For Quick Alerts
  ALLOW NOTIFICATIONS  
  For Daily Alerts

  ಅವತಾರ್ 2 ಚಿತ್ರೀಕರಣ: ನೀರಿನ ಆಳದಲ್ಲಿ ಅದ್ಭುತ ಲೋಕ

  |

  ವಿಶ್ವದಲ್ಲೇ ಅತಿ ಹೆಚ್ಚು ಹಣ ಗಳಿಕೆ ಮಾಡಿದ ಸಿನಿಮಾಗಳ ಸಾಲಿನಲ್ಲಿ ನಿಲ್ಲುವ ಅವತಾರ್ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ.

  ಅವತಾರ್ ನ ಮೊದಲ ಭಾಗಕ್ಕಿಂತಲೂ ಅದ್ಭುತವಾಗಿ, ಕಣ್-ಮನ ರೋಮಾಂಚಿತಗೊಳಿಸುವಂತಿರಲಿದೆ ಅವತಾರ್ 2. ಲಾಕ್‌ಡೌನ್ ನಿಂದ ಕೆಲ ಕಾಲ ಸ್ಥಬ್ಧವಾಗಿದ್ದ ಅವತಾರ್ ಚಿತ್ರೀಕರಣ ಮತ್ತೆ ಪ್ರಾರಂಭವಾಗಿದ್ದು, ನೀರಿನ ಆಳದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಅವತಾರ್ ಮೊದಲ ಭಾಗದಲ್ಲಿ ಪ್ಯಾಂಡೋರಾ ಎಂಬ ಅದ್ಭುತ ಲೋಕ ತೋರಿಸಿದ್ದ ನಿರ್ದೇಶಕ ಜೇಮ್ಸ್ ಕ್ಯಾಮರೂನ್, ಈ ಬಾರಿ ನೀರಿನ ಆಳದಲ್ಲಿ ಅದ್ಭುತ ಲೋಕ ಸೃಷ್ಟಿಮಾಡುತ್ತಿದ್ದಾರೆ.

  ಅವತಾರ್ 2, ಅವತಾರ್ 3 ಚಿತ್ರೀಕರಣ ಬಹುತೇಕ ಪೂರ್ಣ: ಬಿಡುಗಡೆ ದಿನಾಂಕ ಪ್ರಕಟಅವತಾರ್ 2, ಅವತಾರ್ 3 ಚಿತ್ರೀಕರಣ ಬಹುತೇಕ ಪೂರ್ಣ: ಬಿಡುಗಡೆ ದಿನಾಂಕ ಪ್ರಕಟ

  ನಿರ್ದೇಶಕ ಜೇಮ್ಸ್ ಕ್ಯಾಮರೂನ್, ಅವತಾರ್ ಸಿನಿಮಾಕ್ಕಾಗಿ ನೀರಿನ ಆಳದಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ. ಟೈಟಾನಿಕ್ ನಾಯಕಿ ಕೇಟ್ ವಿನ್‌ಸ್ಲೆಟ್ ನೀರಿನ ಆಳದಲ್ಲಿ ಅಭಿನಯದಲ್ಲಿ ತೊಡಗಿರುವ ಚಿತ್ರವೊಂದನ್ನು ಅವತಾರ್ 2 ಚಿತ್ರತಂಡ ಬಿಡುಗಡೆ ಮಾಡಿದೆ.

  ನ್ಯೂಜಿಲೆಂಡ್‌ನಲ್ಲಿ ಚಿತ್ರೀಕರಣ

  ನ್ಯೂಜಿಲೆಂಡ್‌ನಲ್ಲಿ ಚಿತ್ರೀಕರಣ

  ಅವತಾರ್ 2 ಮತ್ತು ಅವತಾರ್ 3 ಚಿತ್ರೀಕರಣ ಪ್ರಸ್ತುತ ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿದ್ದು, ಅವತಾರ್ 2 ನ ಚಿತ್ರೀಕರಣ ಬಹುತೇಕ ಮುಗಿದಿದೆ. ಇದೀಗ ಚಿತ್ರತಂಡವು ಬಿಡುಗಡೆ ಮಾಡಿರುವ ಚಿತ್ರದಲ್ಲಿ ನಟಿ ಕೇಟ್ ವಿನ್‌ಸ್ಲೆಟ್ ನೀರಿನ ಆಳದಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

  ಏಳು ನಿಮಿಷ ಉಸಿರು ಬಿಗಿ ಹಿಡಿಯುತ್ತಾರಂತೆ ಕೇಟ್

  ಏಳು ನಿಮಿಷ ಉಸಿರು ಬಿಗಿ ಹಿಡಿಯುತ್ತಾರಂತೆ ಕೇಟ್

  ಅವತಾರ್ 2 ಸಿನಿಮಾದಲ್ಲಿ ನೀರಿನ ದೇವತೆಯ ಪಾತ್ರದಲ್ಲಿ ಕೇಟ್ ವಿನ್‌ಸ್ಲೆಟ್ ನಟಿಸುತ್ತಿದ್ದಾರೆ. ಅವರ ಪಾತ್ರದ ಬಹುತೇಕ ಚಿತ್ರೀಕರಣ ನೀರಿನ ಆಳದಲ್ಲಿಯೇ ನಡೆಯುತ್ತಿದೆ. ನೀರಿನ ಆಳದಲ್ಲಿ ಉಸಿರು ಬಿಗಿಹಿಡಿದುಕೊಂಡು ಚಿತ್ರೀಕರಣ ನಡೆಸುತ್ತಿದ್ದಾರಂತೆ. ಚಿತ್ರತಂಡದ ಪ್ರಕಾರ, ಏಳು ನಿಮಿಷಗಳ ಕಾಲ ಕೇಟ್ ವಿನ್ಸ್‌ಲೆಟ್ ಉಸಿರು ಬಿಗಿಹಿಡಿಯುತ್ತಾರಂತೆ.

  ಅವತಾರ್ 2, ಅವತಾರ್ 3 ಬಿಡುಗಡೆ ದಿನಾಂಕ ಪ್ರಕಟ

  ಅವತಾರ್ 2, ಅವತಾರ್ 3 ಬಿಡುಗಡೆ ದಿನಾಂಕ ಪ್ರಕಟ

  ಅವತಾರ್ 2 ಮತ್ತು ಅವತಾರ್ 3 ಚಿತ್ರೀಕರಣ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಆದರೂ ಅವತಾರ್ 2 ಸಿನಿಮಾ 2022 ರ ಡಿಸೆಂಬರ್ 16 ಕ್ಕೆ, ಅವತಾರ್ 3 ಸಿನಿಮಾ 2024 ರ ಡಿಸೆಂಬರ್ 20 ಕ್ಕೆ ಬಿಡುಗಡೆ ಆಗಲಿದೆಯಂತೆ.

  SUPERSTAR SURYA Kannada Short Film Teaser | Rakshit | Praveen | Nikhil | Filmibeat Kannada
  ಅವತಾರ್ ಐದೂ ಸರಣಿಯ ಬಿಡುಗಡೆ ದಿನಾಂಕ ಪ್ರಕಟ

  ಅವತಾರ್ ಐದೂ ಸರಣಿಯ ಬಿಡುಗಡೆ ದಿನಾಂಕ ಪ್ರಕಟ

  ಅವತಾರ್ ಸರಣಿಯ ಒಟ್ಟು ಐದು ಸಿನಿಮಾಗಳು ತಯಾರಾಗಲಿವೆ. ಈಗ ಅವತಾರ್ 2 ಮತ್ತು ಅವತಾರ್ 3 ತಯಾರಾಗುತ್ತಿದೆ. ನಂತರ ಅವತಾರ್ 4 ಮತ್ತು ಅವತಾರ್ 5 ಚಿತ್ರೀಕರಣ ಪ್ರಾರಂಭವಾಗಲಿದೆ. ಅವತಾರ್ 4 ಡಿಸೆಂಬರ್ 18, 2026 ಕ್ಕೆ ಬಿಡುಗಡೆ ಆಗಲಿದೆ. ಅವತಾರ್ 5 ಡಿಸೆಂಬರ್ 22, 2028 ಕ್ಕೆ ಬಿಡುಗಡೆ ಆಗಲಿದೆ.

  English summary
  Avatar 2 and 3 movie shooting going on Newzeland. Kate Winslet shooting under water for the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X