»   » ಗರ್ಭಿಣಿಯಾಗಲು ನನ್ನ ದೇಹ ಇನ್ನೂ ಪಕ್ವವಾಗಿಲ್ಲ

ಗರ್ಭಿಣಿಯಾಗಲು ನನ್ನ ದೇಹ ಇನ್ನೂ ಪಕ್ವವಾಗಿಲ್ಲ

Posted By:
Subscribe to Filmibeat Kannada
Actrss Keira Knightley
ತಾರೆಯೊಬ್ಬಳು ಗರ್ಭಿಣಿಯಾದರೆ ಆಕೆಯ ಕೆರಿಯರ್ ಗೆ ಪೂರ್ಣವಿರಾಮ ಬಿದ್ದಂತೆಯೇ. ಅದರಲ್ಲೂ ಬಹು ಬೇಡಿಕೆಯ ತಾರೆಯೊಬ್ಬಳು ಮದುವೆಯಾಗಿದ್ದರಂತೂ ಆಕೆಯ ಹೊಟ್ಟೆಯ ಮೇಲೆ ಚಿತ್ರೋದ್ಯಮ ಯಾವಾಗಲೂ ಒಂದು ಕಣ್ಣು ಇಟ್ಟೇ ಇರುತ್ತದೆ. ಇದೇ ರೀತಿಯ ಒಂದು ಪ್ರಶ್ನೆ ಹಾಲಿವುಡ್ ತಾರೆ ಕೈರಾ ನೈಟ್ಲಿಗೂ ಎದುರಾಗಿದೆ.

ಆಕೆ ಹೋದ ಕಡೆಯಲ್ಲಾ ಎಲ್ಲರೂ ಕೇಳುವುದು ಒಂದೇ ಪ್ರಶ್ನೆಯಂತೆ. ಹೌದಾ ನೀವು ಗರ್ಭಿಣಿಯಂತೆ. ಎಷ್ಟು ತಿಂಗಳಾಗಿದೆ...ಹೀಗೆ ಈ ಪ್ರಶ್ನೆಗಳಿಗೆಲ್ಲಾ ಆಕೆ ಉತ್ತರ ಹೇಳಿ ಹೇಳಿ ಸಾಕಾಗಿದೆಯಂತೆ. ಕಡೆಗೆ ಆಕೆ ಮಾಧ್ಯಮಗಳ ಮುಂದೆ ಬಂದು ತಾವು ಇನ್ನೂ ಗರ್ಭಿಣಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ಕೆಲವರ್ಷಗಳಿಂದ ಈಕೆ ಜೇಮ್ಸ್ ರಿಂಗ್ಟನ್ ಜೊತೆ ಡೇಟಿಂಗ್ ಮಾಡುತ್ತಿದ್ದಳು. ಇತ್ತೀಚೆಗಷ್ಟೇ ಇವರಿಬ್ಬರಿಗೂ ನಿಶ್ಚಿತಾರ್ಥವಾಯಿತು. ಬಳಿಕ ಈ ಜೋಡಿ ಹಕ್ಕಿ ಎಲ್ಲೂ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳಲಿಲ್ಲ.

ಈ ಜೋಡಿ ಹಕ್ಕಿ ಕಾಣೆಯಾಗಿದ್ದೇ ತಡ, ಒಬ್ಬೊಬ್ಬರು ಒಂದೊಂದು ತರಹ ಮಾತನಾಡಿಕೊಳ್ಳತೊಡಗಿದರು. ಈ ಬಗ್ಗೆ ಸುಮ್ಮನಿದ್ದಷ್ಟೂ ಜನ ಏನೇನೋ ಮಾತನಾಡಿಕೊಳ್ಳುತ್ತಾರೆ ಎಂದು ಕಡೆಗೆ ಕೈರಾ ಅವರೇ ಸ್ಪಷ್ಟೀಕರಣ ನೀಡಿದ್ದಾರೆ.

"ಮಕ್ಕಳೆಂದರೆ ನನಗೆ ತುಂಬಾ ಇಷ್ಟ. ಆದರೆ ಮಕ್ಕಳನ್ನು ಹೆರಲು ಇದು ಸೂಕ್ತ ಸಮಯವಲ್ಲ. ಯಾವೊತ್ತೋ ಒಂದು ದಿನ ತಾಯಿಯಾಗಲೇ ಬೇಕು. ಸದ್ಯಕ್ಕೆ ಶೂಟಿಂಗ್ ನಲ್ಲಿ ಬಿಜಿಯಾಗಿದ್ದೇನೆ. ತಾನು ಈಗ ಗರ್ಭಿಣಿಯಾದರೆ ನನ್ನ ವೃತ್ತಿಜೀವನಕ್ಕೂ ತೊಂದರೆಯಾಗುತ್ತದೆ. ಅಷ್ಟೇ ಅಲ್ಲದೆ ಗರ್ಭಿಣಿಯಾಲು ತನ್ನ ದೇಹ ಇನ್ನೂ ಪಕ್ವವಾಗಿಲ್ಲ" ಎಂದಿದ್ದಾರೆ.

ಇದುವರೆಗೂ ತಾನು ಗರ್ಭಿಣಿಯಾಗಿದ್ದೇನೆ ಎಂಬ ಸುದ್ದಿಗಳು ಬರುತ್ತಲೇ ಇವೆ. ನನ್ನನ್ನು ನೋಡಿದರೆ ನಿಮಗೆ ಹಾಗೆ ಅನ್ನಿಸುತ್ತದೆಯೇ? ಎಂದು ಕೇಳಿದ್ದಾರೆ ಇಪ್ಪತ್ತೇಳರ ಹರೆಯದ ಕೈರಾ. ಪ್ರಸ್ತುತ ಈಕೆ ಮತ್ತು ಈಕೆಯ ಭಾವಿ ಪತಿ ಜೇಮ್ಸ್ ರಿಂಗ್ಟನ್ ಒಂದೇ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 'ಸೀಕಿಂಗ್ ಎ ಫ್ರೆಂಡ್ ಫರ್ ದ ಎಂಡ್ ಆಫ್ ದ ವರಲ್ಡ್' ಎಂಬುದು ಆ ಚಿತ್ರದ ಹೆಸರು. (ಏಜೆನ್ಸೀಸ್)

English summary
Actress Keira Knightley is amused at rumours that she is pregnant. She says although she would love to have children, it was not yet time.
Please Wait while comments are loading...