For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಎಫೆಕ್ಟ್: ಬಾಂಡ್ ಸರಣಿಯ 'ನೋ ಟೈಮ್ ಟು ಡೈ' ಸಿನಿಮಾ ರಿಲೀಸ್ ಮುಂದಕ್ಕೆ

  |

  ಹಾಲಿವುಡ್ ನ ಪ್ರಸಿದ್ಧ ಬಾಂಡ್ ಸರಣಿಯ ಬಹುನಿರೀಕ್ಷೆಯ 25ನೇ ಸಿನಿಮಾ 'ನೋ ಟೈಮ್ ಟು ಡೈ' ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ವಿಶ್ವದ ಸಿನಿಪ್ರೀಯರು ಕಾತರದಿಂದ ಕಾಯುತ್ತಿದ್ದ ಸಿನಿಮಾ ಬರೋಬ್ಬರಿ 7 ತಿಂಗಳುಗಳ ಕಾಲ ಮುಂದಕ್ಕೆ ಹೋಗಿದೆ. ವಿಶ್ವದಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ನ ಪರಿಣಾಮ ಬಾಂಡ್ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ.

  ಈ ಬಗ್ಗೆ ಟ್ವೀಟ್ ಮಾಡಿರುವ ಚಿತ್ರತಂಡ ಹೊಸ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ. ಎಂಜಿಎಂ, ಯೂನಿವರ್ಸಲ್ ಮತ್ತು ಬಾಂಡ್ ನಿರ್ಮಾಪಕರಾದ ಮೈಕೆಲ್ ಜಿ ವಿಲ್ಸನ್ ಮತ್ತು ಬಾರ್ಬರಾ ಬ್ರೊಕೊಲಿ 'ನೋ ಟೈಂ ಟು ಡೈ' ಸಿನಿಮಾದ ಹೊಸ ದಿನಾಂಕವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.

  ಬಾಂಡ್ ಸರಣಿಯ 25ನೇ ಚಿತ್ರದ ಟ್ರೈಲರ್ ರಿಲೀಸ್: ಆಕ್ಷನ್ ಗೆ ಅಭಿಮಾನಿಗಳು ಫಿದಾಬಾಂಡ್ ಸರಣಿಯ 25ನೇ ಚಿತ್ರದ ಟ್ರೈಲರ್ ರಿಲೀಸ್: ಆಕ್ಷನ್ ಗೆ ಅಭಿಮಾನಿಗಳು ಫಿದಾ

  ಅಂದ್ಹಾಗೆ ಬಹು ನಿರೀಕ್ಷೆಯ ಸಿನಿಮಾ 2020 ನವೆಂಬರ್ 12ಕ್ಕೆ ಯು.ಕೆಯಲ್ಲಿ ತೆರೆಗೆ ಬರುತ್ತಿದೆ. ಯುಎನ್ ನಲ್ಲಿ 25ಕ್ಕೆ ರಿಲೀಸ್ ಆಗುತ್ತಿರುವುದಾಗಿ ಚಿತ್ರತತಂಡ ಬಹಿರಂಗಪಡಿಸಿದೆ. ಕೊರೊನಾ ವೈರಸ್ ಪರಿಣಾಮ ಮತ್ತು ಆರ್ಥಿಕ ವಿಚಾರವಾಗಿ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

  ಈ ಮೊದಲು ಬಾಂಡ್ ಸಿನಿಮಾ ಏಪ್ರಿಲ್ ನಲ್ಲಿ ತೆರೆಗೆ ಬರಲು ಸಿದ್ದವಾಗಿತ್ತು. ಯು.ಕೆಯಲ್ಲಿ ಏಪ್ರಿಲ್ 3ಕ್ಕೆ ರಿಲೀಸ್ ಆಗಬೇಕಿತ್ತು. ಇನ್ನು ಅಮೆರಿಕಾದಲ್ಲಿ ಏಪ್ರಿಲ್ 8ಕ್ಕೆ ತೆರೆಗೆ ಬರಬೇಕಿತ್ತು. 2015ರಲ್ಲಿ 24ನೇ ಬಾಂಡ್ ಸಿನಿಮಾ ಸ್ಪೆಕ್ಟರ್ ರಿಲೀಸ್ ಆಗಿತ್ತು. ಈಗ ನಾಲ್ಕು ವರ್ಷಗಳ ಬಳಿಕ ಬಾಂಡ್ ಸರಣಿಯ 25ನೇ ಸಿನಿಮಾ 'ನೋ ಟೈಮ್ ಟು ಡೈ' ತೆರೆಗೆ ಬರುತ್ತಿದೆ.

  ಇನ್ನು 25ನೇ ಜೇಮ್ಸ್ ಬಾಂಡ್ ಆಗಿ ಹಾಲಿವುಡ್ ನಟ ಡೇನಿಯಲ್ ಕ್ರೇಗ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ನಟರಾದ ರೆಮಿ ಮೆಲಿಕ್, ಲಶಾನಾ ಲಿಂಚ್, ರಾರಿ ಕಿನಿಯರ್, ಡೇವಿಡ್ ಬೆನ್ ಸ್ಸಲಾ, ಬೆಸ್ ವಿಶಾ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಕ್ಯಾರಿ ಜೋಜಿ ಫುಕುನಾಗಾ ಆಕ್ಷನ್ ಕಟ್ ಹೇಳಿದ್ದಾರೆ.

  English summary
  ‘No Time To Die' release postponed for due to Coronavirus. Most expected ‘No Time To Die' release on November.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X