twitter
    For Quick Alerts
    ALLOW NOTIFICATIONS  
    For Daily Alerts

    ಆಸ್ಕರ್‌ಗೆ ಆಯ್ಕೆಯಾಗಿದ್ದ ಸಿನಿಮಾವನ್ನೇ ಬ್ಯಾನ್ ಮಾಡಿದ ಪಾಕಿಸ್ತಾನ! ಕಾರಣ?

    |

    ಪಾಕಿಸ್ತಾನದ 'ಜೋಯ್‌ಲ್ಯಾಂಡ್' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಸೆನ್ಸಾರ್‌ನಿಂದ ಪ್ರಮಾಣ ಪತ್ರ ಪಡೆದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಅಲ್ಲದೆ, ಇದಕ್ಕೂ ಮುನ್ನ ಹಲವು ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಂಸೆಗಳಿಸಿಕೊಂಡಿತ್ತು. ಆಸ್ಕರ್‌ಗೆ ಪಾಕಿಸ್ತಾನದಿಂದ ಅಧಿಕೃತವಾಗಿ ಆಯ್ಕೆ ಸಹ ಆಗಿತ್ತು. ಹಾಗಿದ್ದಾಗಿಯೂ ಪಾಕಿಸ್ತಾನ ಸರ್ಕಾರ ಈ ಸಿನಿಮಾವನ್ನು ಬ್ಯಾನ್ ಮಾಡಿದೆ.

    ಮಂಗಳಮುಖಿಯೊಟ್ಟಿಗೆ ಯುವಕನೊಬ್ಬ ಪ್ರೀತಿಯಲ್ಲಿ ಬೀಳುವ ಕತೆಯನ್ನು 'ಜಾಯ್‌ಲ್ಯಾಂಡ್' ಸಿನಿಮಾ ಒಳಗೊಂಡಿದೆ. ಮಂಗಳಮುಖಿಯರ ಜೀವನ, ಸಮಾಜದಲ್ಲಿ ಅವರೆಡೆಗಿನ ತಿರಸ್ಕಾರ ಭಾವ, ಅವರ ಜೀವನ, ಅವರ ಭಾವನೆಗಳು ಇನ್ನಿತರೆಗಳ ಅಭಿವ್ಯಕ್ತಿ ಸಿನಿಮಾದಲ್ಲಿ ಮಾಡಲಾಗಿದೆ. ಆದರೆ ಇದೇ ಕಾರಣಕ್ಕೆ ಪಾಕ್ ಸರ್ಕಾರ ಈ ಸಿನಿಮಾವನ್ನು ಬ್ಯಾನ್ ಮಾಡಿದೆ.

    ಸಿನಿಮಾ, ಇಸ್ಲಾಂ ಕಾನೂನಿಗೆ ವಿರುದ್ಧವಾಗಿದೆ ಎಂದ ಸರ್ಕಾರ

    ಸಿನಿಮಾ, ಇಸ್ಲಾಂ ಕಾನೂನಿಗೆ ವಿರುದ್ಧವಾಗಿದೆ ಎಂದ ಸರ್ಕಾರ

    ಸಿನಿಮಾವು ಇಸ್ಲಾಂ ಕಾನೂನಿಗೆ ವಿರುದ್ಧವಾಗಿದೆ ಅಲ್ಲದೆ, ಸಿನಿಮಾದ ಕತೆಯು ಸಾಮಾಜಿಕ ಮೌಲ್ಯ, ಸಭ್ಯತೆ ಮತ್ತು ನೈತಿಕತೆಯ ಎಲ್ಲೆಗಳನ್ನು ಮೀರಿದ ವಿಷಯಗಳನ್ನು ಹೊಂದಿದೆ ಎಂದು ಆರೋಪಿಸಿ, ಪಾಕಿಸ್ತಾನದ ಮಾಹಿತಿ ಮತ್ತು ಪ್ರಸರಣ ಇಲಾಖೆಯು ಸಿನಿಮಾವನ್ನು ಬಹಿರಂಗ ಪ್ರದರ್ಶನದಿಂದ ರದ್ದು ಮಾಡಿದೆ. ಈ ಸಿನಿಮಾವು ಆಗಸ್ಟ್ 17 ರಂದೇ ಪಾಕಿಸ್ತಾನಿ ಸೆನ್ಸಾರ್‌ ಬೋರ್ಡ್‌ ಮುಂದೆ ಪ್ರದರ್ಶಿತಗೊಂಡು ಸಾರ್ವಜನಿಕ ವೀಕ್ಷಣೆಗೆ ಅರ್ಹ ಎಂದು ಪ್ರಮಾಣ ಪತ್ರ ಪಡೆದಿತ್ತು. ಆದರೆ ಕೆಲವು ಸಂಪ್ರದಾಯವಾದಿಗಳು, ಕಟ್ಟರ್ ಧರ್ಮೀಯವಾದಿಗಳ ವಿರೋಧ ವ್ಯಕ್ತವಾದ ಕಾರಣ ಇದೀಗ ಸಿನಿಮಾವನ್ನು ರದ್ದು ಮಾಡಲಾಗಿದೆ.

    ಹಲವು ದೂರುಗಳು ಬಂದಿದ್ದವೆಂದ ಪಾಕ್ ಸರ್ಕಾರ

    ಹಲವು ದೂರುಗಳು ಬಂದಿದ್ದವೆಂದ ಪಾಕ್ ಸರ್ಕಾರ

    ಸಿನಿಮಾದ ಸಾರ್ವಜನಿಕ ವೀಕ್ಷಣೆಯನ್ನು ರದ್ದು ಮಾಡಿರುವ ಬಗ್ಗೆ ನವೆಂಬರ್ 11 ರಂದು ಆದೇಶ ಹೊರಡಿಸಿರುವ ಪಾಕ್ ಸರ್ಕಾರ, ''ಸಿನಿಮಾದಲ್ಲಿ ಆಕ್ಷೇಪಾರ್ಹ ವಿಷಯಗಳು, ಸನ್ನಿವೇಶಗಳು ಇವೆ. ಸಿನಿಮಾದ ಆಶಯವು ನಮ್ಮ ಸಾಮಾಜಿಕ ಮೌಲ್ಯಗಳಿಗೆ ವಿರುದ್ಧವಾಗಿದೆ. ಸಾಮಾಜಿಕ ನೈತಿಕತೆಯನ್ನು, ಆದರ್ಶವನ್ನು ಪ್ರಶ್ನೆ ಮಾಡುವಂತಿದೆ ಮತ್ತು ಸಭ್ಯತೆಯ ಎಲ್ಲೆಯನ್ನು ಮೀರಿದೆ ಎಂದು ಹಲವು ಲಿಖಿತ ದೂರುಗಳು ಬಂದ ಹಿನ್ನೆಲೆಯಲ್ಲಿ ಸಿನಿಮಾದ ಪ್ರದರ್ಶನವನ್ನು ರದ್ದು ಮಾಡಲಾಗಿದೆ'' ಎಂದು ಆದೇಶದಲ್ಲಿ ಹೇಳಿದೆ.

    ಅಧಿಕೃತವಾಗಿ ಆಸ್ಕರ್‌ಗೆ ಆಯ್ಕೆ ಆಗಿತ್ತು

    ಅಧಿಕೃತವಾಗಿ ಆಸ್ಕರ್‌ಗೆ ಆಯ್ಕೆ ಆಗಿತ್ತು

    ಸಿನಿಮಾವು ನವೆಂಬರ್ 18 ರಂದು ಪಾಕಿಸ್ತಾನದಲ್ಲಿ ಬಿಡುಗಡೆ ಆಗಬೇಕಿತ್ತು. ಅದಕ್ಕೆ ಮುನ್ನ ಕೆಲವು ಸಿನಿಮೋತ್ಸವಗಳಲ್ಲಿ ಸಿನಿಮಾ ಪ್ರದರ್ಶನವಾಗಿತ್ತು. ಪಾಕಿಸ್ತಾನದಿಂದ ಅಧಿಕೃತವಾಗಿ 2023 ರ ಆಸ್ಕರ್‌ಗೆ ಸಹ ಆಯ್ಕೆ ಆಗಿದೆ. ಈ ಕಾರಣಕ್ಕೆ ಪಾಕಿಸ್ತಾನಕ್ಕೆ 'ಜೋಯ್‌ಲ್ಯಾಂಡ್' ಹೆಮ್ಮೆಯ ಸಿನಿಮಾ ಆಗಬೇಕಿತ್ತು ಆದರೆ ಅದೇ ಸಿನಿಮಾವನ್ನು ಪಾಕ್ ಸರ್ಕಾರ ಬ್ಯಾನ್ ಮಾಡುವ ಮೂಲಕ ತಮ್ಮದು ಹೊಸ ಆಲೋಚನೆಗಳಿಗೆ ಪ್ರೋತ್ಸಾಹ ನೀಡದ ಧರ್ಮಾಂಧ ಸರ್ಕಾರ ಎಂಬುದನ್ನು ಸಾಬೀತುಪಡಿಸಿದೆ.

    ಸಿನಿಮಾದ ಕತೆ ಏನು?

    ಸಿನಿಮಾದ ಕತೆ ಏನು?

    'ಜೋಯ್‌ಲ್ಯಾಂಡ್' ಸಿನಿಮಾದ ಕತೆ ಭಿನ್ನವಾಗಿದೆ. ಸಿನಿಮಾದ ಒಂದು ದೇಶಪ್ರೇಮಿ ಕುಟುಂಬ ಇರುತ್ತದೆ. ಆ ಕುಟುಂಬವು ಗಂಡು ಸಂತಾನಕ್ಕಾಗಿ ಕಾತರವಾಗಿ ಕಾಯುತ್ತಿರುತ್ತದೆ. ಕೊನೆಗೆ ಆ ಕುಟುಂಬದಲ್ಲೊಂದು ಗಂಡು ಸಂತಾನ ಆಗುತ್ತದೆ. ಆತ ಒಮ್ಮೆ ಕದ್ದು ಮುಚ್ಚಿ ಡ್ಯಾನ್ಸ್‌ ಬಾರ್‌ಗೆ ಹೋಗುತ್ತಾನೆ. ಅಲ್ಲಿ ಡ್ಯಾನ್ಸ್ ಮಾಡುವ ಮಹಿಳೆಯೊಬ್ಬಾಕೆ ಮೇಲೆ ಆತನಿಗೆ ಪ್ರೀತಿ ಉಂಟಾಗುತ್ತದೆ ಆದರೆ ಆಕೆ ಮಂಗಳಮುಖಿ ಆಗಿರುತ್ತಾಳೆ. ಆಕೆ ಹಾಗೂ ಆತ ಒಂದಾಗುತ್ತಾರಾ? ಅವರ ಪ್ರೀತಿಗೆ ಎದುರಾಗುವ ಅಡ್ಡಿ-ಆತಂಕ. ಅವರ ಪ್ರೀತಿಯನ್ನು ಸಮಾಜ ನೋಡುವ ರೀತಿ ಇತರೆಗಳ ಬಗ್ಗೆ ಸಿನಿಮಾ ಮಾತನಾಡುತ್ತದೆ.

    English summary
    Pakistan government bans movie Joyland which is official entry for Oscars 2023 from Pakistan.
    Monday, November 14, 2022, 14:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X