»   » ಚೊಚ್ಚಲ ಕಂದನ ನಿರೀಕ್ಷೆಯಲಿ ಕಿಮ್ ಕರ್ದಶಿಯನ್

ಚೊಚ್ಚಲ ಕಂದನ ನಿರೀಕ್ಷೆಯಲಿ ಕಿಮ್ ಕರ್ದಶಿಯನ್

By: ಉದಯರವಿ
Subscribe to Filmibeat Kannada

ಕೂಸು ಹುಟ್ಟೋಕು ಮುನ್ನವೇ ಕುಲಾವಿ ಹೊಲಿಸಿದರಂತೆ ಎಂಬ ಮಾತು ಹಾಲಿವುಡ್ ತಾರೆ ಕಿಮ್ ಕರ್ದಶಿಯನ್ ಗೆ ಅಕ್ಷರಶಃ ಒಪ್ಪುತ್ತದೆ. ಕಿಮ್ ಈಗ ಗರ್ಭಿಣಿ. ಚೊಚ್ಚಲ ಕಂದನ ನಿರೀಕ್ಷೆಯಲ್ಲಿದ್ದಾರೆ.

ತಾಯಿಯಾಗುತ್ತಿರುವ ಆಕೆಯ ಬಯಕೆಗಳು ಒಂದೆರಡಲ್ಲ. ಎಲ್ಲರಂತೆ ಕಿಮ್ ಕೂಡ ಕನಸುಗಳ ಲೋಕದಲ್ಲಿ ವಿಹರಿಸುತ್ತಿದ್ದಾರೆ. ಮಗುಗೆ ಆಗಲೇ ಅವರು ನರ್ಸರಿ, ಆಟಿಕೆಗಳು, ಉಡುಗೊರೆಗಳನ್ನು ತೆಗೆದುಕೊಂಡಿದ್ದಾರೆ.

ವೆಸ್ಟ್ ಹಾಲಿವುಡ್ ನಲ್ಲಿ ಹುಟ್ಟಲಿರುವ ಮಗುವಿಗೆ ನರ್ಸರಿ ಕಟ್ಟಿಸಿದ್ದಾರಂತೆ. ಇದಕ್ಕೆ ತನ್ನ ಸಹೋದರಿಯರಾದ ಖೋಲ್ ಹಾಗೂ ಕೋರ್ಟ್ನಿ ಅವರ ಸಹಾಯವನ್ನು ಪಡೆದಿದ್ದಾರೆ. ಮೊದಲೇ ಈಕೆ ಶ್ರೀಮಂತ ತಾರೆ. ಅತಿಹೆಚ್ಚು ಗಳಿಸುವ ರಿಯಾಲಿಟಿ ಸ್ಟಾರ್ ಎನ್ನಿಸಿಕೊಂಡಿದ್ದಾರೆ.

ಕಿಮ್ ಆಸ್ತಿ ಮೌಲ್ಯ 6 ದಶಲಕ್ಷ ಡಾಲರ್

ಆಕೆಯ ಆಸ್ತಿಯ ಮೌಲ್ಯ 6 ದಶಲಕ್ಷ ಡಾಲರ್. ಆಗಸ್ಟ್ 2011ರಲ್ಲಿ ಬ್ಯಾಸ್ಕೆಟ್ ಬಾಲ್ ಕ್ರೀಡಾಪಟು ಕ್ರಿಸ್ ಹಂಪ್ರೆಸ್ ಅವರನ್ನು ಮದುವೆಯಾದರು. ಆದರೆ ಎರಡೇ ತಿಂಗಳಿಗೆ ಈಕೆಯ ಮದುವೆ ಮುರಿದು ಬಿತ್ತು.

ಸಹಜ ನಿತಂಬಗಳ ಸುಂದರಿ ಕಿಮ್

ಹಾಲಿವುಡ್ ಅತ್ಯಂತ ಸಹಜ ನಿತಂಬಗಳ ಸುಂದರಿ ಕಿಮ್ ಕರ್ದಶಿಯನ್. ಈಗ ಈಕೆ ಬಿಕಿನಿ ಮೇಲೆ ತನ್ನ ಅಡ್ಡಹೆಸರನ್ನೂ ಮುದ್ರಿಸಿಕೊಂಡು ಸುದ್ದಿ ಮಾಡಿದ್ದರು.

ಭಾರತೀಯ ಆಹಾರ ಬಿಲ್ ಕುಲ್ ಆಗಲ್ಲ ಎಂದಿದ್ದ ಕಿಮ್

ಕಿಮ್ ಕದರ್ಶಿಯನ್ ಗೆ ಭಾರತೀಯ ಆಹಾರ ಎಂದರೆ ಬಿಲ್ ಕುಲ್ ಇಷ್ಟವಿಲ್ಲ ಎಂದು ಈ ಹಿಂದೊಮ್ಮೆ ಹೇಳಿದ್ದರು. ಈಕೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದಾಗ ಅಲ್ಲಿಂದಲೇ ಆಹಾರ ಪೊಟ್ಟಣಗಳನ್ನು ತಂದು ಪ್ರಿಜ್ ನಲ್ಲಿಟ್ಟುಕೊಂಡು ತಿನ್ನುತ್ತಿದ್ದರು.

ಮದುವೆಗೂ ಮುನ್ನವೇ ಗರ್ಭಿಣಿ

ಮೂವತ್ತೆರಡರ ಹರೆಯದ ಕಿಮ್ ಹಾಗೂ ಕೇನ್ ವೆಸ್ಟ್ ಇಬ್ಬರ ನಡುವೆ ಹತ್ತು ವರ್ಷಗಳಷ್ಟು ಪರಿಚಯವಿದೆ. ಆದರೆ ಕಳೆದ ಕೆಲ ತಿಂಗಳಿಂದಷ್ಟೇ ಡೇಟಿಂಗ್ ಮಾಡುತ್ತಿದ್ದರು. ಇದಕ್ಕೂ ಮುನ್ನ ಫುಟ್ ಬಾಲ್ ಪಟು ಕ್ರಿಸ್ ಹಂಪ್ರೆಸ್ ಅವರನ್ನು ಮದುವೆಯಾಗಿದ್ದರು. ಆದರೆ ಅದೇನಾಯಿತೋ ಏನೋ ಕೇವಲ 72 ದಿನಗಳಲ್ಲೇ ವಿವಾಹ ವಿಚ್ಛೇದನದ ಮೂಲಕ ಇಬ್ಬರೂ ಬೇರ್ಪಟ್ಟರು.

ಕೇನ್ ಜೊತೆ ಈಗ ಸಂಬಂಧ

ಕೇನ್ ಜೊತೆ ಹೊಸ ಸಂಬಂಧ ಬೆಳೆಸಿದ ಕಿಮ್, ನಮ್ಮಿಬ್ಬರ ದಾಂಪತ್ಯ ಹಾಗೂ ಪ್ರಣಯ ಜೀವನ ಸುಖಕರವಾಗಿರುತ್ತದೆ. ಇದಕ್ಕೆ ನಮ್ಮಿಬ್ಬರ ನಡುವಿನ ಸ್ನೇಹ ಸಂಬಂಧ ಇನ್ನಷ್ಟು ಸಹಕರಿಸುತ್ತದೆ. ನಮ್ಮಿಬ್ಬರ ಬಗ್ಗೆ ನಮಗೆ ಚೆನ್ನಾಗಿ ಗೊತ್ತು. ಶೀಘ್ರದಲ್ಲೇ ಇಬ್ಬರು ಮದುವೆಯಾಗುವುದಾಗಿಯೂ ತಿಳಿಸಿದ್ದಾರೆ.

English summary
Socialite Kim Kardashian, who is expecting her first child with rapper Kanye West in July, is planning to create a black and white nursery for her baby.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada