For Quick Alerts
  ALLOW NOTIFICATIONS  
  For Daily Alerts

  'ಜಂಗಲ್ ಬುಕ್' ದಾಖಲೆ ಧೂಳಿಪಟ ಮಾಡಲು ಬಂದ 'ಮೋಗ್ಲಿ'

  By Bharath Kumar
  |

  ಆಂಡಿ ಸೆರ್ಕಿಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಮೋಗ್ಲಿ' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಒಂದೇ ದಿನದಲ್ಲಿ 6 ಮಿಲಿಯನ್ ವೀಕ್ಷಕರು ಟ್ರೈಲರ್ ನೋಡಿದ್ದು, ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದೆ.

  ಕಳೆದ ವರ್ಷ ತೆರೆಕಂಡಿದ್ದ 'ಜಂಗಲ್ ಬುಕ್' ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಸುಮಾರು 250 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಮಾಡಿತ್ತು. ಈ ಚಿತ್ರದಲ್ಲಿ 'ಮೋಗ್ಲಿ' ಬಾಲಕ ಸಖತ್ ರಂಜಿಸಿದ್ದ. ಇದೀಗ, ಅದೇ ಮಾದರಿಯಲ್ಲಿ 'ಮೋಗ್ಲಿ' ಸಿನಿಮಾ ತಯಾರಾಗಿದ್ದು, ಸಿನಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

  ಕಾಡನ್ನೇ ಜಗತ್ತಾಗಿ ಬದುಕುವ ಬಾಲಕ ಜನಾರಣ್ಯಕ್ಕೆ ಬಂದರೆ ಏನೆಲ್ಲಾ ಕಷ್ಟಗಳು ಎದುರಾಗುತ್ತವೆ. ಕಾಡಿನಲ್ಲಿ ಪ್ರಾಣಿಗಳ ಜತೆಗಿನ ಅನುಬಂಧ, ಇದರ ಜತೆಗೆ ಗ್ರಾಫಿಕ್ಸ್ ಮಾಯಾಜಾಲಗಳೊಂದಿಗೆ ಇನ್ನೊಂದು ಅದ್ಭುತ ಜಗತ್ತಿಗೆ ಕೊಂಡೊಯ್ಯಲು ಪ್ರೇಕ್ಷಕರ ಮುಂದೆ ಬರುತ್ತಿದೆ 'ಮೋಗ್ಲಿ'.

  ಆಂಡಿ ಸೆರ್ಕಿಸ್ ನಿರ್ದೇಶನ ಮಾಡಿದ್ದು, ರೋಹನ್ ಚಂದ್ ಮೋಗ್ಲಿಯಾಗಿ ಅಭಿನಯಿಸಿದ್ದಾರೆ. ಪ್ರಾಣಿಗಳ ಪಾತ್ರಗಳಿಗೆ ಕ್ರಿಸ್ಟಿನ್ ಬಾಲೆ, ಕೇಟ್ ಬ್ಲಾಂಚೆಟ್, ನೋಮಿ ಹೇರಿಸ್ ಧ್ವನಿ ತುಂಬಿದ್ದಾರೆ. 'ಸ್ಲಂ ಡಾಗ್' ಮಿಲಿಯನೀರ್ ಖ್ಯಾತಿಯ ಫ್ರೀಡಾ ಪಿಂಟೋ ಚಿತ್ರದಲ್ಲಿ ಮುಖ್ಯ ಪಾತ್ರ ಪೋಷಿಸಿದ್ದಾರೆ. ಇನ್ನುಳಿದಂತೆ ವಾರ್ನರ್ ಬ್ರದರ್ಸ್ ಕಂಪೆನಿ ಈ ಚಿತ್ರ ಅಕ್ಟೋಬರ್ 19ರಂದು ಜಗತ್ತಿನಾದ್ಯಂತ ಬಿಡುಗಡೆ ಮಾಡುತ್ತಿದೆ.

  English summary
  The first trailer for the much-delayed Andy Serkis film titled Mowgli just arrived on the internet and it is by far the darkest retelling of the Rudyard Kipling’s classic 19th-century tale of the boy who grew up in the jungles of India.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X