»   » ಆಸ್ಕರ್ ಅಂಗಳಕ್ಕೆ ತಾಯಿಯನ್ನು ಕರೆತಂದಿದ್ದ ದೇವ್ ಪಟೇಲ್

ಆಸ್ಕರ್ ಅಂಗಳಕ್ಕೆ ತಾಯಿಯನ್ನು ಕರೆತಂದಿದ್ದ ದೇವ್ ಪಟೇಲ್

Posted By:
Subscribe to Filmibeat Kannada

ಆಸ್ಕರ್ ನಂಥ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯುವ ಉತ್ಕಟ ಸಂತೋಷವನ್ನು ತೋರಿಸಲೆಂದು, ಸ್ಲಮ್ ಡಾಗ್ ಮಿಲಿಯನೇರ್ ಖ್ಯಾತಿ ದೇವ್ ಪಟೇಲ್ ಅವರು ಲಂಡನ್ ನಿಂದ ಲಾಸ್ ಏಂಜಲಿಸ್‌ಗೆ ತಮ್ಮ ತಾಯಿಯನ್ನು ಕರೆತಂದಿದ್ದರು. ಆದರೆ, ಅವರಿಗೆ ನಿರಾಶೆ ಕಾದಿತ್ತು.

ಅಲ್ಲದೆ, ಭಾರತದ ಮೂಲಕ ಓರ್ವ ವ್ಯಕ್ತಿ ನಟನೆಯಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುವುದರಿಂದ ಮತ್ತೆ ವಂಚಿತರಾಗಿದ್ದಾರೆ. 'ಗಾಂಧಿ' ಚಿತ್ರಕ್ಕೆ ಬೆನ್ ಕಿಂಗ್‌ಸ್ಲೆ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದಕ್ಕಿತ್ತಾದರೂ ಅವರೂ ಪೂರ್ಣ ಪ್ರಮಾಣದ ಭಾರತೀಯನಾಗಿರಲಿಲ್ಲ.[LIVE: ಆಸ್ಕರ್ 2017 : ಜಂಗಲ್ ಬುಕ್ ಚಿತ್ರಕ್ಕೂ ಒಂದು ಪ್ರಶಸ್ತಿ]

Oscars 2017: Dev Patel Loses Oscar Battle To Mahershala Ali From Moonlight

ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ದೇವ್ ಪಟೇಲ್ (ಲಯನ್) ಅವರ ಜೊತೆ ಹೆಲ್ ಆರ್ ಹೈ ವಾಟರ್ ಚಿತ್ರದ ಜೆಫ್ ಬ್ರಿಜ್, ನಾಕ್ಚರ್ನಲ್ ಎನಿಮಲ್ಸ್ ಚಿತ್ರದ ಮೈಕಲ್ ಶನೋನ್, ಮ್ಯಾಂಚೆಸ್ಟರ್ ಬೈ ದಿ ಸೀ ಚಿತ್ರದ ಲುಕಾಸ್ ಹೆಜಸ್ ಮತ್ತು ಮೂನ್ ಲೈಟ್ ಚಿತ್ರದ ಮೆಹರ್ಶಲಾ ಅಲಿ ಅವರೊಂದಿಗೆ ನಾಮಿನೇಟ್ ಆಗಿದ್ದರು.

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ, ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೇವ್ ಪಟೇಲ್ ಕೈಯಿಂದ ನುಸುಳಿಕೊಂಡು ಮೆಹರ್ಶಲಾ ಅಲಿ ಅವರ ಕೈ ಸೇರಿದೆ. ಮೆಹರ್ಶಲಾ ಅಲಿ, ಆಸ್ಕರ್ ಪಡೆದ ಮೊದಲ ಮುಸ್ಲಿಂ ನಟ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಪ್ರಶಸ್ತಿ ಕೈತಪ್ಪಿದ್ದರೂ ವಿಚಲಿತರಾಗದ ದೇವ್ ಪಟೇಲ್, ಪ್ರತಿಭಾವಂತ ನಟ ಮೆಹರ್ಶಲಾ ಅಲಿ ಅವರಿಗೆ ಪ್ರಶಸ್ತಿ ಘೋಷಿಸಿದಾಗ, ಅವರನ್ನು ಮನಃಪೂರ್ವಕವಾಗಿ ಅಭಿನಂದಿಸಿ, ಹುರಿದುಂಬಿಸುತ್ತಿದ್ದರು.

ಲಾಸ್ ಏಂಜಲಿಸ್ ನ ಡಾಲ್ಬಿ ಥಿಯೇಟರ್ಸ್ ನಲ್ಲಿ ನಡೆಯುತ್ತಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರತಿಮೆಯನ್ನು ಹಿಡಿದ ಮೆಹರ್ಶಲಾ ಅಲಿ ಭಾವುಕರಾದರು. ಈ ಪ್ರಶಸ್ತಿಯನ್ನು ಅವರು ತಮ್ಮ ಶಿಕ್ಷಕರಿಗೆ ಅರ್ಪಿಸಿದರು. "ಈ ಪ್ರಶಸ್ತಿ ದಕ್ಕಿದ್ದಕ್ಕಾಗಿ ನಾನು ನನ್ನ ಶಿಕ್ಷಕರಿಗೆ ಧನ್ಯವಾದ ಹೇಳುತ್ತೇನೆ" ಎಂದು ಭಾವುಕರಾಗಿ ನುಡಿದರು.

ಇನ್ನೂ ಅಧ್ಯಯನ ಮಾಡುತ್ತಿರುವ ಹೆಂಡತಿಗೆ, ಕೇವಲ ಮೂರು ದಿನಗಳ ಹಿಂದೆ ಮಗಳನ್ನು ಪಡೆದ ಮೆಹರ್ಶಲಾ ಅಲಿ ಅವರು ಧನ್ಯವಾದ ಅರ್ಪಿಸಿದರು. ಒಬ್ಬ ಅಪ್ಪಟ ಸೈನಿಕನಂತೆ ನನಗೆ ಬೆಂಬಲ ನೀಡಿದ ಹೆಂಡತಿಗೆ ಧನ್ಯವಾದ ಎಂದು ಅಲಿ ಗದ್ಗಿತರಾದರು.

English summary
Celebrated British actor of Indian-origin loses the Oscar battle for the Best supporting actor to the talented American actor Mahershala Ali for his film Moonlight.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada