»   » ಮೈಕಲ್ ಜಾಕ್ಸನ್'ರ ಬಿಡುಗಡೆಯಾಗದ ಆಲ್ಬಂ ಹರಾಜಿಗೆ

ಮೈಕಲ್ ಜಾಕ್ಸನ್'ರ ಬಿಡುಗಡೆಯಾಗದ ಆಲ್ಬಂ ಹರಾಜಿಗೆ

Posted By:
Subscribe to Filmibeat Kannada

ಡ್ಯಾನ್ಸ್ ಮತ್ತು ಹಾಡುಗಳ ಮೂಲಕ ಪ್ರಪಂಚವನ್ನೇ ಗಮನಸೆಳೆದಿದ್ದ ಅಮೆರಿಕದ ಪಾಪ್ ತಾರೆ ಮೈಕಲ್ ಜಾಕ್ಸನ್ ಸಂಗೀತ ಪ್ರಿಯರನ್ನು ಅಗಲಿ 8 ವರ್ಷಗಳೇ ಕಳೆದಿವೆ. ಯಾರು ಇದುವರೆಗೂ ಕೇಳಿರದ 9 ಹಾಡುಗಳ ಆಲ್ಬಂ ಒಂದನ್ನು ಈ ತಿಂಗಳ ಅಂತ್ಯದಲ್ಲಿ ಹರಾಜು ಮಾಡುವ ಬಗ್ಗೆ ಮೂಲಗಳಿಂದ ತಿಳಿದಿದೆ.

ಇದುವರೆಗೂ ಬಿಡುಗಡೆಯಾಗದ ಮೈಕಲ್ ಜಾಕ್ಸನ್ ರವರ ರೇರ್ ಕಲೆಕ್ಷನ್ ಹಾಡುಗಳನ್ನು ಜುಲೈ 19 ರಂದು ನ್ಯೂಯಾರ್ಕ್ ಹರಾಜು ಮಳಿಗೆಯಲ್ಲಿ ಕನಿಷ್ಠ USD 50.000 ಕ್ಕೆ(ಸುಮಾರು ರೂ. 32 ಲಕ್ಷಕ್ಕಿಂತ ಹೆಚ್ಚು) ಬಿಡ್ ಮಾಡಲಾಗುತ್ತದೆ ಎನ್ನಲಾಗಿದೆ.

Pop Star Michael Jackson's unreleased album up for auction

ಬಿಡುಗಡೆಯಾಗದ ಮೈಕಲ್ ಜಾಕ್ಸನ್ ರವರ ಈ ಆಲ್ಬಂ ಮೇಲೆ 'Bible' ಎಂದು ಕೈಬರಹದಲ್ಲಿ ಬರೆಯಲಾಗಿದೆ. 12 ಪೂರ್ಣಗೊಂಡ ಟ್ರ್ಯಾಕ್‌ ಗಳನ್ನು ಹೊಂದಿದ್ದು, ಎಲ್ಲವನ್ನೂ ಪೂರ್ಣವಾಗಿ ಹಾಡಲಾಗಿದೆ ಎಂದು 'Rolling Stone' ವರದಿ ಮಾಡಿದೆ.

ಮೈಕಲ್ ಜಾಕ್ಸನ್ ರವರ ಆಲ್ಬಂ ಡಿಸ್ಕ್ ಉತ್ತಮ ಸ್ಥಿತಿಯಲ್ಲಿದ್ದು, ಅವರ ಕುಟುಂಬದೊಂದಿಗೆ ಹಲವು ವರ್ಷಗಳಿಂದ ಒಡನಾಟ ಹೊಂದಿರುವ ಅವರ ಆಪ್ತ ಸಹಾಯಕನ ಒಡೆತನದಲ್ಲಿ ಇದೆ. ಆಲ್ಬಂ ಹರಾಜು ಪ್ರಕ್ರಿಯೆ ಏರ್ಪಡಿಸಿರುವವರು 1 ಮಿಲಿಯನ್ ಡಾಲರ್ ಗೆ ಹರಾಜು ಆಗಬೇಕೆಂಬ ನಿರೀಕ್ಷೆ ಹೊಂದಿದ್ದಾರೆ. ಆದರೆ ಆಲ್ಬಂ ಖರೀದಿಸಿದವರು ಅನಂತರ ಅದರ ಹಾಡುಗಳನ್ನು ವಿತರಣೆ ಮಾಡುವ ಮತ್ತು ಮರು ಸೃಷ್ಟಿಸುವ ಹಕ್ಕುಗಳನ್ನು ಹೊಂದಿರುವುದಿಲ್ಲ ಎಂದು ತಿಳಿಸಲಾಗಿದೆ.

ಬಿಡುಗಡೆ ಆಗದ ಆಲ್ಬಂ ಜೊತೆಗೆ ಮೈಕಲ್ ರವರ ಕೆಲವು ವೈಯಕ್ತಿಕ ವಸ್ತುಗಳನ್ನು ಸಹ ಹರಾಜಿಗೆ ಇಡಲಾಗುತ್ತದೆಯಂತೆ. ಅವುಗಳಲ್ಲಿ ಕೈಯಿಂದ ಚಿತ್ರಿಸಿದ ಭಾವಚಿತ್ರಗಳು, ಬಟ್ಟೆಗಳು, ಗೊಂಬೆಗಳು ಇರಲಿವೆಯಂತೆ.

English summary
Pop Star Michael Jackson's unreleased album up for auction.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada