For Quick Alerts
  ALLOW NOTIFICATIONS  
  For Daily Alerts

  74 ವರ್ಷದ ಹಿಂದೆ ಕಳೆದು ಹೋಗಿದ್ದ ಭಾರತದ ಮಹಾರಾಜನ ನೆಕ್ಲೆಸ್ ಧರಿಸಿದ ತಾರೆ: ನೆಟ್ಟಿಗರ ಕಣ್ಣು ಗರಂ!

  |

  ಅಮೆರಿಕದ ಜನಪ್ರಿಯ ಯೂಟ್ಯೂಬರ್ ಎಮ್ಮಾ ಚೇಂಬರ್ಲೀನ್ ಪ್ರತಿಷ್ಠಿತ ಮೆಟ್‌ಗಾಲಾ 2022ರಲ್ಲಿ ಇದೇ ಮೊದಲ ಬಾರಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಫ್ಯಾಷನ್‌ ಕಾರ್ಯಕ್ರಮದಲ್ಲಿ ಎಮ್ಮಾ ಚೇಂಬರ್ಲೀನ್ ಡಿಸೈನರ್ ವಸ್ತ್ರವನ್ನು ಧರಿಸಿ ಬಂದಿದ್ದರು. ಆದರೆ, ಮೆಟ್‌ಗಾಲಾದಲ್ಲಿ ಎಮ್ಮಾ ತನ್ನ ಕಾಸ್ಟ್ಯೂಮ್‌ನಿಂದ ಸುದ್ದಿಯಾಗುವ ಬದಲು, ತಾನು ಧರಿಸಿದ್ದ ಆರಂಭದಿಂದ ಸುದ್ದಿಯಲ್ಲಿದ್ದಾರೆ.

  ಅಷ್ಟಕ್ಕೂ ಎಮ್ಮಾ ಚೇಂಬರ್ಲೀನ್ ಧರಿಸಿದ ಆಭರಣದ ಬಗ್ಗೆ ಭಾರತದಲ್ಲಿ ಚರ್ಚೆಯಾಗುತ್ತಿರುವುದೇಕೆ? ಅನ್ನುವ ಪ್ರಶ್ನೆಗೆ ಇತಿಹಾಸ ಉತ್ತರ ನೀಡುತ್ತಿದೆ. ಎಮ್ಮಾ ಧರಿಸಿದ ಆಭರಣಕ್ಕೂ, ಈಕೆಗೂ ಏನು ಸಂಬಂಧ? ಪ್ರಶ್ನೆ ಕಾಡುವುದು ಸಹಜ. ಎಮ್ಮಾ ಚೇಂಬರ್ಲೀನ್ ಧರಿಸಿದ ನೆಕ್ಲೇಸ್‌ಗೂ ಭಾರತಕ್ಕೂ ಸಂಬಂಧವಿದೆ. ಇದೇ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಚರ್ಚೆಯಾಗುತ್ತಿದೆ.

  'ಅವತಾರ್ 2' ಈ ಬಾರಿ ನೀರಿನ ಮೇಲೆ ದಾಳಿ, ನೀರಿನಲ್ಲೇ ಸಾಹಸ!'ಅವತಾರ್ 2' ಈ ಬಾರಿ ನೀರಿನ ಮೇಲೆ ದಾಳಿ, ನೀರಿನಲ್ಲೇ ಸಾಹಸ!

  ಎಮ್ಮಾ ಧರಿಸಿದ ನೆಕ್ಲೇಸ್ ಭಾರತಕ್ಕೆ ಸೇರಿದ್ದು!

  ಎಮ್ಮಾ ಧರಿಸಿದ ನೆಕ್ಲೇಸ್ ಭಾರತಕ್ಕೆ ಸೇರಿದ್ದು!

  ಮೆಟ್‌ಗಾಲಾ 2022ರಲ್ಲಿ ಎಮ್ಮಾ ಚೇಂಬರ್ಲೀನ್ ಧರಿಸಿದ ಡೈಮಂಡ್ ನೆಕ್ಲೇಸ್‌ಗೂ ಭಾರತಕ್ಕೂ ಸಂಬಂಧವಿದೆ. ಯೂಟ್ಯೂಬರ್ ಎಮ್ಮಾ ಚೇಂಬರ್ಲೀನ್ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಡೈಮಂಡ್ ನೆಕ್ಲೇಸ್ ಕಾರ್ಟಿಯರ್‌ಗೆ ಸೇರಿದ್ದು ಎಂದು ಬರೆದು ಕೊಂಡಿದ್ದಾರೆ. ಕಾರ್ಟಿಯರ್ ಇದು, ಪುರಾತನ ಆಭರಣಗಳಿಗೆ ಹೆಸರು ವಾಸಿಯಾದ ಹಳೇ ಬ್ರ್ಯಾಂಡ್. ಅಂದ್ಹಾಗೆ ಈ ದುಬಾರಿ ಬೆಲೆಬಾಳುವ ಡೈಮಂಡ್ ನೆಕ್ಲೇಸ್ ಭಾರತದ ಪಟಿಯಾಲದ ಮಹಾರಾಜರಾಗಿದ್ದ ಭುಪಿಂದರ್ ಸಿಂಗ್‌ಗೆ ಸೇರಿದ್ದು ಎನ್ನಲಾಗಿದೆ. ಹೀಗಾಗಿ ಈ ವಜ್ರದ ನೆಕ್ಲೇಸ್‌ನಲ್ಲಿ ಭಾರತದ ಇತಿಹಾಸವಿದೆ.

  ಈ ಆಭರಣದ ಇತಿಹಾಸವೇನು?

  1888ರಲ್ಲಿ ದಕ್ಷಿಣ ಆಫ್ರಿಕಾದ ಗಣಿಯಲ್ಲಿ ವಿಶೇಷ ಪ್ರಕಾರದ ಹಳದಿ ಬಣ್ಣ ಡಿ ಬೀರ್ಸ್ ವಜ್ರಗಳನ್ನು ತೆಗೆಯಲಾಗಿತ್ತು. ಇಲ್ಲಿಂದ 1989ರಲ್ಲಿ ಪಟಿಯಾಲದ ಮಹಾರಾಜ ಭುಪಿಂದರ್ ಸಿಂಗ್ ಈ ವಜ್ರಗಳನ್ನು ಖರೀದಿ ಮಾಡಿದ್ದರು. ಇದನ್ನು ಸುಪ್ರಸಿದ್ಧ ಆಭರಣಗಳ ವಿನ್ಯಾಸ ಸಂಸ್ಥೆ ಕಾರ್ಟಿಯರ್‌ಗೆ ನೀಡಿ ವಿನ್ಯಾಸ ಮಾಡಲು ನೀಡಲಾಗಿತ್ತು. ಇದನ್ನು 1928ರಲ್ಲಿ ವಿನ್ಯಾಸ ಮಾಡಿ, ಭಾರತದ ಪಟಿಯಾಲದ ಮಹಾರಾಜ ಭುಪಿಂದರ್‌ಗೆ ನೀಡಲಾಗಿತ್ತು. ಆದರೆ, ಈ ದುಬಾರಿ ಬೆಲೆ ಬಾಳುವ ವಜ್ರದ ಹಾರ ದಿಢೀರನೇ ಕಣ್ಮರೆಯಾಗಿತ್ತು.

  ನೆಕ್ಲೇಸ್ ಕಣ್ಮರೆಯಾಗಿದ್ದೇಗೆ?

  1948ರಲ್ಲಿ ಈ ಬೆಲೆಬಾಳುವ ಅಪರೂಪದ ವಜ್ರದ ಹಾರವು ಕಳ್ಳತನವಾಗಿತ್ತು. ಈ ಹಾರ ಕದ್ದವರು ಯಾರು? ಹೇಗೆ ಕಳುವಾಯಿತು? ಎಂಬ ಸುಳಿವೇ ಇರಲಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಈ ವಜ್ರದ ನೆಕ್ಲೇಸ್ ಸುಳಿವೇ ಇರಲಿಲ್ಲ. ಸುಮಾರು 34 ವರ್ಷಗಳ ಬಳಿಕ ಮತ್ತೆ ಈ ಹಾರ ಪತ್ತೆಯಾಗಿತ್ತು. 1982ರಲ್ಲಿ ಸೋಥೆಬಿ ಹರಾಜು ಪ್ರಕ್ರಿಯೆಯಲ್ಲಿ ಪತ್ತೆಯಾಗಿತ್ತು. ಆದರೆ, ಇಡೀ ನೆಕ್ಲೇಸ್ ಹಾರಾಜಾಗಿರಲಿಲ್ಲ. ಬದಲಿಗೆ, ಕೇವಲ ಹಳದಿ ಬಣ್ಣ ಡಿ ಬೀರ್ಸ್ ವಜ್ರ ಮಾತ್ರ ಹಾರಾಜಿಗೆ ಬಂದಿತ್ತು. ಆಗ ಕಾರ್ಟಿಯರ್ ಸಂಸ್ಥೆ ಆ ವಜ್ರವನ್ನು ಖರೀದಿ ಮಾಡಿತ್ತು. ಲಂಡನ್‌ನಲ್ಲಿ ನೆಕ್ಲೇಸ್‌ನ ಇನ್ನೊಂದು ಭಾಗ ಪತ್ತೆಯಾಗಿತ್ತು. ಅದೆಲ್ಲವನ್ನೂ ಸೇರಿಸಿ ಮೂಲಸ್ವರೂಪಕ್ಕೆ ಬರುವಂತೆ ನೆಕ್ಲೇಸ್ ಅನ್ನು ಕಾರ್ಟಿಯರ್ ಸಿದ್ಧ ಪಡಿಸಿತ್ತು. ಅದೇ ವಜ್ರದ ಹಾರ ಧರಿಸಿ ಎಮ್ಮಾ ಚೇಂಬರ್ಲೀನ್ ಮೆಟ್‌ಗಾಲಾದಲ್ಲಿ ಪ್ರತ್ಯಕ್ಷ ಆಗಿದ್ದಾರೆ.

  ಈ ವಿವಾದ ಸೃಷ್ಟಿಯಾಗಿದ್ದೇಕೆ?

  ಭಾರತದಿಂದ ಕಾಣೆಯಾಗಿದ್ದ ಪಟಿಯಾಲ ಮಹಾರಾಜನ ವಜ್ರದ ನೆಕ್ಲೇಸ್ ಎಮ್ಮಾ ಚೇಂಬರ್ಲೀನ್ ಕತ್ತಿನಲ್ಲಿ ನೋಡಿ ನೆಟ್ಟಿಗರು ಕಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. " ಬ್ರಿಟಿಷರ ಕಾಲದಲ್ಲಿ ಭಾರತದಿಂದ ಕಾಣೆಯಾಗಿದ್ದ ಬೆಲೆಬಾಳುವ ವಸ್ತುವನ್ನು ಯಾರೋ ಧರಿಸಿದ್ದಾಳೆ. ಇದು ಅವರ ಕೈಯಲ್ಲಿಇರುವಂತಹದ್ದಲ್ಲ ಎಂದು" ನೆಟ್ಟಿಗರೊಬ್ಬರು ಕಮೆಂಟ ಮಾಡಿದ್ದಾರೆ. ಹೀಗೆ "ಭಾರತದ ಅತ್ಯಮೂಲ್ಯ ವಸ್ತುಗಳು ಬೇರೆಯವರ ಕೈಯಲ್ಲಿದೆ." ಎಂದು ಕಮೆಂಟ್ ಮಾಡುತ್ತಿದ್ದಾರೆ.

  English summary
  Met Gala 2022: Emma Chamberlain wore Indian King Maharaja of Patiala’s Necklace. Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion