»   » ಲಿಯಾನಾರ್ಡೋ ಡಿಕಾಪ್ರಿಯೋಗೆ ಕೊನೆಗೂ ಆಸ್ಕರ್ ಸಿಕ್ತು!

ಲಿಯಾನಾರ್ಡೋ ಡಿಕಾಪ್ರಿಯೋಗೆ ಕೊನೆಗೂ ಆಸ್ಕರ್ ಸಿಕ್ತು!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಅಮೆರಿಕದ ಕ್ಯಾಲಿಫೋರ್ನಿಯಾದ ಹಾಲಿವುಡ್ದಿನ ಡಾಲ್ಬಿ ಥೇಟರ್ ನಲ್ಲಿ 88ನೇ ಅಕಾಡೆಮಿ ಪ್ರಶಸ್ತಿ ಸಮಾರಂಭ ವರ್ಣರಂಜಿತ ತೆರೆ ಬಿದ್ದಿದೆ. ಸುಮಾರು 24 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಸಮಾರಂಭದ ಆರಂಭದಲ್ಲಿ ಶ್ರೇಷ್ಠ ಪೋಷಕ ನಟಿಯಾಗಿ ಅಲಿಸಿಯ ವಿಕಾಂದರ್ (ರೂಮ್) ಪ್ರಶಸ್ತಿ ಪಡೆದರೆ, ಸಮಾರಂಭದ ಕೊನೆಯಲ್ಲಿ ಶ್ರೇಷ್ಠ ಚಿತ್ರ ಪ್ರಶಸ್ತಿಯನ್ನು ಸ್ಪಾಟ್ ಲೈಟ್ ಪಡೆದುಕೊಂಡಿತು. ಕಂಚಿನ ಕಂಠದ ನಟ ಮಾರ್ಗನ್ ಫ್ರೀಮನ್ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದರು.

ಲಿಯಾನಾರ್ಡೋ ಡಿ ಕಾಪ್ರಿಯೋ ಅಭಿನಯದ ದಿ ರೆವೆನಂಟ್ ಈ ಬಾರಿ ಅತಿ ಹೆಚ್ಚು ನಾಮಾಂಕಿತಗೊಂಡಿತ್ತು. ದಿ ರೆವೆನೆಂಟ್ 12 ವಿಭಾಗದಲ್ಲಿ ರೇಸ್ ನಲ್ಲಿದ್ದರೆ, ಜಾರ್ಜ್ ಮಿಲ್ಲರ್ ಅವರ 'ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್' 10 ವಿಭಾಗದಲ್ಲಿ, ರಿಡ್ಲೆ ಸ್ಕಾಟ್ ಅವರ ಸೈ ಫೈ ಚಿತ್ರ ದಿ ಮಾರ್ಷಿಯನ್ 7 ವಿಭಾಗದಲ್ಲಿ ನಾಮಾಂಕಿತಗೊಂಡಿತ್ತು. [ಆಸ್ಕರ್ ಪ್ರಶಸ್ತಿ ನಾಮಿನೇಷನ್ 2016 ಪಟ್ಟಿ]

ಸುರಸುಂದರಾಂಗ ಗೋಲ್ಡನ್ ಗ್ಲೋಬ್ ವಿಜೇತ ಲಿಯಾನಾರ್ಡೋ ಡಿಕಾಪ್ರಿಯೋ ಅವರ ಆಸ್ಕರ್ ಗೆಲ್ಲುವ ಕನಸು ಕೊನೆಗೂ ನನಸಾಗಿದೆ. ಶ್ರೇಷ್ಠ ನಟ ವಿಭಾಗದಲ್ಲಿ ಸ್ಪರ್ಧೆಯಲ್ಲಿದ್ದ ಡಿಕಾರ್ಪಿಯೋ ಅವರು ರೆವೆನೆಂಟ್ ಚಿತ್ರದ ನಟನೆಗಾಗಿ ಪ್ರಶಸ್ತಿ ಪಡೆದರೆ, ಇದೇ ಚಿತ್ರದ ನಿರ್ದೇಶಕ ಅಲೆಜಾಂಡೋ ಇನಾರಿತು ಅವರು ಬರ್ಡ್ ಮ್ಯಾನ್ ನಂತರ ಮತ್ತೊಮ್ಮೆ ಆಸ್ಕರ್ ಗೆದ್ದುಕೊಂಡಿದ್ದಾರೆ. ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್ ಒಟ್ಟು ಆರು ಪ್ರಶಸ್ತಿ ಪಡೆಯಿತು. ಶ್ರೇಷ್ಠ ನಟಿ ಪ್ರಶಸ್ತಿ 'ರೂಮ್' ಚಿತ್ರದ ಬ್ರಿಯಿ ಲಾರ್ಸನ್ ಪಾಲಾಯಿತು.

2016ನೇ ಆಸ್ಕರ್ ಪ್ರಶಸ್ತಿ ವಿಜೇತರ ಪಟ್ಟಿ:

ಮುಖ್ಯ ಭೂಮಿಕೆಯಲ್ಲಿ ನಟ-ಲಿಯಾನಾರ್ಡೋ ಡಿಕಾಪ್ರಿಯೋ

ವಿಜೇತ: ಲಿಯಾನಾರ್ಡೋ ಡಿಕಾಪ್ರಿಯೋ- ಚಿತ್ರ ದಿ ರೆವೆನಂಟ್
ರೇಸ್ ನಲ್ಲಿದ್ದ ಇತರರು
* ಬ್ರಿಯಾನ್ ಕ್ರಾನ್ಸ್ಟನ್ -ಟ್ರಂಬೋ
* ಮ್ಯಾಟ್ ಡಮಾನ್- ದಿ ಮಾರ್ಷಿಯನ್
* ಮೈಕಲ್ ಫಾಸ್ಬೆಂಡರ್-ಸ್ಟೀವ್ ಜಾಬ್ಸ್
* ಎಡ್ಡಿ ರೆಡ್ ಮಾಯ್ನೆ-ದಿ ಡ್ಯಾನಿಶ್ ಗರ್ಲ್

ಉತ್ತಮ ಚಿತ್ರ: ಸ್ಪಾಟ್ ಲೈಟ್

ವಿಜೇತ: ಸ್ಪಾಟ್ ಲೈಟ್
ದಿ ಬಿಗ್ ಶಾರ್ಟ್
ಬ್ರಿಡ್ಜ್ ಆಫ್ ಸೈಸ್
ಬ್ರೂಕ್ಲಿನ್
ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್
ದಿ ಮಾರ್ಷಿಯನ್
ದಿ ರೆವನಂಟ್
ರೂಮ್

ಶ್ರೇಷ್ಠ ನಿರ್ದೇಶಕ : ಅಲೆಕ್ಸಾಂಡ್ರೋ ಜಿ ಇನಾರಿತು

ಶ್ರೇಷ್ಠ ನಿರ್ದೇಶಕ : ಅಲೆಕ್ಸಾಂಡ್ರೋ ಜಿ ಇನಾರಿತು : ದಿ ರೆವೆನಂಟ್

ರೇಸ್ ನಲ್ಲಿ ದಿ ಬಿಗ್ ಶಾರ್ಟ್, ಮ್ಯಾಡ್ ಮ್ಯಾಕ್ಸ್ ಪ್ಯೂರಿ ರೋಡ್, ರೂಮ್ ಹಾಗೂ ಸ್ಪಾಟ್ ಲೈಟ್ ಚಿತ್ರದ ನಿರ್ದೇಶಕರಿದ್ದರು. ಚಿತ್ರದಲ್ಲಿ : ಪ್ರಶಸ್ತಿ ಜೊತೆಗೆ ನಟ ಲಿಯಾನಾರ್ಡೊ ಡಿಕಾಪ್ರಿಯೋ.

ಮುಖ್ಯ ಭೂಮಿಕೆಯಲ್ಲಿ ನಟಿ-ಬ್ರಿಯಿ ಲಾರ್ಸನ್

ವಿಜೇತೆ: ಬ್ರಿಯಿ ಲಾರ್ಸನ್ -ರೂಮ್
ಕೇಟ್ ಬ್ಲಚೆಟ್-ಕರೋಲ್
ಜೆನ್ನಿಫರ್ ಲಾರೆನ್ಸ್-ಜಾಯ್
ಶಾರ್ಲೆ ರಾಂಪ್ಲಿಂಗ್,-45 ಇಯರ್ಸ್
ಸಯೊರ್ಸ್ ರೊನಾನ್-ಬ್ರೂಕ್ಲಿನ್

ಪೋಷಕ ಪಾತ್ರ ಹಾಗೂ ಚಿತ್ರಕಥೆ

* ಪೋಷಕ ನಟಿ: ಆಲಿಸಿಯಾ ವಿಕಾಂದರ್, ದಿ ಡ್ಯಾನೀಶ್ ಗರ್ಲ್
* ಪೋಷಕ ನಟ: ಮಾರ್ಕ್ ರಿಲಾನ್ಸ್, ಬ್ರಿಡ್ಜ್ ಆಫ್ ಸೈಸ್
* ಚಿತ್ರ ಕಥೆ: ದಿ ಬಿಗ್ ಶಾರ್ಟ್
* ಮೂಲ ಸ್ಕ್ರೀನ್ ಪ್ಲೇ: ಸ್ಪಾಟ್ ಲೈಟ್

ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್ ಚಿತ್ರಕ್ಕೆ ಹೆಚ್ಚು ಪ್ರಶಸ್ತಿ

ಶ್ರೇಷ್ಠ ವಸ್ತ್ರ ವಿನ್ಯಾಸ, ಪ್ರೊಡೆಕ್ಷನ್ ವಿನ್ಯಾಸ ಹಾಗೂ ಪ್ರಸಾಧನ ಮತ್ತು ಕೇಶ ವಿನ್ಯಾಸ ವಿಭಾಗದ ಆಸ್ಕರ್ ಪ್ರಶಸ್ತಿ ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್ ಚಿತ್ರಕ್ಕೆ ಸಿಕ್ಕಿದೆ.

ಸಿನಿಮಾಟ್ರೋಗ್ರಾಫಿ ಪ್ರಶಸ್ತಿ : ದಿ ರೆವನಂಟ್

ಸಿನಿಮಾಟ್ರೋಗ್ರಾಫಿ ಪ್ರಶಸ್ತಿ : ದಿ ರೆವನಂಟ್
ಶ್ರೇಷ್ಠ ಸಂಕಲನ: ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್
ಶ್ರೇಷ್ಠ ಸೌಂಡ್ ಎಡಿಟಿಂಗ್: ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್

ವಿಷ್ಯುವಲ್ ಎಫೆಕ್ಟ್ ಪ್ರಶಸ್ತಿ

ವಿಷ್ಯುವಲ್ ಎಫೆಕ್ಟ್ ಪ್ರಶಸ್ತಿ-ಎಕ್ಸ್ ಮಚಿನಾ
ಅನಿಮೇಷನ್ ಕಿರುಚ್ ಚಿತ್ರ: ಬೇರ್ ಸ್ಟೋರಿ
ಅನಿಮೇಷನ್ ಚಿತ್ರ: ಇನ್ ಸೈಡ್ ಔಟ್
ಸಾಕ್ಷ್ಯಚಿತ್ರ ಕಿರು ವಿಷಯ: ಎ ಗರ್ಲ್ ಇನ್ ದಿ ರಿವರ್- ದಿ ಪ್ರೈಸ್ ಆಫ್ ಫರ್ಗಿವ್ನೆಸ್

ಡಾಕ್ಯುಮೆಂಟರಿಗಳಿಗೆ ಆಸ್ಕರ್ ಪ್ರಶಸ್ತಿ

ಡಾಕ್ಯುಮೆಂಟರಿ: ಅಮಿ
ಲೈವ್ ಆಕ್ಷನ್ ಕಿರುಚಿತ್ರ: ಸ್ಟುಟರರ್
ವಿದೇಶಿ ಭಾಷಾ ಚಿತ್ರ: ಸನ್ ಆಫ್ ಸಾಯಲ್
ಒರಿಜಿನಲ್ ಸಂಗೀತ: ದಿ ಹೇಟ್ ಫುಲ್ ಎಯ್ಟ್
ಮೂಲ ಗೀತೆ: ಸ್ಪೆಕ್ಟ್ರಾ ಚಿತ್ರದ Writing's On The Wall

English summary
It's finally happening! The 88th Academy Awards ceremony, presented by the Academy of Motion Picture Arts and Sciences is happening at the Dolby Theater in Hollywood, California. Here are all the winners from the 24 categories. Best actor in a leading role goes to Leonardo Dicaprio for The Revenant.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada