For Quick Alerts
ALLOW NOTIFICATIONS  
For Daily Alerts

  ಮಿಸ್ ಯೂನಿವರ್ಸ್ 2012 ವಿಶ್ವರೂಪ ದರ್ಶನ

  By ಉದಯರವಿ
  |

  ಈ ವಿಶ್ವ ಸುಂದರಿಯರ ಸ್ಪರ್ಧೆ ಚಳಿಗಾಲದಲ್ಲೇ ಶುರುವಾಗುತ್ತದೆ ನೋಡಿ. ಚಳಿ ಚಳಿ ತಾಳೆನು ಈ ಚಳಿಯಾ ಆಹಾ ಎಂದು ಚಡಪಡಿಸುತ್ತಿರುವವರ ಮೈ ಬೆಚ್ಚಗೆ ಮಾಡುವ ಸಲುವಾಗಿಯೋ ಏನೋ ಈ ಬಾರಿಯ ಸ್ಪರ್ಧೆಯ ಚಳಿಚಳಿ ಚಿತ್ರಗಳು ಬಂದಿವೆ.

  ಡಿಸೆಂಬರ್ 14ರಂದು ಲಾಸ್ ವೆಗಾಸ್ ನಲ್ಲಿ ನಡೆದ "ನ್ಯಾಷನಲ್ ಕಾಸ್ಟ್ಯೂಮ್ ಶೋ"ನ ದೃಶ್ಯಗಳನ್ನು ಇಲ್ಲಿ ಕಾಣಬಹುದು. ಈ ಸ್ಪರ್ಧೆಯಲ್ಲಿ 89 ಮಂದಿ ಪಾಲ್ಗೊಂಡಿದ್ದರು. ಅವರೆಲ್ಲಾ ತಮ್ಮ ವೈವಿಧ್ಯಮಯ ವಸ್ತಾಲಂಕಾರನ್ನು ಪ್ರದರ್ಶಿಸಿದರು. ಒಬ್ಬರಿಗಿಂತ ಒಬ್ಬರು ಅದ್ಭುತ. ನೋಡುತ್ತಾ ಹೋದರೆ ಕಣ್ಣು ಎತ್ತೆತ್ತಲೋ ಹೊರಳುತ್ತದೆ.

  ಗಮಮಸೆಳೆದ ಭಾರತೀಯ ಸೌಂದರ್ಯ

  ಏನೇ ಹೇಳಿ ಭಾರತೀಯ ಸಂಸ್ಕೃತಿ, ಸಂಪ್ರದಾಯ ಮುಂದೆ ಎಲ್ಲವೂ ಗೌಣ. ಮಿಸ್ ಇಂಡಿಯಾ 2012ರಲ್ಲಿ ಶಿಲ್ಪಾ ಸಿಂಗ್ ಸಾಂಪ್ರದಾಯಿಕ ಉಡುಗೆಯಲ್ಲಿ ಗಮನಸೆಳೆದ ಬಗೆ.

  ಇದು ಯಾವ ದೇಶದ ಹಕ್ಕಿ ಇರಬಹುದು?

  ಈ ದೃಶ್ಯವನ್ನೇನಾದರೂ ನವಿಲಿನ ಮುಂದೆ ಪ್ರದರ್ಶಿಸಿದ್ದರೆ ಅದು ಕೂಡ ನಾಚಿ ನೀರಾಗುತ್ತಿತ್ತು. ಅಪ್ಸರೆಯ ಹಾಗೆ ಕಾಣಿಸುತ್ತಿರುವ ಈಕೆ ಮಿಸ್ ಹೋಂಡುರಾಸ್ 2012, ಜೆನ್ನಿಫರ್ ಆಂಡ್ರಿ. ತಮ್ಮ ದೇಶದ ಸಂಪ್ರದಾಯವನ್ನು ಪ್ರದರ್ಶಿಸಿದ ಬಗೆ.

  ಫಿನ್ ಲ್ಯಾಂಡ್ ಬೆಡಗಿ ಅಂದಚೆಂದ ವೈಯಾರ

  ತಮ್ಮ ದೇಹಕ್ಕೆ ಮುಚ್ಚಿದ್ದ ಪರದೆಯನ್ನು ಸರಿಸಿ ನೋಡುಗರತ್ತ ಸಿಹಿಮುತ್ತು ಕಳುಹಿಸುತ್ತಿರುವ ಚೆಲುವೆ. ಈಕೆ ಫಿನ್ ಲ್ಯಾಂಡ್ ನ Sara Chafak ತಮ್ಮ ದೇಶದ ಸಂಪ್ರದಾಯವನ್ನು ಬಟ್ಟೆಯಲ್ಲೇ ಪ್ರತಿಬಿಂಬಿಸಿದ್ದು ಹೀಗೆ.

  ಜಮೈಕಾದ ಜಿಂಗ್ ಚಾಕ್ ಬೆಡಗಿ

  ಮಿಸ್ ಜಮೈಕಾ 2012ರ ಬೆಡಗಿ ತಮ್ಮ ಅಂದಚೆಂದ ವೈಯಾರವನ್ನು ಪ್ರದರ್ಶಿಸಿದ ಬಗೆ. ವೈವಿಧ್ಯಮಯ ವಸ್ತ್ರಾಲಂಕಾದಲ್ಲಿ Chantal Zak.

  ನವಿಲೇ ಪಂಚರಂಗಿ ಓ ನವಿಲೇ

  ಮಿಸ್ ಪನಾಮಾ 2012ರ ಚೆಲುವೆ. ನವಿಲೇ ಗರಿಗೆದರಿದಂತೆ ಈಕೆ ನವಿಲುಗರಿಯಲ್ಲೇ ಎಲ್ಲರ ಗಮನಸೆಳೆದರು. ಈಕೆಯ ಹೆಸರು Stephanie Vander Werf.

  ರೊಮೇನಿಯಾದ ನಿರಾಭರಣ ಸುಂದರಿ

  ಮಿಸ್ ರೊಮೇನಿಯಾ 2012ರ ನಿರಾಭರಣ ಸುಂದರಿ. ತಮ್ಮ ಅಷ್ಟೌಶ್ವರ್ಯಗಳನ್ನು ತೆರೆದಿಟ್ಟ Delia Monica Duca.

  ಮಿಸ್ ಸ್ವಿಟ್ಜರ್ ಲ್ಯಾಂಡ್ Alina Buchschacher

  ಈಕೆಯ ಮೇಲೆ ಈಗಾಗಲೆ ಬಹಳಷ್ಟು ಭರವಸೆ ಇದೆ. ಈ ಬಾರಿಯ ಮಿಸ್ ಯೂನಿವರ್ಸ್ ಪಟ್ಟ ಈಕೆಗೆ ಸಿಗಬಹುದು ಎಂಬ ನಿರೀಕ್ಷೆಗಳಿವೆ.

  ಥೈಲ್ಯಾಂಡ್ ನ ಥೈ ಥೈ ಬಂಗಾರಿ

  ಈಕೆಯನ್ನು ನೋಡುತ್ತಿದ್ದರೆ ಥೈ ಥೈ ಬಂಗಾರಿ ಎಂದು ಕುಣಿಯಲು ಬಂದಂತಿದೆ. ಈಕೆ ಥೈಲ್ಯಾಂಡ್ ಚೆಲುವೆ Nutpimon Farida Waller. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಈಕೆಗೆ ಥೈಲ್ಯಾಂಡ್ ದೇಶ ವಿಶೇಷ ವ್ಯವಸ್ಥೆಯನ್ನೂ ಮಾಡಿತ್ತು.

  ಲಿಬರ್ಟಿ ಸ್ಟ್ಯಾಚ್ಯು ಅಲ್ಲ ಗುರು

  ಲಿಬರ್ಟಿ ಸ್ಟ್ಯಾಚ್ಯು ಸ್ಟೈಲಲ್ಲಿ ಬಂದ ಈಕೆ ಮಿಸ್ ಯುಎಸ್ಎ 2012, Olivia Culpo ತಮ್ಮ ಅಂದಚೆಂದಗಳನ್ನು ಪ್ರದರ್ಶಿಸಿದ್ದು ಹೀಗೆ.

  ಸೌತ್ ಆಫ್ರಿಕಾ ಚೆಲುವು ಅನಾವರಣ

  ಈಕೆಯ ಹೆಸರು Melinda Bam, ಮಿಸ್ ಸೌತ್ ಆಫ್ರಿಕಾ 2012. ಈ ಬಾರಿಯ ಮಿಸ್ ಯೂನಿವರ್ಸ್ ಮುಕುಟವನ್ನು ತಾವೇ ಧರಿಸುತ್ತೇವೆ ಎಂಬ ವಿಶ್ವಾಸದಲ್ಲಿ ಇದ್ದಾರೆ.

  ವಿಭಿನ್ನ ವಸ್ತ್ರಾಲಂಕಾರದಲ್ಲಿ ಪೋರ್ಟರಿಕೋ ಸುಂದರಿ

  ವಿಭಿನ್ನ ವಸ್ತ್ರಾಲಂಕಾರದಲ್ಲಿ ಗಮನಸೆಳೆದ ಮಿಸ್ ಪೋರ್ಟರಿಕೋ 2012, Bodine Koehler.

  ಗಾಮ್ (Gaum) ಸುಂದರಿಯ ಗಮ್ಮತ್ತು

  ತುಂಬಾ ಗಮ್ಮತ್ತಾಗಿ ಕಾಣುತ್ತಿರುವ ಈಕೆ ಗಾಮ್ ಚೆಲುವೆ. ಮಿಸ್ ಗಾಮಾ 2012, Alyssa Cruz Aguero.


  ಅಮೆರಿಕಾದ ಲಾಸ್ ವೆಗಾಸ್ ನಗರದ ಪ್ಲಾನೆಟ್ ಹಾಲಿವುಡ್ ಹೋಟೆಲ್ ನಲ್ಲಿ ಈ ಸ್ಪರ್ಧೆ ನಡೆಯಿತು. ಪ್ರಾಥಮಿಕ ಸ್ಪರ್ಧೆ ಡಿಸೆಂಬರ್ 12ರಂದು ನಡೆಯಿತು. ಈಜುಡುಗೆಯಲ್ಲಿ ಲಲನೆಯರು ಕಣ್ಮನ ಸೆಳೆದರು.

  ಸ್ಪರ್ಧೆಯಲ್ಲಿ ಭಾಗವಹಿಸಿದ ಯುವತಿಯರು ತಮ್ಮ ದೇಶದ ಸಂಸ್ಕೃತಿ, ಸಂಪ್ರದಾಯಕ್ಕೂ ಮಣೆ ಹಾಕಿದ್ದಾರೆಯೇ ಎಂದು ಎಲ್ಲರೂ ನೋಡುತ್ತಿದ್ದರು. ಮೊದಲೇ ಇದು ಸೌಂದರ್ಯ ಸ್ಪರ್ಧೆ. ಇಲ್ಲಿ ಸಂಪ್ರದಾಯ, ಸಂಸ್ಕೃತಿಯನ್ನು ಎತ್ತಿಹಿಡಿಯಲು ಸಾಧ್ಯವೇ? ಎಂಬ ಪ್ರಶ್ನೆಯೂ ಕಾಡುತ್ತದೆ.

  English summary
  The Miss Universe National Costume Show on December 14, 8 pm in Las Vegas (December 15, 12 nn in Manila) will allow Miss Universe fans to see the 89 candidates parade proudly in their national costumes. The 2012 National Costume Show took place at the PH Live in the Planet Hollywood Resort and Casino in Las Vegas, where 88 of the 89 delegates showcased trends and traditions from their own countries.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more