಡಲಿದೆ.

ಮುಂಬೈನ ಅಂಡರ್ ವರ್ಲ್ಡ್ ನಲ್ಲಿ ತಮಿಳರ ಪರವಾಗಿ ಹೋರಾಡುವ ಗ್ಯಾಂಗ್ ಸ್ಟರ್ ಆಗಿ ತಲೈವಾ ಬಣ್ಣ ಹಚ್ಚಿದ್ದಾರೆ, 'ಕಬಾಲಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಪಾ ರಂಜಿತ್ ಈ ಚಿತ್ರಕ್ಕೂ ಡೈರೆಕ್ಟರ್ ಆಗಿದ್ದು, ನಟ ಧನುಶ್ ಬಂಡವಾಳ ಹಾಕಿದ್ದಾರೆ.

ಇನ್ನು 'ಜುರಾಸಿಕ್ ವರ್ಲ್ಡ್: ದಿ ಫಾಲೆನ್ ಕಿಂಗ್ ಡಮ್' ಚಿತ್ರವನನ್ ಜೆ ಎ ಬಯೋನಾ ನಿರ್ದೇಶನ ಮಾಡಿದ್ದು, ಯೂನಿವರ್ಸಲ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಕ್ರಿಸ್ ಪ್ರಾಟ್, ಬ್ರೈಸ್ ಡಲ್ಲಾಸ್ ಹೋವರ್ಡ್ ಸೇರಿದಂತೆ ಹಲವು ಹಾಲಿವುಡ್ ತಾರೆಗಳು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











