Don't Miss!
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Sports
IND W vs WI W: ಭಾರತದ ಉತ್ತಮ ಆಲ್ರೌಂಡ್ ಪ್ರದರ್ಶನ: ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತಾರೆ ಲೇಡಿ ಗಾಗಾಗೆ ಒಂದು ಕೋಟಿ ಡಾಲರ್ ದಂಡ
ಇಪ್ಪತ್ತಾರರ ಹರೆಯದ ಗಾಗಾ ಮೇಲೆ ಎಂಜಿಎ ಎಂಟರ್ ಟೈನ್ ಮೆಂಟ್ ಕಂಪನಿ ಮಾಡಿರುವ ಆರೋಪದ ಸಾರಾಂಶ ಹೀಗಿದೆ. ಬರಲಿರುವ ಕ್ರಿಸ್ಮಸ್ ಹಬ್ಬಕ್ಕೆ ಸರಿಯಾಗಿ ಈ ಗೊಂಬೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ.
ಆದ ಕಾರಣ ಗೊಂಬೆಗಳಿಗೆ ಅಳವಡಿಸಿರುವ ವಾಯ್ಸ್ ಚಿಪ್ ಗಳನ್ನು ತೆಗೆಯುವಂತೆ ಗಾಗಾ ಮ್ಯಾನೇಜ್ ಮೆಂಟ್ ಹಾಗೂ ಲೈಸೆನ್ಸ್ ಕಂಪನಿಗಳಿಗೆ ಸೂಚಿಸಲಾಗಿದೆ. ಇದಕ್ಕಾಗಿ 11 ಗಂಟೆಗಳ ಕಾಲಾವಕಾಶವನ್ನೂ ನೀಡಲಾಗಿದೆ ಎಂದು ಎಂಜಿಎ ಎಂಟರ್ ಟೈನ್ ಮೆಂಟ್ ಕಂಪನಿ ತಿಳಿಸಿದೆ.
2013ಕ್ಕೆ ಗಾಗಾರ ಹೊಸ ಆಲ್ಬಂ ಮಾರುಕಟ್ಟೆಗೆ ಬರುತ್ತಿದೆ. ಹಾಗಾಗಿ ಆಕೆ ಬೇಕೆಂದೇ ಗೊಂಬೆ ಬಿಡುಗಡೆಗೆ ತಕರಾರು ಮಾಡುತ್ತಿದ್ದಾರೆ ಎಂದು ಕಂಪನಿ ಆರೋಪಿಸಿದೆ. ಈ ಸಂಬಂಧ ಕಂಪನಿ ಮ್ಯಾನ್ ಹಟ್ಟನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ಗಾಗಾಗೆ ಒಂದು ಕೋಟಿ ಡಾಲರ್ ದಂಡ ವಿಧಿಸಿದೆ.
"ಗೊಂಬೆಗಳನ್ನು ನಿಗದಿತ ಸಮಯಕ್ಕೆ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಾಗಿದೆ ಆದರೆ ಗಾಗಾ ಮತ್ತವರ ತಂಡ ಪೂರ್ವನಿಯೋಜಿತ ಹಾಗೂ ಉದ್ದೇಶಪೂರ್ವಕವಾಗಿ ತಡಮಾಡುತ್ತಿದ್ದಾರೆ" ಎಂದು ಕಂಪನಿ ಆರೋಪಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗಾಗಾ ಮತ್ತವರ ತಂಡ "ನಮ್ಮ ಲಾಯರ್ ಗಳು ಕೋರ್ಟ್ ಪತ್ರಗಳನ್ನು ಇನ್ನೂ ನೋಡಿಲ್ಲ. ಅವನ್ನು ನೋಡಿದ ಬಳಿಕ ಉತ್ತರಿಸುತ್ತೇವೆ" ಎಂದಿದ್ದಾರೆ.
ಅಂದಹಾಗೆ ಲೇಡಿ ಗಾಗಾ ಗಂಡೋ ಹೆಣ್ಣೋ ಎಂಬ ಅನುಮಾನ ಕೆಲದಿನಗಳ ಹಿಂದೆ ಪಾಪ್ ಲೋಕದಲ್ಲಿ ಪಾಪ್‌ಕಾರ್ನ್‌ನಂತೆ ಚಿಟಪಟ ಸಿಡಿದಿತ್ತು. ಖ್ಯಾತ ಪಾಪ್ ತಾರೆ ಲೇಡಿ ಗಾಗಾ ಇತ್ತೀಚೆಗೆ ಲಿಂಗ ಪರಿವರ್ತನೆಗೆ ಒಳಗಾಗಿರುವುದೇ ಈಕೆಯ ಮೇಲೆ ಈ ಡೌಟ್ ಬರಲು ಕಾರಣವಾಗಿತ್ತು. ಇಷ್ಟು ದಿನ ಹೆಣ್ಣಾಗಿದ್ದ ಈಕೆ ಲಿಂಗಪರಿವರ್ತನೆ ಮೂಲಕ ಗಂಡಾಗಿ ಬದಲಾಗಿದ್ದರು. (ಪಿಟಿಐ)