»   » ಪಾಪ್ ತಾರೆ ಶಕೀರಾ ಪಾಪು ಫಸ್ಟ್ ಲುಕ್ ಫೋಟೋ

ಪಾಪ್ ತಾರೆ ಶಕೀರಾ ಪಾಪು ಫಸ್ಟ್ ಲುಕ್ ಫೋಟೋ

Posted By:
Subscribe to Filmibeat Kannada
Shakira baby first look
ಐಶ್ವರ್ಯಾ ರೈ ಅವರಿಗೆ ಹೆಣ್ಣು ಮಗುವಾದಾಗ ಆಕೆಯ ಮಗುವಿನ ಒಂದೇ ಒಂದು ಫೋಟೋಗಾಗಿ ಛಾಯಾಗ್ರಾಹಕರು ತಿಪ್ಪರಲಾಗ ಹಾಕಿದರೂ ನಯಾಪೈಸಿ ಪ್ರಯೋಜನವಾಗಿರಲಿಲ್ಲ. ಆರಾಧ್ಯ ಬಚ್ಚನ್ ಫೋಟೋಗಾಗಿ ಆಕೆಯ ಚೊಚ್ಚಲ ಬರ್ತ್ ಡೇ ತನಕ ಕಾಯಬೇಕಾಯಿತು.

ಆದರೆ ಹಾಲಿವುಡ್ ನಲ್ಲಿ ಹಾಗಲ್ಲ ನೋಡಿ. ಮಗುವಾದ ನಾಲ್ಕೇ ದಿನಕ್ಕೆ ತಮ್ಮ ಮಗುವಿನ ಫೋಟೋಗಳನ್ನು ಮಾಧ್ಯಮಗಳಿಗೆ ರವಾನಿಸುತ್ತಾರೆ. ಈಗ ಪಾಪ್ ತಾರೆ ಶಕೀರಾ ಕೂಡ ತಮ್ಮ ಮಗುವಿನ ಫೋಟೋವನ್ನು ಬಹಿರಂಗಪಡಿಸಿದ್ದಾರೆ.

ಈ ಮಗುವಿನ ತಂದೆ ಶಕೀರಾ ಅವರ ಪ್ರಿಯತಮ ಗೆರಾರ್ಡ್ ಪಿಕ್ಯೂ. ಫೋಟೋದಲ್ಲಿ ತಂದೆ ಮಗುವನ್ನು ನೋಡಬಹುದು. ಮಗುವಾದ ಕೂಡಲೆ ಶಕೀರಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದರು. ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ ಯುನಿಸೆಫ್ ಮೂಲಕ ತಮ್ಮ ಮಗುವಿನ ಫೋಟೋವನ್ನು ಬಿಡುಗಡೆ ಮಾಡಿರುವುದು ವಿಶೇಷ.

ಶಕೀರಾ ಅವರಿಗೆ ಫೇಸ್ ಬುಕ್ ನಲ್ಲಿ 60 ದಶಲಕ್ಷ ಅಭಿಮಾನಿಗಳಿದ್ದಾರೆ ಎಂದರೆ ಆಕೆಯ ಜನಪ್ರಿಯತೆಯನ್ನು ಊಹಿಸಿ. ಸ್ಪಾನಿಷ್ ಫುಟ್ ಬಾಲ್ ಕ್ರೀಡಾಪಡುವಾಗಿರುವ ಗೆರಾರ್ಡ್ ಜೊತೆ ಕೆಲ ಕಾಲದಿಂದ ಶಕೀರಾ ಡೇಟಿಂಗ್ ಮಾಡುತ್ತಿದ್ದರು. ಅದರ ಫಲಿತಾಂಶವೇ ಮುದ್ದಾದ ಮಗು.

ಮಗುವಿಗೆ ಶಕೀರಾ ದಂಪತಿಗಳು ನಾಮಕರಣವನ್ನೂ ಮಾಡಿ ಮುಗಿಸಿದ್ದಾರೆ. ತಮ್ಮ ಮಗುವಿಗೆ ಮೀಲ್ಹನ್ (pronounced MEE-lahn) ಎಂದು ಹೆಸರಿಟ್ಟಿದ್ದಾರೆ. ಈ ಪದಕ್ಕೆ ಆತ್ಮೀಯ, ಎಲ್ಲರ ಪ್ರೀತಿಪಾತ್ರಕ್ಕೆ ಒಳಗಾದವನು ಎಂಬರ್ಥವಿದೆಯಂತೆ. ಸಂಸ್ಕೃತದಲ್ಲಾದರೆ 'ಸಂಘಟಿಸು' ಎಂಬ ಅರ್ಥವಿದೆ ಎಂದು ಸ್ವತಃ ಶಕೀರಾ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

English summary
Shakira, Pique's Baby Milan first look photo released. The Colombian and Spanish stars have shared the a picture of their newborn’s face with all their fans through the United Nations organization UNICEF that helps children worldwide, and for which the singer and her boyfriend have served as ambassadors for years. Pop star Shakira gave birth to a baby boy in a Barcelona hospital on Jan 22, 2013.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada